ಮಡಿಕೇರಿ, ಏ. ೫: ಮಡಿಕೇರಿ ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ರಾಮೋತ್ಸವವನ್ನು ಆಚರಿಸಲಾಗುತ್ತಿದೆ. ತಾ.೯ ರಿಂದ ಪ್ರಾರಂಭವಾಗಿ ತಾ. ೧೮ ರವರೆಗೂ ಪ್ರತಿನಿತ್ಯ ಸಂಜೆ ೬.೩೦ ರಿಂದ ೮.೩೦ ರವರೆಗೆ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಡಿಕೇರಿಯ ಆಂಜನೇಯ ದೇವಾಲಯದಲ್ಲಿ ನಡೆಯಲಿವೆ.
ತಾ.೯ ರಂದು ಶ್ರೀರಾಮ ಮತ್ತು ಜೀವನ ಸಂದೇಶ ಕುರಿತು ಹಾಗೂ ತಾ. ೧೦ ರಂದು ಸುಂದರ ಕಾಂಡ ವಿಷಯದ ಕುರಿತು ಶ್ರೀ ಮದ್ವಾಲ್ಮೀಕಿ ರಾಮಾಯಣ ಪ್ರವಚನವನ್ನು ಖ್ಯಾತ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ನಡೆಸಿಕೊಡಲಿದ್ದಾರೆ.
ತಾ.೧೧ ರಂದು ಮಡಿಕೇರಿಯ ವಿದುಷಿ ಮೇಘಾ ಭಟ್ ಮತ್ತು ಬಳಗದಿಂದ ಕರ್ನಾಟಕ ಶಾಸ್ತಿçÃಯ ಸಂಗೀತ ನಡೆಯಲಿದೆ. ತಾ.೧೨ ರಂದು ಪುತ್ತೂರಿನ ಅನನ್ಯ ಬಳಂತಿಮೊಗರು ಅವರಿಂದ ಕಗ್ಗ ವಾಚನ ಹಾಗೂ ಕವಿತಾ ಅಡೂರು ಅವರಿಂದ ಪ್ರವಚನ ನಡೆಯಲಿದೆ. ತಾ.೧೩ ರಂದು ಮೈಸೂರಿನ ವಿದ್ವಾನ್ ಆರ್.ಕೆ ಪದ್ಮನಾಭ ಮತ್ತು ಬಳಗದಿಂದ ವೀಣಾ ವಾದನ ನೆರವೇರಲಿದೆ.
ತಾ.೧೪ ರಂದು ಮೈಸೂರಿನ ಹರಿಕಥಾ ವಿದುಷಿ ನಾಗಲಕ್ಷಿö್ಮ ಅವರಿಂದ ಹರಿಕಥೆ, ತಾ.೧೫ ರಂದು ಮಡಿಕೇರಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮತ್ತು ಸದಸ್ಯರಿಂದ ಭಜನೆ, ತಾ.೧೬ ರಂದು ಮಡಿಕೇರಿ ಶೃತಿಲಯ ತಂಡದಿAದ ಭಕ್ತಿ ಸಂಗೀತ, ತಾ.೧೭ ರಂದು ಬೆಳಿಗ್ಗೆ ಮಡಿಕೇರಿ ಇಸ್ಕಾನ್ ಬಳಗದ ಸದಸ್ಯರಿಂದ ಭಜನೆ, ಸಂಜೆ ವಿದುಷಿ ಪೂರ್ಣಿಮ ವಿನಯ್ ಮತ್ತು ತಂಡ, ನಾಟ್ಯ ನಿಕೇತನ ಸಂಗೀತ ನೃತ್ಯ ಶಾಲೆ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ತಾ.೧೮ ರಂದು ಬೆಳಿಗ್ಗೆ ಮಡಿಕೇರಿ ಶಿವಶಕ್ತಿ ಬಳಗದಿಂದ ಸ್ತೋತ್ರ ಪಠಣ, ಸಂಜೆ ಶ್ರೀ ರಾಮಾಂಜನೇಯ ಯಕ್ಷಗಾನ ಮಂಡಳಿಯಿAದ ಯಕ್ಷಗಾನ ನಡೆಯಲಿದೆ.
ತಾ.೧೭ ರಂದು ರಾಮನವಮಿ ಪ್ರಯುಕ್ತ ಬೆಳಿಗ್ಗೆ ೧೦.೩೦ ಕ್ಕೆ ಅಭಿಷೇಕ, ೧೧.೩೦ ಕ್ಕೆ ಮಹಾಪೂಜೆ, ಮಹಾಮಂಗಳಾರತಿ ಮತ್ತು ಮಧ್ಯಾಹ್ನ ಪ್ರಸಾದ ವಿನಿಯೊಗ ನಡೆಯಲಿದೆ.