ನಾಪೋಕ್ಲು, ಏ. ೬: ನಾಪೋಕ್ಲು ಮೇರಿ ಮಾತೆ ದೇವಾಲಯದಲ್ಲಿ ಕ್ರೆöÊಸ್ತ ಸಮುದಾಯದವರು ಕ್ರಿಸ್ತನ ಕೊನೆಯ ಘಳಿಗೆಯ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.
ಧರ್ಮಗುರುಗಳಾದ ಜ್ಞಾನ ಪ್ರಕಾಶ್ ಆಶೀರ್ವಚನ ನೀಡಿದರು. ಈ ಸಂದರ್ಭ ದೇವಾಲಯದ ಪಾಲನಾ ಸಮಿತಿಯ ಅಧ್ಯಕ್ಷರುಗಳು ಉಪಾಧ್ಯಕ್ಷರು ಮತ್ತು ಸದಸ್ಯರುಗಳು, ಮೇರಿ ಮಾತೆ ಯುವಕ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.