ನಾಪೋಕ್ಲು, ಏ. ೪: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್ಹಾಕಿ ನಮ್ಮೆಯ ಆರನೇ ದಿನದ ಪಂದ್ಯಾಟದಲ್ಲಿ ಮಲ್ಲಜಿರ ತಂಡ ೫-೦ ಗೋಲುಗಳ ಅಂತರದಿAದ ಭರ್ಜರಿ ಜಯ ದಾಖಲಿಸಿದೆ.
ಮಲ್ಲಜಿರ ಮತ್ತು ಪೆಬ್ಬೆಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಲಜಿರ ತಂಡವು ಪೆಬ್ಬೆಟ್ಟಿರ ತಂಡವನ್ನು ೫-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಲ್ಲಜಿರ ತಂಡದ ಪರ ವಚನ್ ಅಯ್ಯಪ್ಪ ೪ ಮತ್ತು ಚೇತನ್ ಚಂಗಪ್ಪ ೧ ಗೋಲು ದಾಖಲಿಸಿದರು. ಎಳ್ತಂಡ ಮತ್ತು ಬೊಳಿಯಾಡಿರ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಬೊಳಿಯಾಡಿರ ತಂಡವು ಎಳ್ತಂಡ ತಂಡವನ್ನು ೧-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಪೊಂಜAಡ ಮತ್ತು ಪೊನ್ನಕಚ್ಚಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೊಂಜAಡ ತಂಡವು ಪೊನ್ನಕಚ್ಚಿರ ತಂಡವನ್ನು ೧-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬಡ್ಡೀರ ಮತ್ತು ಚಾರಿಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಡ್ಡೀರ ತಂಡವು ಚಾರಿಮಂಡ ತಂಡವನ್ನು ೧-೦ ಗೋಲುಗಳಿಂದ ಪರಾಭವಗೊಳಿಸಿತು. ಕಳ್ಳಿರ ಮತ್ತು ಮುಕ್ಕಾಟಿರ (ಕುಂಜಿಲಗೇರಿ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಕಳ್ಳಿರ ತಂಡವನ್ನು ೩-೧ ಗೋಲುಗಳಿಂದ ಪರಾಭವಗೊಳಿಸಿತು. ಕುಂದಚ್ಚಿರ ಮತ್ತು ಮಾಪಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಪಂಗಡ ತಂಡವು ಕುಂದಚ್ಚಿರ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತು. ಓಡಿಯಂಡ ಮತ್ತು ದೇಯಂಡ ತಂಡಗಳÀ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದೇಯಂಡ ತಂಡವು ಓಡಿಯಂಡ ತಂಡವನ್ನು ಟೈಬ್ರೇಕರ್ನಲ್ಲಿ ೩-೨ ಗೋಲಿನಿಂದ ಸೋಲಿಸಿತು. ಕಾಳಚಂಡ ಮತ್ತು ಬೊಳ್ಳಚೆಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಳಚಂಡ ತಂಡವು ಬೊಳ್ಳಚೆಟ್ಟಿರ ತಂಡವನ್ನು ೧-೦ ಗೋಲಿನಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಆಪಾಡಂಡ ಮತ್ತು ದಾಸಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದಾಸಂಡ ತಂಡವು ಆಪಾಡಂಡ ತಂಡವನ್ನು ೩-೦ ಗೋಲಿನಿಂದ ಪರಾಭವಗೊಳಿಸಿತು. ಅಜ್ಜೇಟಿರ ಮತ್ತು ಬಟ್ಟೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಜ್ಜೇಟಿರ ತಂಡವು ಬಟ್ಟೀರ ತಂಡವನ್ನು ಟೈಬ್ರೇಕರ್ನಲ್ಲಿ ೩-೨ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಪಟ್ಟಚೆರುವಾಳಂಡ ಮತ್ತು ಮಳವಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಚೆರುವಾಳಂಡ ತಂಡವು ಮಳವಂಡ ತಂಡವನ್ನು ಟೈಬ್ರೇಕರ್ನಲ್ಲಿ ೫-೪ ಗೋಲುಗಳ ಅಂತರದಿAದ ಸೋಲಿಸಿತು. ಮುಕ್ಕಾಟಿರ (ಕುಂಬಳದಾಳು) ತಿರುಟೆರ ತಂಡಗಳ ನಡುವಿನ ಪಂದ್ಯದಲ್ಲಿ ತಿರುಟೆರ ತಂಡವು ಮುಕ್ಕಾಟಿರ ತಂಡವನ್ನು ೩-೦ ಗೋಲುಗಳಿಂದ ಪರಾಭವಗೊಳಿಸಿತು. ಬಾಚಿರ ಮತ್ತು ಮಲ್ಲಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಲಂಡ ತಂಡವು ಬಾಚಿರ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿತು.
ಐಮುಡಿಯಂಡ ತಂಡದ ಗೈರುಹಾಜರಿನ ಹಿನ್ನಲೆಯಲ್ಲಿ ಮಚ್ಚಾರಂಡ ತಂಡ, ಸಿದ್ದಂಡ ತಂಡದ ಗೈರುಹಾಜರಿನ ಕಾರಣದಿಂದ ನಿಡುಮಂಡ ತಂಡ, ಮಾಂಗೆರ ತಂಡದ ಗೈರುಹಾಜರಿನಿಂದ ಕೊಟ್ಟಂಗಡ ತಂಡ ಮುಂದಿನ ಸುತ್ತು ಪ್ರವೇಶಿಸಿದವು.
-ಪಿ.ವಿ. ಪ್ರಭಾಕರ್