ಕಡಂಗ, ಏ. ೮: ನಾಪೋಕ್ಲು ಕಡಂಗದ ಶಾದಿ ಮಹಲ್‌ನಲ್ಲಿ ಮಜಲಿಸ್ ವತಿಯಿಂದ ಬೃಹತ್ ಸಾಮೂಹಿಕ ಇಫ್ತಾರ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಶೀದ್ ಉಸ್ತಾದ್ ಮಹತ್ವದ ಕುರಿತು ಮಾತನಾಡಿದರು. ದುಹ ಕಾರ್ಯಕ್ರಮಕ್ಕೆ ಲತೀಫಿ ಉಸ್ತಾದ್ ನೇತೃತ್ವ ವಹಿಸಿದರು. ಈ ಸಂದರ್ಭದಲ್ಲಿ ಶುಹೈಬ್ ಫೈಜಿ, ಆಶ್ರಫಿ ಉಸ್ತಾದ್, ಮಜಲಿಸ್‌ನ ಸದಸ್ಯರಾದ ಜುನೈದ ಕೆ.ಎಂ., ಸಹದ್, ಬಶೀರ್, ಅಶ್ರಫ್, ಶುಹೈಲ್, ಯುನಸ್, ರಜಾಕ್ ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ, ವಂದನೆಯನ್ನು ಪತ್ರಕರ್ತ ನೌಫಲ್ ಎಂ.ಬಿ. ನೆರವೇರಿಸಿದರು.