ಸುಂಟಿಕೊಪ್ಪ, ಏ. ೬: ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ ವ್ಯಕ್ತಿ ಮೀನಿಗೆ ಹಾಕಿದ್ದ ಬಲೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೂಲತಃ ಕುಶಾಲನಗರ ತಾಲೂಕು ಬಾಳುಗೋಡು ನಿವಾಸಿ ಬಾಲಕೃಷ್ಣ (೪೫) ಮೃತ ದುರ್ದೈವಿ. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಹಾದ್ರೆ ಹೆರೂರು ಗ್ರಾಮದ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದ ಬಾಲಕೃಷ್ಣ ಹಾರಂಗಿ ಹಿನ್ನೀರಿಗೆ ಈಜಲು ನೀರಿಗಿಳಿದ ಸಂದರ್ಭ ಮೀನು ಹಿಡಿಯಲೆಂದು ಹಾಕಿದ್ದ ಬಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಬಲೆ ಇರುವುದು ತಿಳಿಯದೆ ನೀರಿಗಿಳಿದ ಸಂದರ್ಭ ಕಾಲಿಗೆ ಬಲೆ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಸಿಲುಕಿದ ಪರಿಣಾಮ ದುರ್ಘಟನೆ ಸಂಭವಿಸಿದೆ. ತೆರಳಿ ಹಲವು ಸಮಯ ಕಳೆದರೂ ಮನೆಗೆ ಬಾರದ ಬಗ್ಗೆ ಅನುಮಾನಗೊಂಡು ಕುಟುಂಬಸ್ಥರು ಹಿನ್ನೀರಿನ ಭಾಗಕ್ಕೆ ತೆರಳಿ ಗಮನಿಸಿದಾಗ ನೀರಿನಲ್ಲಿ ಮುಳುಗಿರುವ ಬಗ್ಗೆ ಅನುಮಾನ ಮೂಡಿದೆ. ಸ್ಥಳೀಯ ನುರಿತ ಈಜುಗಾರರು ನೀರಿಗಿಳಿದು ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧÀರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.