ಚೆಯ್ಯಂಡಾಣೆ, ಏ. ೮: ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಕಡಿಯತ್ ನಾಡು ಪೊನ್ನೋಲ ಸಾರ್ಥಾವು ಬೈತೂರ್ ಕಾರ್ಯಾರು ಹಾಗೂ ಪುದಿಯೋದಿ ದೇವರ ಹಬ್ಬವು ತಾ. ೧೩ ರಿಂದ ೧೭ ರವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ತಾ. ೧೩ ರಂದು ಬೆಳಿಗ್ಗೆ ೯ ಗಂಟೆಗೆ ಪಡಿಞರಮ್ಮಂಡ ದೇವತಕ್ಕರ ಮನೆಯಿಂದ ಭಂಡಾರ ಆಗಮಿಸುವುದು, ೧೦ ಗಂಟೆಗೆ ಎತ್ತು ಪೋರಾಟ, ೧೨.೩೦ಕ್ಕೆ ಮಹಾಪೂಜೆ, ೧ ಗಂಟೆಗೆ ಅನ್ನದಾನ, ರಾತ್ರಿ ೮ ಗಂಟೆಗೆ ಅಂದಿ ಬೋಳಕ್, ೯ ಗಂಟೆಗೆ ತೆಂಗಿನಕಾಯಿ ಪೊರುವುದು, ನಂತರ ಮಹಾಪೂಜೆ ನಡೆಯಲಿದೆ.
ತಾ. ೧೪ ರಂದು ಬೆಳಿಗ್ಗೆ ೭.೩೦ಕ್ಕೆ ಕಣಿಪೂಜೆ, ೧೦ಕ್ಕೆ ವಿಶೇಷ ಪೂಜೆ, ೧೦.೩೦ಕ್ಕೆ ವಾರ್ಷಿಕ ಮಹಾಸಭೆ, ೧೨.೩೦ ಗಂಟೆಗೆ ಮಹಾಪೂಜೆ, ೨ ಗಂಟೆಗೆ ದೇವತಕ್ಕರ ಮನೆಗೆ ಭಂಡಾರ ಹೊರಡುವುದು,
ತಾ. ೧೬ ರಂದು ಬೆಳಿಗ್ಗೆ ೯ ಗಂಟೆಗೆ ಪುದಿಯೋದಿ ದೇವರಿಗೆ ಮೇಲೆರಿ ಸೌದೆ ಕಡಿಯುವುದು, ರಾತ್ರಿ ೭.೩೦ಕ್ಕೆ ದೇವತಕ್ಕರ ಮನೆಯಿಂದ ಭಂಡಾರ ಬರುವುದು, ೧೦.೩೦ಕ್ಕೆ ಮೊದಲ ತೋತ, ೧೧.೩೦ಕ್ಕೆ ಎರಡನೇ ತೋತ, ೧೨ ಗಂಟೆಗೆ ಮೆಲೆರಿ ಅಗ್ನಿ ಹಾಕುವುದು, ೧೨.೩೦ ಗಂಟೆಗೆ ಮೂರನೇ ತೋತ ನಡೆಯಲಿದೆ.
ತಾ. ೧೭ ರಂದು ಮುಂಜಾನೆ ೧.೩೦ ಗಂಟೆಗೆ ಬಿರಾಳಿ ತೆರೆ, ೩.೩೦ ಕ್ಕೆಪುದಿಯೋದಿ ತೆರೆ, ೮ ಗಂಟೆಗೆ ಭದ್ರಕಾಳಿ ತೆರೆ, ೧೧ ಗಂಟೆಗೆ ತಕ್ಕರ ಮನೆಗೆ ಭಂಡಾರ ಹಿಂದಿರುಗಲಾಗುವುದು ಎಂದು ಪ್ರಕಟಣೆ ತಿಳಿಸಿದೆ. - ಅಶ್ರಫ್