ಗೋಣಿಕೊಪ್ಪಲು, ಏ. ೩: ಸವಿತಾ ಸಮಾಜದ ವತಿಯಿಂದ ಗೋಣಿಕೊಪ್ಪ ಸಮೀಪದ ಹಾತೂರು ಶಾಲಾ ಮೈದಾನದಲ್ಲಿ ೨ ದಿನಗಳ ಕಾಲ ಹಮ್ಮಿಕೊಂಡಿದ್ದ ಕ್ರೀಡೋತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ಕ್ರೀಡೋತ್ಸವದ ಅಂಗವಾಗಿ ೧೦ ತಂಡಗಳು ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ವೀರಾಜಪೇಟೆಯ ಡೋಮಿನೇರ‍್ಸ್ ತಂಡ ಜಯಗಳಿಸಿತು.

ಕೂಡಿಗೆಯ ಹೆಚ್‌ಆರ್‌ಬಿ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ವಿಜೇತ ತಂಡಕ್ಕೆ ೩೦ ಸಾವಿರ, ರನ್ನರ್ ಅಪ್ ತಂಡಕ್ಕೆ ೨೦ ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಸವಿತಾ ಸಮಾಜ ಪೊನ್ನಂಪೇಟೆ ಬಿ ತಂಡಕ್ಕೆ ೧೦ ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಯಿತು.

ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ ಆಯೋಜಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಸವಿತಾ ಸಮಾಜದ ಕೈಕೇರಿ ಎ ತಂಡವು ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನವನ್ನು ಸವಿತಾ ಸಮಾಜ ಪೊನ್ನಂಪೇಟೆ ಎ ತಂಡವು ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಸವಿತಾ ಸಮಾಜ ಕೈಕೇರಿ ಎ ತಂಡ ಪ್ರಥಮ, ದ್ವಿತೀಯ ಸ್ಥಾನವನ್ನು ಸವಿತಾ ಸಮಾಜದ ಕೈಕೇರಿ ಬಿ ತಂಡ ಪಡೆಯಿತು. ಸಮಾಜ ಬಾಂಧವರ ಮಕ್ಕಳಿಗೆ ವಿವಿಧ ಕ್ರೀಡೆಯನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪೊನ್ನಂಪೇಟೆ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಪೂಣಚ್ಚೀರ ಎಸ್.ಮನೋಜ್ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಹೆಚ್.ಎಸ್. ಜಿಮ್ಮ ಸುಬ್ಬಯ್ಯ ಪ್ರಾಸ್ತವಿಕವಾಗಿ ಮಾತನಾಡಿ ಸವಿತಾ ಸಮಾಜವು ಸಣ್ಣ ಸಮುದಾಯವಾಗಿದ್ದು, ಸಮಾಜ ಭಾಂದವರನ್ನು ಒಟ್ಟಾಗಿ ಸೇರಿಸುವ

(ಮೊದಲ ಪುಟದಿಂದ) ಪ್ರಯತ್ನವಾಗಿ ವಾರ್ಷಿಕವಾಗಿ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯದರ್ಶಿ ಬೆಂಗಳೂರಿನ ನಾಗರಾಜ್ ಮಾತನಾಡಿ ಕೊಡಗಿನಲ್ಲಿ ಸವಿತಾ ಸಮಾಜವು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ರಾಜ್ಯ ಸಮಿತಿಯೊಂದಿಗೆ ಉತ್ತಮ ಭಾಂದವ್ಯ ವೃದ್ಧಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸವಿತಾ ಸಮಾಜದ ಕೊಡಗು ಜಿಲ್ಲಾಧ್ಯಕ್ಷರಾದ ಕೆ.ಎಸ್.ದೊರೇಶ್ ಸೇರಿದಂತೆ ಅತಿಥಿಗಳು ಮಾತನಾಡಿದರು ವೇದಿಕೆಯಲ್ಲಿ ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ನಾಯಂದರ ಆರ್. ಶಿವಾಜಿ, ದಾನಿಗಳಾದ ಪಟ್ರಂಗಡ ಧನಿರತನ್, ಕೈಕೇರಿ ಸವಿತಾ ಸಮಾಜದ ಅಧ್ಯಕ್ಷ ವೇದಪಂಡ ಬಿದ್ದಪ್ಪ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಸಮಾಜದ ಸದಸ್ಯ ರಾಕ್ಮಿ ಪ್ರವೀಣ್ ಸ್ವಾಗತಿಸಿ, ಸುಮನ್ ಮನೋಜ್ ನಿರೂಪಿಸಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.