ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಏ. ೬: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಮಾದರಿಯಲ್ಲೇ ೨೦೦೦ನೇ ಇಸವಿಯಿಂದ ಮತ್ತೊಂದು ಭಾಗವಾಗಿ ವಾರ್ಷಿಕವಾಗಿ ನಡೆಯುತ್ತಿರುವ ಕೌಟುಂಬಿಕ ಕ್ರಿಕೆಟ್ ಉತ್ಸವವೂ ಬೇಸಿಗೆ ಸಂದರ್ಭದಲ್ಲಿನ ಒಂದು ಆಕರ್ಷಣೆಯಾಗಿದೆ. ಕ್ರಿಕೆಟ್ ಉತ್ಸವವೂ ೨೧ ವರ್ಷಗಳನ್ನು ಪೂರೈಸಿದ್ದು ಈ ಬಾರಿ ೨೨ನೇ ವರ್ಷದ ಪಂದ್ಯಾವಳಿ ಜರುಗಲಿದೆ.
ಬಾಳೆಲೆ ವಿಭಾಗದ ಅರಮಣಮಾಡ ಕುಟುಂಬಸ್ಥರು ಈ ವರ್ಷದ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಬಾಳೆಲೆಯಲ್ಲಿ ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಇದೂ ಸೇರಿದಂತೆ ಬಾಳೆಲೆಯಲ್ಲಿ ಕೌಟುಂಬಿಕ ಕ್ರಿಕೆಟ್ ಉತ್ಸವ ೬ನೇ ಬಾರಿಗೆ ಜರುಗುತ್ತಿದೆ. ಈ ಹಿಂದೆ ಬಾಳೆಲೆಯಲ್ಲಿ ಕಾಂಡೆರ್ ಕಪ್, ಬಲ್ಲಿಮಾಡ ಕಪ್, ಅಡ್ಡೇಂಗಡ ಕಪ್, ಕೊಕ್ಕೆಂಗಡ ಕಪ್, ಅಳಮೇಂಗಡ ಕಪ್ ಅನ್ನು ಆಯಾ ಕುಟುಂಬದವರು ಯಶಸ್ವಿಯಾಗಿ ಆಯೋಜಿಸಿದ್ದರು. ಇದೀಗ ಬಾಳೆಲೆಯಲ್ಲಿ ಮತ್ತೊಮ್ಮೆ ಅರಮಣಮಾಡ ಕಪ್-೨೦೨೪ ಮೂಲಕ ಕ್ರಿಕೆಟ್ನ ಸಂಭ್ರಮ ಮೂಡಿಬರಲಿದ್ದು, ಆಯೋಜಕರು ಇದರ ಸಿದ್ಧತೆಯಲ್ಲಿ ತೊಡಗಿದ್ದಾರೆ. ಏ.೨೧ ರಿಂದ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಕೊಡವ ಕ್ರಿಕೆಟ್ ಅಕಾಡೆಮಿಯ ಸಹಯೋಗದೊಂದಿಗೆ ನಡೆಯಲಿದೆ.
ಈ ಬಾರಿ ವಿಶೇಷ ಆಕರ್ಷಣೆ
ಕೊಡವ ಕೌಟುಂಬಿಕ ಕ್ರಿಕೆಟ್ ಇತಿಹಾಸದಲ್ಲಿ ಪ್ರಥಮ ಪ್ರಯತ್ನವಾಗಿ ಈ ಬಾರಿ ಕುಟುಂಬ ತಂಡಗಳ ನಡುವೆ ಮಹಿಳಾ ಪಂದ್ಯಾಟವನ್ನೂ ಸೇರಿಸಿರುವುದು ವಿಶೇಷವಾಗಿದೆ. ಇದು ಮಹಿಳೆಯರಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ವಿವಿಧ ಕುಟುಂಬಗಳಲ್ಲಿ ತಂಡ ರಚನೆಯ ಕಸರತ್ತು ಅಭ್ಯಾಸಗಳು ಆರಂಭಗೊAಡಿರುವುದು ಹೊಸ ಬೆಳವಣಿಗೆಯಾಗಿದೆ.
ಮೈದಾನ ಸಿದ್ಧತೆ
ಬಾಳೆಲೆಯ ವಿಜಯಲಕ್ಷಿö್ಮ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪಂದ್ಯಾವಳಿಗಾಗಿ ಎರಡು ಮೈದಾನಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಈ ಬಾರಿ ಕುಟುಂಬ ತಂಡಗಳ ನಡುವೆ ಮಹಿಳಾ ಪಂದ್ಯಾಟವನ್ನೂ ಸೇರಿಸಿರುವುದು ವಿಶೇಷವಾಗಿದೆ. ಇದು ಮಹಿಳೆಯರಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ವಿವಿಧ ಕುಟುಂಬಗಳಲ್ಲಿ ತಂಡ ರಚನೆಯ ಕಸರತ್ತು ಅಭ್ಯಾಸಗಳು ಆರಂಭಗೊAಡಿರುವುದು ಹೊಸ ಬೆಳವಣಿಗೆಯಾಗಿದೆ.
ಮೈದಾನ ಸಿದ್ಧತೆ
ಬಾಳೆಲೆಯ ವಿಜಯಲಕ್ಷಿö್ಮ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪಂದ್ಯಾವಳಿಗಾಗಿ ಎರಡು ಮೈದಾನಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಈ ಬಾರಿ ಕುಟುಂಬ ತಂಡಗಳ ನಡುವೆ ಮಹಿಳಾ ಪಂದ್ಯಾಟವನ್ನೂ ಸೇರಿಸಿರುವುದು ವಿಶೇಷವಾಗಿದೆ. ಇದು ಮಹಿಳೆಯರಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ವಿವಿಧ ಕುಟುಂಬಗಳಲ್ಲಿ ತಂಡ ರಚನೆಯ ಕಸರತ್ತು ಅಭ್ಯಾಸಗಳು ಆರಂಭಗೊAಡಿರುವುದು ಹೊಸ ಬೆಳವಣಿಗೆಯಾಗಿದೆ.
ಮೈದಾನ ಸಿದ್ಧತೆ
ಬಾಳೆಲೆಯ ವಿಜಯಲಕ್ಷಿö್ಮ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪಂದ್ಯಾವಳಿಗಾಗಿ ಎರಡು ಮೈದಾನಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಪ್ರತ್ಯೇಕವಾಗಿ ಇರಲಿದೆ.
ಪಂದ್ಯಾವಳಿಯ ನೆನಪಿನಲ್ಲಿ ವಿಜಯಲಕ್ಷಿö್ಮ ಕಾಲೇಜಿಗೆ ವೇದಿಕೆಯೊಂದನ್ನು ನಿರ್ಮಿಸಿಕೊಡುವ ಚಿಂತನೆ ಮಾಡಲಾಗಿದೆ. ಇದರೊಂದಿಗೆ ಮೈದಾನವೂ ವ್ಯವಸ್ಥಿತವಾಗಲಿದೆ ಎಂದು ಪ್ರಮುಖರು ತಿಳಿಸಿದ್ದಾರೆ. ನಿವೃತ್ತ ಎಸ್.ಪಿ ಅರಮಣಮಾಡ ಸುರೇಶ್ ಉತ್ಸವ ಸಮಿತಿಯ ಅಧ್ಯಕ್ಷರಾಗಿದ್ದು, ೩ಏಳನೇ ಪುಟಕ್ಕೆ
ಮಹಿಳಾ ತಂಡ-ಪ್ರಥಮ ಪ್ರಯತ್ನ
ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವಕ್ಕೆ ಈ ಬಾರಿ ಮಹಿಳಾ ಪಂದ್ಯಾವಳಿ ಸೇರ್ಪಡೆಯಾಗುತ್ತಿದೆ. ಈ ತನಕದ ಉತ್ಸವಗಳಲ್ಲಿ ಇದು ಪ್ರಥಮ ಪ್ರಯತ್ನವಾಗಿದೆ. ಈಗಾಗಲೇ ೩೦ ಕುಟುಂಬಗಳು ಪಂದ್ಯಾವಳಿಗೆ ಹೆಸರು ನೋಂದಾಯಿಸಿಕೊAಡಿವೆ. ಇನ್ನೂ ಹತ್ತಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆ ಇರುವುದಾಗಿ ಮಹಿಳಾ ಪಂದ್ಯಾವಳಿಗಾಗಿ ನೇಮಕ ಮಾಡಲಾಗಿರುವ ಸಮಿತಿಯ ಪದಾಧಿಕಾರಿಗಳಾದ ಅರಮಣಮಾಡ ಮಮತಾ ಅವರು ತಿಳಿಸಿದ್ದಾರೆ. ಮಹಿಳಾ ವಿಜೇತ ತಂಡಕ್ಕೆ ಟ್ರೋಫಿಯೊಂದಿಗೆ ಆಟಗಾರರಿಗೆ ವಿಶೇಷವಾಗಿ ಕೊಡವ ಸಾಂಪ್ರದಾಯಿಕ ಆಭರಣಗಳಾದ ಕೊಕ್ಕೆತಾತಿ, ಜೋಮಾಲೆ, ಕೊಡವ ಚಿಹ್ನೆ ಇರುವ ಬ್ರೋಚ್ನಂತಹ ಆಭರಣಗಳನ್ನು ನೀಡಲು ಉದ್ದೇಶಿಸಲಾಗಿದೆ. ವೈಯಕ್ತಿಕ ಸಾಧಕರಿಗೂ ಬಹುಮಾನಗಳೂ ಇವೆ. ಇದು ಪ್ರಥಮ ಬಾರಿಗೆ ಪ್ರಯತ್ನವಾಗಿದ್ದು, ಮಹಿಳೆಯರಿಗೂ ಉತ್ತೇಜನ ನೀಡಲು ಯತ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ಕುಟುಂಬದಲ್ಲಿ ೬+ ಆಟಗಾರರೂ ಇದ್ದರೂ ಅವಕಾಶ ನೀಡಲಾಗುವದು. ಆದರೆ ಎಲ್ಲರೂ ಒಂದೇ ಕುಟುಂಬದವರಾಗಿರಬೇಕು. ನಿಯಮಗಳಲ್ಲೂ ತುಸು ಸಡಿಲಿಕೆ ಇರುತ್ತದೆ. ಮಹಿಳಾ ಪಂದ್ಯವನ್ನು ಖ್ಯಾತ ಕ್ರೀಡಾ ತಾರೆ ಅಶ್ವಿನಿ ನಾಚಪ್ಪ ಉದ್ಘಾಟಿಸಲಿದ್ದಾರೆ. ಈ ಪಂದ್ಯಾವಳಿಗೆ ದಿವಂಗತ ಅರಮಣಮಾಡ ರವಿ ಉತ್ತಪ್ಪ ಹಾಗೂ ಜಾಜಿ ಅವರುಗಳ ಸ್ಮರಣಾರ್ಥ ಮಕ್ಕಳಾದ ದಿನು ಹಾಗೂ ಅನು ಬಹುಮಾನ ಪ್ರಾಯೋಜಕತ್ವ ನೀಡಿರುವುದಾಗಿ ಅವರು ತಿಳಿಸಿದರು. ಮಹಿಳಾ ಸಮಿತಿಯಲ್ಲಿ ಕಾವ್ಯ ಅನಿಲ್, ಕಾವ್ಯಶಶಿ, ಜಾನ್ಸಿ, ದಿವ್ಯ, ಶಿಲ್ಪ, ಬೀನಾ ಬೆಳ್ಯಪ್ಪ, ಚಿತ್ರಾ, ನಿತಿನ್ ಮತ್ತಿತರರು ಕಾರ್ಯನಿರ್ವಹಿಸುತ್ತಿದ್ದಾರೆ. (ಮೊದಲ ಪುಟದಿಂದ) ಉಪಾಧ್ಯಕ್ಷರಾಗಿ ಸುಗುಣ ಗಣಪತಿ, ಕಾರ್ಯದರ್ಶಿಯಾಗಿ ಅಜಯ್, ದಿನು ಬೆಳ್ಯಪ್ಪ, ಉದಯ್ ಮತ್ತಿತರ ಕಟುಂಬಸ್ಥರು ಸಮಿತಿಯಲ್ಲಿ ಇದ್ದಾರೆ.
ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭವನ್ನು ಆಕರ್ಷಕ ರೀತಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಕೊಡವ ಸಾಂಸ್ಕೃತಿಕ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ಈ ದಿನಗಳಂದು ಇರಲಿದೆ.
ಅತಿಥಿಗಳಾಗಿ ಖ್ಯಾತ ಕ್ರಿಕೆಟಿಗರನ್ನು ಕರೆಸುವ ಪ್ರಯತ್ನ ನಡೆಯುತ್ತಿದ್ದು, ಕೆ.ಎಸ್.ಸಿ.ಎ. ಅಧ್ಯಕ್ಷ ರಘುರಾಮ್ ಭಟ್ ಅವರು ಆಗಮಿಸುವ ನಿರೀಕ್ಷೆಯಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಪ್ರಮುಖರನ್ನು ಆಹ್ವಾನಿಸಲಾಗುವುದು ಎಂದು ಅವರುಗಳು ತಿಳಿಸಿದ್ದಾರೆ.
ಪ್ರದರ್ಶನ ಪಂದ್ಯ
ನಾರ್ತ್ ಕೂರ್ಗ್ ಹಾಗೂ ಸೌತ್ ಕೂರ್ಗ್ ತಂಡಗಳ ನಡುವೆ ಉದ್ಘಾಟನಾ ದಿನದಂದು ಪ್ರದರ್ಶನ ಪಂದ್ಯ ಏರ್ಪಡಿಸಲಾಗುತ್ತಿದೆ. ಹಳೆಯ ವಾಹನಗಳ ಪ್ರದರ್ಶನವನ್ನು ಏರ್ಪಡಿಸುವ ಚಿಂತನೆಯಿದ್ದು ಪ್ರಯತ್ನ ನಡೆಯುತ್ತಿರುವುದಾಗಿ ಆಯೋಜಕರು ಮಾಹಿತಿ ನೀಡಿದ್ದಾರೆ.