ಮಡಿಕೇರಿ, ಏ. ೮ : ವೀರಾಜಪೇಟೆ ಸಮೀಪದ ಬಿಟ್ಟಂಗಾಲದ ಕಂಪೆನಿಮೊಟ್ಟೆಯ ಪ್ರಾರ್ಥನ ಮಡಪುರ ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ವತಿಯಿಂದ ತಾ. ೯ ಹಾಗೂ ೧೦ ರಂದು ಮುತ್ತಪ್ಪ ತೆರೆ ಮಹೋತ್ಸವ ನಡೆಯಲಿದೆ.
ತಾ. ೯ ರಂದು ಬೆಳಿಗ್ಗೆ ೯ ಗಂಟೆಗೆ ಗಣಪತಿಹೋಮ, ೭ಕ್ಕೆ ಧ್ವಜಾರೋಹಣ, ೯ಕ್ಕೆ ಕಣ್ಣಂಬಾಡಿ ಅಮ್ಮನ ಪೂಜೆ, ರಾತ್ರಿ ೮ ಕ್ಕೆ ಮುತ್ತಪ್ಪ ವೆಳ್ಳಾಟಂ, ೯ ಕ್ಕೆ ಗುಳಿಗನ್ ತೋಟ್ಟಂತೆರೆ, ೯.೩೦ಕ್ಕೆ ಅನ್ನದಾನ, ೧೦ ಗಂಟೆಗೆ ವಸೂರಿಮಾಲ ತೋಟ್ಟಂ ತೆರೆ, ತಾ. ೧೦ ರಂದು ಬೆಳಿಗ್ಗೆ ೫ ಗಂಟೆಗೆ ಮುತ್ತಪ್ಪನ್ ತಿರುವಪ್ಪನ್ ತೆರೆ, ೧೦ ಕ್ಕೆ ವಸೂರಿಮಾಲ ದೇವರ ತೆರೆ, ಮಧ್ಯಾಹ್ನ ಅನ್ನದಾನದೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.