ನಾಪೋಕ್ಲು, ಏ. ೮: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್ ಹಾಕಿಯ ೧೦ನೇ ದಿನದ ಪಂದ್ಯಾಟದಲ್ಲಿ ಮುಕ್ಕಾಟಿರ (ಬೋಂದ) ಮತ್ತು ಬಿದ್ದಾಟಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡದ ಪರ ವಸಂತ್ ಹ್ಯಾಟ್ರಿಕ್ ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ಬಿದ್ದಂಡ, ಚೋಕಿರ, ಕಾಂಡೆರ, ಮುಕ್ಕಾಟಿರ(ಬೋಂದ), ಅಳಮೇಂಗಡ, ಮೇಕೇರಿರ, ಐನಂಡ, ಕಂಬೆಯAಡ, ಮಂದನೆರವAಡ, ಮುರುವಂಡ, ಚೌರೀರ(ಹೊದ್ದೂರು), ಮಲ್ಚಿರ, ಐಚೆಟ್ಟಿರ, ಚಂಗೇಟಿರ, ಮುದ್ದಂಡ, ಚೇಂದಿರ, ಕೊಲ್ಲಿರ, ಅಪ್ಪನೆರವಂಡ, ಚಂಗುಲAಡ ತಂಡಗಳು ಮುಂದಿನ ಸುತ್ತು ಪ್ರವೇಶಿದವು.
ಮೈದಾನ ೧ರಲ್ಲಿ ನಡೆದ ಚೋಳಂಡ ಮತ್ತು ಬಿದ್ದಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಬಿದ್ದಂಡ ತಂಡವು ಚೋಳಂಡ ತಂಡವನ್ನು ೩-೧ ಗೋಲಿನ ಅಂತರದಿAದ ಮಣಿಸಿತು. ಬಿದ್ದಂಡ ತಂಡದ ಪರ ಕೀರ್ತಿ, ಗ್ಯಾನ್ ತಿಮ್ಮಯ್ಯ, ಭರತ್ ತಲಾ ಒಂದೊAದು ಗೋಲು ದಾಖಲಿಸಿದರೆ, ಚೋಳಂಡ ತಂಡದ ಪರ ವರುಣ್ ಗಣಪತಿ ಒಂದು ಗೋಲು ದಾಖಲಿಸಿದರು. ಚೋಕಿರ ಮತ್ತು ಚೆಯ್ಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೋಕಿರ ತಂಡವು ಚೆಯ್ಯಂಡ ತಂಡವನ್ನು ೧-೦ ಗೋಲಿನ ಅಂತರದಿAದ ಸೋಲಿಸಿತು.
ಚೋಕಿರ ತಂಡದ ಪರ ರೋಶನ್ ಒಂದು ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಕಾಂಡೆರ ಮತ್ತು ಮಾಣಿರ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಡೆರ ತಂಡವು ಮಾಣಿರ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ತಂಡದ ಪರ ಕಾವೇರಪ್ಪ, ತಿಮ್ಮಯ್ಯ, ರಜನ್ ತಲಾ ಒಂದೊAದು ಗೋಲು ದಾಖಲಿಸಿದರು. ಮುಕ್ಕಾಟಿರ (ಬೋಂದ) ಮತ್ತು ಬಿದ್ದಾಟಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಬಿದ್ದಾಟಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿತು. ತಂಡದ ಪರ ವಸಂತ್ ಹ್ಯಾಟ್ರಿಕ್ ಗೋಲು, ಉತ್ತಪ್ಪ ಒಂದು ಗೋಲು ದಾಖಲಿಸಿದರು.
ಬಟ್ಟಿಯಂಡ ಮತ್ತು ಅಳಮೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಅಳಮೇಂಗಡ ತಂಡವು ಬಟ್ಟಿಯಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ತಂಡದ ಪರ ಅಗಸ್ತö್ಯ, ರೋಶನ್, ತಿಮ್ಮಯ್ಯ, ಸೋಮಣ್ಣ ತಲಾ ಒಂದೊAದು ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಕಾಂಗಿರ ಮತ್ತು ಮೇಕೇರಿರ ತಂಡಗಳ ನಡುವಿನ ಪಂದ್ಯದಲ್ಲಿ ಮೇಕೇರಿರ ತಂಡವು ಕಾಂಗಿರ ತಂಡವನ್ನು ೬-೨ ಗೋಲುಗಳ ಅಂತರದಿAದ ಮಣಿಸಿತು.
ಮೇಕೇರಿರ ತಂಡದ ಪರ ಶೈನಿ ತಂಗಮ್ಮ, ನೇಹಲ್ ತಿಮ್ಮಯ್ಯ ತಲಾ ಎರಡು ಗೋಲು, ನಿತಿನ್ ತಿಮ್ಮಯ್ಯ, ಅಭಿನವ್ ಗಣಪತಿ ತಲಾ ಒಂದು ಗೋಲು ದಾಖಲಿಸಿದರೆ, ಕಾಂಗಿರ ತಂಡದ ಪರ ಆಕಾಶ್, ಉತ್ತಪ್ಪ ತಲಾ ಒಂದೊAದು ಗೋಲು ದಾಖಲಿಸಿದರು. ಚಂಗುಲAಡ ಮತ್ತು ಪಳೆಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಂಗುಲAಡ ತಂಡವು ಪಳೆಯಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಮಣಿಸಿತು. ತಂಡದ ಪರ ಗೌತಮ್, ವಿನಯ್ ಪೊನ್ನಣ್ಣ, ದಿಶನ್ ಗಣಪತಿ, ಅಯ್ಯಪ್ಪ ತಲಾ ಒಂದು ಗೋಲು ದಾಖಲಿಸಿದರು.
ಮೈದಾನ ೨ರಲ್ಲಿ ನಡೆದ ಐನಂಡ ಮತ್ತು ಚೇರಂಡ ತಂಡದ ನಡುವಿನ ಮೊದಲ ಪಂದ್ಯದಲ್ಲಿ ಐನಂಡ ತಂಡವು ಚೇರಂಡ ತಂಡವನ್ನು ೬-೧ ಗೋಲುಗಳ ಅಂತರದಿAದ ಮಣಿಸಿತು. ಐನಂಡ ತಂಡದ ಪರ ನಿವಿನ್ ನಾಚಪ್ಪ, ನಿರನ್ ಕುಶಾಲಪ್ಪ ತಲಾ ಎರಡು ಗೋಲು, ಲಾಲಾ ಅಯ್ಯಣ್ಣ, ಆಕಾಶ್ ಪೂವಣ್ಣ ತಲಾ ಒಂದು ಗೋಲು ದಾಖಲಿಸಿದರೆ, ಚೇರಂಡ ತಂಡದ ಪರ ನಯನ್ ಮಾದಪ್ಪ ಒಂದು ಗೋಲು ದಾಖಲಿಸಿದರು.
ಕಂಬೆಯAಡ ಮತ್ತು ಕೋಳುಮಾಡಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಬೆಯAಡ ತಂಡವು ಕೋಳುಮಾಡಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಕಂಬೆಯAಡ ತಂಡದ ಪರ ಲಿಖಿತ್ ತಿಮ್ಮಯ್ಯ ಎರಡು, ರಕ್ಷತ್ ತಮ್ಮಯ್ಯ, ಕಾರ್ಯಪ್ಪ ತಲಾ ಒಂದೊAದು ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಮಂದನೆರವAಡ ಮತ್ತು ಕೋಲತಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಂದನೆರವAಡ ತಂಡವು ಕೋಲತಂಡ ತಂಡವನ್ನು ೫-೦ ಗೋಲುಗಳ ಭಾರೀ ಅಂತರದಿAದ ಮಣಿಸಿ ವಿಜಯ ಪತಾಕೆ ಹಾರಿಸಿತು.
ತಂಡದ ಪರ ಪ್ರಗತ್ ಕಾರ್ಯಪ್ಪ ಎರಡು ಗೋಲು ದಾಖಲಿಸಿದರೆ, ನಿತಿನ್ ಕುಶಾಲಪ್ಪ, ದಿನೇಶ್ ಬೋಪಣ್ಣ, ಸಾಗರ್ ಕುಶಾಲಪ್ಪ ತಲಾ ಒಂದೊAದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಪೋರಂಗಡ ಮತ್ತು ಮುರುವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುರುವಂಡ ತಂಡವು ಪೋರಂಗಡ ತಂಡವನ್ನು ೪-೦ ಗೋಲಿನ ಅಂತರದಿAದ ಸೋಲಿಸಿತು. ಮುರುವಂಡ ತಂಡದ ಪರ ಕಾರ್ಯಪ್ಪ, ಚರಣ್ ಪೊನ್ನಪ್ಪ, ಪ್ರತೀಕ್ ಪೂವಣ್ಣ, ಶಶಾಂಕ್ ಅಪ್ಪಣ್ಣ ತಲಾ ಒಂದೊAದು ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಚೌರೀರ (ಹೊದ್ದೂರು) ಮತ್ತು ಅಯ್ಯನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೌರೀರ ತಂಡವು ಅಯ್ಯನೆರವಂಡ ತಂಡವನ್ನು ೫-೦ ಗೋಲುಗಳ ಭಾರೀ ಅಂತರದಿAದ ಸೋಲಿಸಿತು.
ತಂಡದ ಪರ ಧ್ಯಾನ್ ತಿಮ್ಮಯ್ಯ ಎರಡು ಗೋಲು ದಾಖಲಿಸಿದರೆ, ಧನುಶ್ ನಾಣಯ್ಯ, ಸೂರಜ್ ಚಿಣ್ಣಪ್ಪ, ರೋಹನ್ ಪೊನ್ನಪ್ಪ ಒಂದೊAದು ಗೋಲು ದಾಖಲಿಸಿದರು. ಮಲ್ಚಿರ ಮತ್ತು ಐತಿಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಚಿರ ತಂಡವು ಐತಿಚಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಮಲ್ಚಿರ ತಂಡದ ಪರ ಶಾನ್ ಎರಡು ಗೋಲು ದಾಖಲಿಸಿದರೆ, ಐತಿಚಂಡ ತಂಡದ ಪರ ಸಜನ್ ವಸಂತ್ ಒಂದು ಗೋಲು ದಾಖಲಿಸಿದರು.
ಮೈದಾನ ೩ರಲ್ಲಿ ನಡೆದ ಮಾತಂಡ ಮತ್ತು ಐಚೆಟ್ಟಿರ ತಂಡಗಳ ನಡುವಿನ ಮೊದಲ ಪಂದ್ಯ ಡ್ರಾ ಆಯಿತು. ಐಚೆಟ್ಟಿರ ಪರ ಹೃತಿಕ್ ಪೂವಣ್ಣ, ಮಾತಂಡ ಪರ ಅಮೃತ್ ಕರುಂಬಯ್ಯ ಗೋಲು ಬಾರಿಸಿದರು. ಐಚೆಟ್ಟಿರ ತಂಡವು ಮಾತಂಡ ತಂಡವನ್ನು ಟೈ ಬ್ರೇಕರ್ನಲ್ಲಿ ೫-೪ ಗೋಲುಗಳ ಅಂತರದಿAದ ಮಣಿಸಿತು. ಮೊಳ್ಳೆರ ಮತ್ತು ಚಂಗೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಚಂಗೇಟಿರ ತಂಡವು ಮೊಳ್ಳೆರ ತಂಡವನ್ನು ೩-೨ ಗೋಲಿನ ಅಂತರದಿAದ ಸೋಲಿಸಿತು.
ಚಂಗೇಟಿರ ತಂಡದ ಪರ ಕಿರಣ್ ಅಪ್ಪಣ್ಣ ಎರಡು, ಕರುಣ್ ಒಂದು ಗೋಲು ದಾಖಲಿಸಿದರೆ, ಮೊಳ್ಳೆರ ತಂಡದ ಪರ ಪ್ರೀತನ್, ಶಿವ ಸೋಮಯ್ಯ ತಲಾ ಒಂದೊAದು ಗೋಲು ದಾಖಲಿಸಿದರು. ಮಚ್ಚಂಡ ಮತ್ತು ಮುದ್ದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುದ್ದಂಡ ತಂಡವು ಮಚ್ಚಂಡ ತಂಡವನ್ನು ೧-೦ ಗೋಲಿನ ಅಂತರದಿAದ ಸೋಲಿಸಿತು. ತಂಡದ ಪರ ರಂಜಿ ಪೊನ್ನಪ್ಪ ಒಂದು ಗೋಲು ದಾಖಲಿಸಿದರು.
ಮುಕ್ಕಾಟಿರ (ಮೂವತೊಕ್ಲು) ಮತ್ತು ಚೇಂದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೇಂದಿರ ತಂಡವು ಮುಕ್ಕಾಟಿರ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಚೇಂದಿರ ತಂಡದ ಪರ ಸಂದೇಶ್, ಪುನೀತ್ ಪೂವಣ್ಣ ತಲಾ ಒಂದೊAದು ಗೋಲು ದಾಖಲಿಸಿದರೆ, ಮುಕ್ಕಾಟಿರ ತಂಡದ ಪರ ಸಂಜು ಒಂದು ಗೋಲು ದಾಖಲಿಸಿದರು. ಕೊಲ್ಲಿರ ಮತ್ತು ಬೊಳಕಾರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಲ್ಲಿರ ತಂಡವು ಬೊಳಕಾರಂಡ ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿತು.
ಕೊಲ್ಲಿರ ತಂಡದ ಪರ ಅಯ್ಯಪ್ಪ ಎರಡು ಗೋಲು, ಲೇಖನ್ ಅಪ್ಪಚ್ಚು ಒಂದು ಗೋಲು ದಾಖಲಿಸಿದರೆ, ಬೊಳಕಾರಂಡ ತಂಡದ ಪರ ದರ್ಶನ್ ಮಾಚಯ್ಯ, ಶ್ರವಣ್ ಚಂಗಪ್ಪ ತಲಾ ಒಂದೊAದು ಗೋಲು ದಾಖಲಿಸಿದರು. ಪಾಲೆಕÀಂಡ ಮತ್ತು ಅಪ್ಪನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಪ್ಪನೆರವಂಡ ತಂಡವು ಪಾಲೆಕಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ತಂಡದ ಪರ ಚುಮ್ಮಿ ದೇವಯ್ಯ ಎರಡು ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು.
-ಪಿ.ವಿ.ಪ್ರಭಾಕರ್