ಗೋಣಿಕೊಪ್ಪ ವರದಿ, ಏ. ೮: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಮೇ ೧ ರಿಂದ ಮಡಿಕೇರಿ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ (ಲೆದರ್‌ಬಾಲ್) ಟೂರ್ನಿಗೆ ಆಯೋಜಿಸಿದ್ದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ೧೯೫ ಆಟಗಾರರ ಹರಾಜು ನಡೆಯಿತು. ೧೦ ತಂಡಗಳ ಮಾಲೀಕರು ಆಟಗಾರರ ಖರೀದಿ ಮಾಡಿದರು.

ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು. ಕೊಡವ ಟ್ರೆöÊಬ್, ಕೂರ್ಗ್ ಬ್ಲಾಸ್ರ‍್ಸ್, ಕೂರ್ಗ್ ಯುನೈಟೆಡ್, ಟೀಂ ಲೆವರೇಜ್, ವೈಲ್ಡ್ ಫ್ಲವರ್, ಕೊಡವ ವಾರಿರ‍್ಸ್, ಅಂಜಿಕೇರಿ ನಾಡ್, ರಾಯಲ್ ಟೈರ‍್ಸ್, ಎಂಟಿಬಿ ರಾಯಲ್ಸ್ ಹಾಗೂ ಪ್ರಗತಿ ಕ್ರಿಕೆರ‍್ಸ್ ತಂಡಗಳ ಮಾಲೀಕರು ಭಾಗವಹಿಸಿದ್ದರು.

ಕೂರ್ಗ್ ಕ್ರಿಕೆಟ್ ಫೌಂಡೇಷನ್ ಪ್ರಮುಖರಾದ ಪೊರುಕೊಂಡ ಸುನಿಲ್, ಮಡ್ಲಂಡ ಪೆಮ್ಮು, ಡಾ. ಚೆರುಮಂದAಡ ಸೋಮಣ್ಣ, ಪಾಲಚಂಡ ಜಗನ್ ಉತ್ತಪ್ಪ, ಚಂಡೀರ ರಚನ್, ಬಲ್ಲಂಡ ರೇಣಾ ದೇವಯ್ಯ, ಸುಮಿತ್ ವೋಹ್ರಾ, ಪೊರುಕೊಂಡ ಅನಿಲ್, ಕುಲ್ಲೇಟಿರ ಶಾಂತ ಕಾಳಪ್ಪ, ಟಿ. ಬಿ. ಕಿರಣ್, ಮಣವಟ್ಟೀರ ಲಿಕಿತಾ ರಾಯ್, ಪವಿತ್ರ ಉಪಸ್ಥಿತರಿದ್ದರು.