ಮಡಿಕೇರಿ, ಏ. ೫: ಮಡಿಕೇರಿಯ ಶ್ರೀ ಮುತ್ತಪ್ಪನ್ ಕ್ಷೇತ್ರಂನ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ಪ್ರಯುಕ್ತ ಇಂದು ಸಂಜೆ ತಾಲಾಪೊಲಿ ಮೆರವಣಿಗೆ ನಡೆಯಿತು.
ಕಡಗದಾಳು, ನೀರುಕೊಲ್ಲಿ, ಸಂಪಿಗೆಕಟ್ಟೆ, ಕೆ.ಎಸ್.ಆರ್.ಟಿ.ಸಿ. ಡಿಪೋ ಮುಂಭಾಗ, ಕಾಲೇಜು ರಸ್ತೆಯ ಮೈತ್ರಿ ಜಂಕ್ಷನ್ ಸೇರಿದಂತೆ ನಾಲ್ಕು ದಿಕ್ಕುಗಳಿಂದ ಶ್ರೀ ಮುತ್ತಪ್ಪ ದೇವರ ಕಲಶದೊಂದಿಗೆ ಆಗಮಿಸಿದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡರು.
ಮೈದಾನದಿಂದ ಚಂಡೆವಾದ್ಯ, ಮುತ್ತಪ್ಪ ದೇವರ ಮೂರ್ತಿಯನ್ನೊಳ ಗೊಂಡ ಮಂಟಪ, ಕಲಾತಂಡ ಗಳೊಂದಿಗೆ ಹೊರಟ ಮೆರವಣಿಗೆ ಡಿಪೋ ಮುಂಭಾಗ, ಕಾಲೇಜು ರಸ್ತೆಯ ಮೈತ್ರಿ ಜಂಕ್ಷನ್ ಸೇರಿದಂತೆ ನಾಲ್ಕು ದಿಕ್ಕುಗಳಿಂದ ಶ್ರೀ ಮುತ್ತಪ್ಪ ದೇವರ ಕಲಶದೊಂದಿಗೆ ಆಗಮಿಸಿದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡರು.
ಮೈದಾನದಿಂದ ಚಂಡೆವಾದ್ಯ, ಮುತ್ತಪ್ಪ ದೇವರ ಮೂರ್ತಿಯನ್ನೊಳ ಗೊಂಡ ಮಂಟಪ, ಕಲಾತಂಡ ಗಳೊಂದಿಗೆ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಮುತ್ತಪ್ಪ ದೇವಾಲಯದಲ್ಲಿ ಸಮಾಪನಗೊಂಡಿತು. ಸಾಂಪ್ರದಾಯಿಕ ಉಡುಪಿನಲ್ಲಿ ಕಲಶ ಹೊತ್ತ ಮಹಿಳೆಯರು., ಮಕ್ಕಳು, ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದಿತ್ತವು.
ಮಹೋತ್ಸವ
ನAತರ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ಮುತ್ತಪ್ಪ ಜಾತ್ರಾ ಮಹೋತ್ಸವ ಬೆಳಗ್ಗಿನ ಜಾವದವರೆಗೂ ನೆರವೇರಿತು.