ಮಡಿಕೇರಿ, ಏ. ೪: ನೇತಾಜಿ ಯುವಕ ಮಂಡಲ ತಾಳತ್ತಮನೆ ಇದರ ೩೨ನೇ ವರ್ಷದ ವಾರ್ಷಿಕ ಮಹಾಸಭೆ ನೇತಾಜಿ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಕೆ. ಜೀವನ್ ವಹಿಸಿದ್ದರು. ಸಂಘದ ಕಾರ್ಯದರ್ಶಿ ಡಿ.ಪಿ. ಮಿಲನ್ ವಾರ್ಷಿಕ ವರದಿಯನ್ನು ವಾಚಿಸಿದರು. ಖಜಾಂಚಿಯಾದ ಬಿ.ಆರ್. ಯತೀಶ್ ರೈ ೨೦೨೩-೨೪ನೇ ಸಾಲಿನ ಖರ್ಚು ವೆಚ್ಚಗಳ ವರದಿಯನ್ನು ಮಂಡಿಸಿದರು.
ಸAಘದ ಹಿರಿಯ ಸಲಹಾ ಸಮಿತಿ ಸದಸ್ಯ ಗಿರೀಶ್ ತಾಳತ್ತಮನೆ ಮಾತನಾಡಿ, ಸಂಘ ಬೆಳೆದು ಬಂದ ದಾರಿ ಹಾಗೂ ಸಂಘದ ಮೂಲ ಉದ್ದೇಶಗಳನ್ನು ತಿಳಿಸಿ, ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘದ ಪ್ರಗತಿಗೆ ಸಹಕರಿಸುವಂತೆ ಕೋರಿದರು.
ಈ ಸಂದರ್ಭ ೨೦೨೪-೨೫ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ದುರ್ಗಾ ಭಗವತಿ ದೇವಸ್ಥಾನದ ಅಧ್ಯಕ್ಷ ಸಿ.ಜಿ. ಅಪ್ಪಯ್ಯ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಕೊಂಡಿರ ಪಿ. ಕಾರ್ಯಪ್ಪ, ಉಪಾಧ್ಯಕ್ಷರಾಗಿ ಕೊಕ್ಕಲೆ ಗಣೇಶ್, ಕಾರ್ಯದರ್ಶಿಯಾಗಿ ಬಿ.ಬಿ. ದಿನೇಶ್ ರೈ, ಸಹ ಕಾರ್ಯದರ್ಶಿಯಾಗಿ ಬಿ.ಆರ್. ಯತೀಶ್ ರೈ, ಖಜಾಂಚಿಯಾಗಿ ಡಿ.ಪಿ. ಮಿಲನ್ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಕೆ.ಜಿ. ಪ್ರೀತಂ, ಕ್ರೀಡಾ ಕಾರ್ಯದರ್ಶಿಯಾಗಿ ಬಿ.ಎಸ್. ನಯನ್ ರೈ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎ. ಕಿರಣ್ ಆಯ್ಕೆಯಾಗಿದ್ದಾರೆ. ಯುವಕ ಮಂಡಲದ ಸಲಹಾ ಸಮಿತಿ ಅಧ್ಯಕ್ಷರಾಗಿ ಅರೆಯಂಡ ರಘು ಅವರನ್ನು ಆಯ್ಕೆ ಮಾಡಲಾಯಿತು.