ಸೋಮವಾರಪೇಟೆ, ಏ. ೩: ಹಿಂದೂ ಸಮಾಜದ ಅಸ್ಮಿತೆಯ ಪ್ರತೀಕವಾಗಿ ರಾಮಮಂದಿರ ನಿರ್ಮಾಣವಾಗಿದೆ. ಈ ಸ್ವಾಭಿಮಾನದ ಮಂದಿರ ನಿರ್ಮಾಣ ವಾಗಿರುವಂತೆ ರಾಮರಾಜ್ಯ ನಿರ್ಮಾಣದ ಸಂಕಲ್ಪ ಎಲ್ಲರಲ್ಲಿರಲಿ ಎಂದು ಯುವ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಹೇಳಿದರು.
ಸೋಮವಾರಪೇಟೆ ತಾಲೂಕು-ಮಾದಾಪುರದ ಹಿಂದೂ ಜಾಗರಣಾ ವೇದಿಕೆ ವತಿಯಿಂದ, ಶ್ರೀರಾಮ ನವಮಿ ಉತ್ಸವದ ಅಂಗವಾಗಿ ಮಾದಾಪುರದಲ್ಲಿ ಆಯೋಜಿಸಲಾಗಿದ್ದ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶಗಳನ್ನು ಪೋಷಕರು ತಮ್ಮ ಮಕ್ಕಳಲ್ಲಿ ಮೂಡಿಸಬೇಕು. ಪ್ರತಿ ಮಗುವನ್ನೂ ರಾಮನಂತೆ ಆದರ್ಶ, ಸಂಸ್ಕಾರಯುತ ವ್ಯಕ್ತಿಗಳನ್ನಾಗಿಸಬೇಕು. ಧರ್ಮ ಜಾಗೃತಿಯೊಂದಿಗೆ ರಾಷ್ಟç ಜಾಗೃತಿಯನ್ನು ಮೂಡಿಸಬೇಕು ಎಂದು ಅವರು ಕರೆ ನೀಡಿದರು.
ಸನಾತನ ಹಿಂದೂ ಧರ್ಮದ ಮೇಲೆ ಶತಶತಮಾನಗಳ ಕಾಲ ಆಕ್ರಮಣಗಳಾಗಿದ್ದರೂ ಇಂದಿಗೂ ಹಿಂದೂ ಧರ್ಮ ನೆಲದ ಅಸ್ಮಿತೆಯಾಗಿ ಉಳಿದುಕೊಂಡಿದೆ. ಇದು ಹಿಂದೂ ಧರ್ಮದ ಶಕ್ತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾದಾಪುರದ ಕಾಫಿ ಬೆಳೆಗಾರ ಮಂಡೇಟಿರ ಅನಿಲ್ ಪೊನ್ನಪ್ಪ ವಹಿಸಿದ್ದರು. ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಯುವ ಪ್ರಮುಖ್ ಸುನಿಲ್, ತಾಲೂಕು ಸಂಚಾಲಕ ವಿನಯ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಜಂಬೂರು ಬಸವೇಶ್ವರ ದೇವಾಲಯದಿಂದ ಮಾದಾಪುರದ ಮುಖ್ಯರಸ್ತೆಗಳಲ್ಲಿ ಹಿಂದೂ ಸಮಾಜದವರು ಶೋಭಾಯಾತ್ರೆ ನಡೆಸಿದರು. ಪ್ರಭು ಶ್ರೀರಾಮನ ಪರ ಜಯಘೋಷಗಳನ್ನು ಮೊಳಗಿಸಿ ಮೆರವಣಿಗೆ ಸಾಗಿದರು. ಮಾದಾಪುರ ಗ್ರಾ.ಪಂ. ಮುಂಭಾಗದವರೆಗೆ ಮೆರವಣಿಗೆ ನಡೆಯಿತು. ಎಲ್ಲರೂ ಕೇಸರಿ ಶಾಲು, ಬಾವುಟಗಳನ್ನು ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಶೋಭಾಯಾತ್ರೆಯ ಅಂಗವಾಗಿ ಮಾದಾಪುರ ಪಟ್ಟಣವನ್ನು ಕೇಸರಿ ಬಂಟಿAಗ್ಸ್ಗಳಿAದ ಅಲಂಕರಿಸಲಾಗಿತ್ತು.