ಮಡಿಕೇರಿ, ಏ. ೭: ಮಳೆಗಾಗಿ ಕೊಡ್ಲಿಪೇಟೆ ಮಳೆಮಲ್ಲೇಶ್ವರ ದೇವಾಲಯದಲ್ಲಿ ವೀರಶೈವ ಸಮಾಜ ಬಾಂಧವರು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಹೇಮಾವತಿ ಹೊಳೆ ದಡದಲ್ಲಿರುವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರೊಟ್ಟಿ ಮತ್ತು ಕಾರ್ಬೇಳೆ ಪ್ರಸಾದ ಅರ್ಪಿಸಲಾಯಿತು. ಜೊತೆಗೆ ಅಷ್ಟೋತ್ತರ, ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಸಲಾಯಿತು. ಈ ಸಂದರ್ಭ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ವರಪ್ರಸಾದ್, ಉಪಾಧ್ಯಕ್ಷ ಹೆಚ್.ಸಿ. ಯತೀಶ್ ಕುಮಾರ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಕೆ. ಯತೀಶ್, ಉದ್ಯಮಿ ಹೆಚ್.ಜೆ. ಪ್ರವೀಣ್, ಕ.ಸಾ.ಪ. ಹೋಬಳಿ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ ಹಾಜರಿದ್ದರು.