ಶ್ರೀಮಂಗಲ, ಏ. ೪: ಶ್ರೀಮಂಗಲ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿನಿ (೧೯೯೯-೨೦೦೦ ಬ್ಯಾಚ್) ಪುಷ್ಪಾವತಿ ಕೆ.ಬಿ. ಅವರು ತನ್ನ ತಂದೆ ಬಿರುನಾಣಿ ಕಳಕೂರು ಗ್ರಾಮದ ಕುಪ್ಪಣಮಾಡ ಬೆಳ್ಯಪ್ಪ ಅವರ ಜ್ಞಾಪಕಾರ್ಥವಾಗಿ ತಾನು ಓದಿದ ಶಾಲೆಯಲ್ಲಿ ಹಾಕಿ ಕ್ರೀಡೆಯನ್ನು ಉತ್ತೇಜಿಸಲು ಮಕ್ಕಳಿಗೆ ಹಾಕಿ ಸ್ಟಿಕ್ ಹಾಗೂ ಬಾಲ್ ಅನ್ನು ಕೊಡುಗೆಯಾಗಿ ನೀಡಿದರು. ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀಮಂಗಲ ವಿದ್ಯಾಸಂಸ್ಥೆಯಲ್ಲಿ ಉತ್ತಮ ಆಡಳಿತ ಮಂಡಳಿ ಹಾಗೂ ಉತ್ತಮ ಶಿಕ್ಷಕರುಗಳಿದ್ದು, ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ. ಸುತ್ತಮುತ್ತಲಿನ ಪೋಷಕರು ಈ ವಿದ್ಯಾಸಂಸ್ಥೆಗೆ ಮಕ್ಕಳನ್ನು ಸೇರಿಸಿ ಉತ್ತಮ ಶಿಕ್ಷಕರ ಹಾಗೂ ಅತ್ಯುತ್ತಮ ಶಿಕ್ಷಣದ ಪ್ರಯೋಜನ ಪಡೆದುಕೊಳ್ಳುವಂತೆ ಇದೇ ಸಂದರ್ಭದಲ್ಲಿ ಪುಷ್ಪಾವತಿ ಮನವಿ ಮಾಡಿದರು.