ಮಡಿಕೇರಿ, ಏ. ೬: ಹಠಾತ್ತಾಗಿ ಎದುರಾದ ತಾಂತ್ರಿಕ ಸಮಸ್ಯೆಯಿಂದ ಚಲಾಯಿಸುತ್ತಿದ್ದ ಕಾರು ಬೆಂಕಿಗೆ ಆಹುತಿಯಾದ ಘಟನೆ ಮಡಿಕೇರಿ ಸಮೀಪದ ತಾಳತ್ತಮನೆಯಲ್ಲಿ ಸಂಭವಿಸಿದೆ.

ಮಂಗಳೂರಿನಿAದ ಮಡಿಕೇರಿಗೆ ದತ್ತೇಶ್ ಪೂಜಾರಿ ಹಾಗೂ ಅವರ ಸ್ನೇಹಿತರು ಬರುತ್ತಿದ್ದ ಡಸ್ಟರ್ ಕಾರಿನ (ಕೆಎ ೧೯ ಎಂಡಿ ೩೯೮೫) ಇಂಜಿನ್ ಭಾಗ ಬಿಸಿಯಾಗಿ ದಿಢೀರ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿದ್ದವರು ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಕಾರು ಸಂಪೂರ್ಣ ಬೆಂಕಿಯ ಕೆನ್ನಾಲೆಗೆ ಸಿಲುಕಿ ಭಸ್ಮವಾಗಿದೆ. ಪರಿಣಾಮ ರಸ್ತೆ ಬದಿಯ ಕುರುಚಲು ಕಾಡಿಗೂ ಬೆಂಕಿ ವ್ಯಾಪಿಸಿದೆ.

ಘಟನೆ ತಿಳಿದು ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ಅಧಿಕಾರಿ ಶೋಭಿತ್ ಪಿ.ಕೆ. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.