ಚೆಯ್ಯಂಡಾಣೆ, ಏ ೮. ನಾಪೋಕ್ಲು ಸಮೀಪದ ಕೊಳಕೇರಿ ಜುಮಾ ಮಸೀದಿಯಲ್ಲಿ ರಂಝಾನ್ ಪ್ರಯುಕ್ತ ಸಾಮೂಹಿಕ ಇಫ್ತಾರ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳಕೇರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಿ.ಕೆ. ಅಬ್ದುಲ್ ನಾಸೀರ್ ವಹಿಸಿದ್ದರು. ಮಹಲ್ ಖತೀಬ್ ಶಹಜಹಾನ್ ಸಖಾಫಿ ರಂಝಾನ್ನ ಮಹತ್ವದ ಕುರಿತು ಮಾತನಾಡಿದರು.
ಈ ಸಂದರ್ಭ ಕಾರ್ಯದರ್ಶಿ ಎಂ.ಎಚ್. ರಫೀಕ್, ಪ್ರಮುಖರಾದ ಕೆ.ವೈ. ಅಶ್ರಫ್, ಎಂ.ಎA. ರಫೀಕ್, ಕೆ.ವೈ. ಸುಲೈಮಾನ್, ಮತಿತ್ತರರು ಉಪಸ್ಥಿತರಿದ್ದರು.