ನಾಪೋಕ್ಲು, ಏ. ೬: ಇಲ್ಲಿನ ಶ್ರೀ ಪೊನ್ನುಮುತ್ತಪ್ಪ ದೇವಾಲಯದ ವಾರ್ಷಿಕ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಸಂಪನ್ನಗೊAಡಿತು.
ಬುಧವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಉತ್ಸವ ಕಾರ್ಯಕ್ರಮ ಆರಂಭಗೊAಡು ಗುರುವಾರ ಸಂಜೆ ಮುತ್ತಪ್ಪ ದೇವರ ಕಲಶ ಮೆರವಣಿಗೆ ನಡೆಯಿತು. ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ತಳಿಯಕ್ಕಿ ಬೊಳಕ್ ಹಾಗೂ ಕೇರಳದ ಪ್ರಖ್ಯಾತ ಚಂಡೆಯೊAದಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ಕಲಶ ಮೆರವಣಿಗೆ ನಡೆಯಿತು. ಈ ಸಂದರ್ಭ ಭಕ್ತಾದಿಗಳಿಂದ ಹಣ್ಣು ಕಾಯಿ, ಈಡುಗಾಯಿ ಸೇವೆ ಹಾಗೂ ಸಿಡಿಮದ್ದಿನ ಪ್ರದರ್ಶನ ನಡೆಯಿತು.
ರಾತ್ರಿ ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನದಾನ ನೆರವೇರಿದ ಬಳಿಕ ಮುತ್ತಪ್ಪ ದೇವರ ಹಾಗೂ ಕುಟ್ಟಿಚಾತ ವೆಳ್ಳಾಟಂ ಜರುಗಿತು. ಶುಕ್ರವಾರ ಬೆಳಿಗ್ಗೆ ಗುಳಿಗ, ತಿರುವಪ್ಪ ಹಾಗೂ ಮುತ್ತಪ್ಪ, ಕುಟ್ಟಿಚಾತ ತೆರೆಗಳು ಜರುಗಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ಹರಕೆ ಒಪ್ಪಿಸಿ ಪ್ರಸಾದ ಸ್ವೀಕರಿಸುವುದರೊಂದಿಗೆ ಉತ್ಸವ ಸಂಪನ್ನಗೊAಡಿತು.
ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ. ಚಂದ್ರನ್ ಉಪಾಧ್ಯಕ್ಷ ಸುಕುಮಾರ, ಕಾರ್ಯದರ್ಶಿ ರಾಜೀವನ್, ಉಪ ಕಾರ್ಯದರ್ಶಿ ಎಂ.ಕೆ. ತಂಗ, ಖಜಾಂಚಿ ವಿನಿಲ್ ಪಪ್ಪು ನಿರ್ದೇಶಕರು ಸೇರಿದಂತೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.