ಮಡಿಕೇರಿ, ಏ. ೫: ಇಲ್ಲಿನ ಸಂಪಿಗೆಕಟ್ಟೆ ಬಳಿಯ ಕನ್ನಂಡಬಾಣೆ ಯಲ್ಲಿನ ಶ್ರೀ ಭದ್ರಕಾಳಿ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ತಾ.೯ ಹಾಗೂ ೧೦ ರಂದು ಅನ್ನಪೂರ್ಣೇಶ್ವರಿ ಅಮ್ಮನವರ ಜಾತ್ರೆ ನಡೆಯಲಿದೆ. ತಾ. ೯ ರಂದು ಬೆಳಿಗ್ಗೆ ಸ್ಥಳ ಶುದ್ಧಿ, ಬಿಂಬ ಶುದ್ಧಿ, ಗಣಪತಿ ಹೋಮ ನೆರವೇರಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ ಇದೆ. ಸಂಜೆ ದುರ್ಗಾಪೂಜೆ, ಮಂಗಳಾರತಿ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ತಾ. ೧೦ ರಂದು ಬೆಳಿಗ್ಗೆ ಗುಳಿಗ ಪೂಜೆ, ದೇವಿಪೂಜೆ, ದೇವಿದರ್ಶನ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ.