ವೀರಾಜಪೇಟೆ, ಏ. ೮: ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಶಾಂತಿಯುತವಾಗಿ ಆಚರಿಸುವಂತಾಗಬೇಕು ಎಂದು ವಿರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್ ಹೇಳಿದರು.

ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಇರುವುದರಿಂದ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿ ಹಾಗೂ ಇತರ ದೇವಾಲಯಗಳ ಮುಖಂಡರುಗಳನ್ನು ಕರೆದು ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಹಬ್ಬವನ್ನು ಆಚರಿಸುವಾಗ ಯಾವುದೇ ರಾಜಕೀಯ ಬೆರೆಸಬಾರದು, ಕಾನೂನು ಉಲ್ಲಂಘನೆಯಾಗದAತೆ ಸಂಪ್ರದಾಯದAತೆ ಎಲ್ಲರೂ ಸೇರಿ ಆಚರಿಸುವಂತಾಗಬೇಕು ಎಂದರು. ವೃತ್ತ ನಿರೀಕ್ಷಕರಾದ ಬಿ.ಎಸ್. ಶಿವರುದ್ರ ಅವರು ಮಾತನಾಡಿ, ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಸುವವರು ಎಚ್ಚರ ವಹಿಸಬೇಕು. ನಿಮ್ಮ ಕಾರ್ಯಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು. ಶಾಂತಿಸಭೆಯಲ್ಲಿ ಎಂ.ವೈ. ನಿಸಾರ್ ಅಹ್ಮದ್, ಕೆ.ಪಿ. ರಶೀದ್, ಕುಂಞÂ ಅಬ್ದುಲ್ಲಾ, ಬಿ.ಜಿ. ಸಾಯಿನಾಥ್, ಜೂಡಿವಾಜ್, ದಿನೇಶ್ ನಾಯರ್, ಟಿ.ಕೆ. ಸತೀಶ್, ಲೋಕೇಶ್ ಮಾತನಾಡಿದರು. ನಗರ ಪೊಲೀಸ್ ಠಾಣಾಧಿಕಾರಿ ರವೀಂದ್ರ ಸ್ವಾಗತಿಸಿದರೆ, ಗ್ರಾಮಾಂತರ ಠಾಣಾಧಿಕಾರಿ ಮಂಜುನಾಥ್ ವಂದಿಸಿದರು.