ಪೊನ್ನಂಪೇಟೆ, ಏ. ೮: ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಸಮೀಪದ ದೇವಕಾಲೋನಿ ಎಂಬ ಸ್ಥಳದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊನ್ನಂಪೇಟೆ ಪೊಲೀಸರು ಇಸ್ಪೀಟ್ ಆಟದಲ್ಲಿ ತೊಡಗಿಕೊಂಡಿದ್ದ ೧೯ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತಾ.೭ ರಂದು ರಾತ್ರಿ ವೇಳೆ ದೇವಕಾಲೋನಿಯ ವಾಲಿಬಾಲ್ ಕೋರ್ಟ್ ನಲ್ಲಿ ಕ್ಯಾಂಡಲ್ ಮತ್ತು ಟಾರ್ಚ್ ಬೆಳಕಿನಲ್ಲಿ ಇಸ್ಪೀಟ್ ಆಡುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ರೂ.೧೨, ೧೪೦ ನಗದು, ಎರಡು ವ್ಯಾನ್, ೨ ಆಟೋ, ೨ ಬೈಕ್, ೧ ಸ್ಕೂಟರ್ ಸೇರಿದಂತೆ ಒಟ್ಟು ೭ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ನವೀನ್, ಕ್ರೆöÊಂ ಸಬ್ ಇನ್ಸ್ಪೆಕ್ಟರ್ ಶ್ರೀಧರ್, ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ಮಂಜುನಾಥ್, ಪ್ರಸನ್ನ, ವೇಣುಗೋಪಾಲ್, ನಟರಾಜ್, ಬಾಳಪ್ಪ, ಸಂತೋಷ್, ಭೀಮಜ್ಜ, ಮುತ್ತುರಾಜ್, ರವಿಸಿಂಗ್,ರೂಪಿತ್, ಪ್ರಮೀಳ, ಭಾಗವಹಿಸಿದ್ದರು.