ಕುಶಾಲನಗರ, ಏ. ೩: ಬೈಕೊಂದು ರಸ್ತೆ ಬದಿ ಗೋಡೆಗೆ ಡಿಕ್ಕಿ ಹೊಡೆದು ಇಬ್ಬರು ಸವಾರರು ಮೃತಪಟ್ಟ ಘಟನೆ ಕುಶಾಲನಗರ ಸಮೀಪ ಕೊಪ್ಪ ಗ್ರಾಮದ ಗುಡ್ಡೆನಹಳ್ಳಿ ಬಳಿ ನಡೆದಿದೆ.

ಗುಡ್ಡೇನಹಳ್ಳಿ ಗ್ರಾಮದ ಪೃಥ್ವಿ(೨೧) ಮತ್ತು ಲಕ್ಷ್ಮಿಪುರದ ನಿವಾಸಿ ಅಶೋಕ (೨೧) ಮೃತಪಟ್ಟ ಯುವಕರು. ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ಗಾಯಗೊಂಡ ಇಬ್ಬರು ಯುವಕರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಬೈಲಕೊಪ್ಪ ಪೊಲೀಸರು ತಿಳಿಸಿದ್ದಾರೆ.

ತಮ್ಮ ಸ್ನೇಹಿತನ ಬೈಕನ್ನು ಪಡೆದು ಅಲ್ಲಿನ ಖಾಸಗಿ ಶಾಲೆಯ ಕಡೆಯಿಂದ ಕೊಪ್ಪ ಕಡೆಗೆ ಆಗಮಿಸುತ್ತಿದ್ದ ಸಂದರ್ಭ ಗುಡ್ಡೇನಹಳ್ಳಿ ಬಳಿ ಬೈಕ್ ಆಯತಪ್ಪಿ ರಸ್ತೆ ಬದಿಯ ಕಾಂಪೌAಡ್‌ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗದೆ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಯುವಕರಿಬ್ಬರೂ ಅಲ್ಲಿನ ಪೈಪ್ ತಯಾರಿಕಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆಗೆ ಸಂಬAಧಿಸಿದAತೆ ಬೈಲಕೊಪ್ಪ ಪೊಲೀಸರು ಮೊಕದ್ದಮ್ಮೆ ದಾಖಲಿಸಿಕೊಂಡಿದ್ದಾರೆ.