ಗುಡ್ಡೆಹೊಸೂರು, ಏ. ೭: ಇಲ್ಲಿಗೆ ಸಮೀಪದ ಮಾದಪಟ್ಟಣ ಗ್ರಾಮದ ಶ್ರೀ ಶನೇಶ್ಚರ ದೇವಸ್ಥಾನದ ವಾರ್ಷಿಕ ಮಹಾಪೂಜೆಯು ಅದ್ಧೂರಿಯಾಗಿ ನಡೆಯಿತು.

ಮುಂಜಾನೆಯಿAದ ದೇವಸ್ಥಾನ ದಲ್ಲಿ ವಿವಿಧ ಪೂಜೆ ಹೋಮ ಹವನ ನಡೆಸಲಾಯಿತು. ಈ ಎಲ್ಲಾ ಕಾರ್ಯದಲ್ಲಿ ಗ್ರಾಮದ ಸುತ್ತಮುತ್ತಲಿನ ಹಲವು ಗ್ರಾಮದ ಸಾವಿರಾರು ಮಂದಿ ಭಕ್ತರು ಈ ಪೂಜೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಸಲಾಯಿತು. ಈ ಪೂಜಾ ಕಾರ್ಯವನ್ನು ದೇವಸ್ಥಾನದ ಅಧ್ಯಕ್ಷರು ಜೊತೆಗೆ ಅರ್ಚಕರೂ ಆದ ಜೋಗಯ್ಯ ಅವರ ನೇತೃತ್ವದಲ್ಲಿ ನಡೆಸಲಾಯಿತು.