ರಾಷ್ಟಿçÃಯ ಹೆದ್ದಾರಿಗಳಲ್ಲಿ ಸುಸೂತ್ರವಾಗಿ , ಟ್ರಾಫಿಕ್ ಜಾಮ್ ರಹಿತ ಟೋಲ್ ಸಂಗ್ರಹಾತಿಗೆ ೨೦೧೪ನೆ ಇಸವಿಯಲ್ಲಿ ಫಾಸ್ಟ್ಟ್ಯಾಗ್ ಎಂಬ ವಿನೂತನ ತಂತ್ರಜ್ಞಾನವನ್ನು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರವು ಪರಿಚಯಿಸಿತು. ಕೆಲ-ತಾಂತ್ರಿಕ ಅಡೆತಡೆಗಳು ಇತ್ಯಾದಿ ಸಮಸ್ಯೆಗಳಿಂದ ತಂತ್ರಜ್ಞಾನವು ಮೊದಲ ಕೆಲ ವರ್ಷಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯಚರಿಸಲು ವಿಫಲವಾಯಿತಾ ದರೂ ನಂತರದಲ್ಲಿ ಗಣನೀಯವಾಗಿ ಪ್ರಖ್ಯಾತಿ ಪಡೆಯುತ್ತಾ ಬೆಳೆದು ಇದೀಗ ಬಹುತೇಕ ಎಲ್ಲ ವಾಹನಗಳಲ್ಲಿ ಫಾಸ್ಟ್ಟ್ಯಾಗ್ ಸ್ಟಿಕ್ಕರ್ ಅಳವಡಿಕೆ ಯಾಗಿದೆ. ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ ಅನವಶ್ಯಕ ಸಮಯ ವ್ಯಯಿಸಿ ಟೋಲ್ ಹಣ ಪಾವತಿಸುವ ಸಂದರ್ಭ ಸಾಲುಗಟ್ಟಲೆ ವಾಹನಗಳ ನಡುವೆಯೇ ಟೋಲ್ ಬೂತ್ಗಳಲ್ಲಿ ನಗದು ನೀಡಿ ಮುಂದೆ ಸಾಗುತ್ತಿದ್ದ ವ್ಯವಸ್ಥೆಗೆ ಪರ್ಯಾಯವಾಗಿ ಫಾಸ್ಟ್ಟ್ಯಾಗ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು, ಹೆಸರಿಗೆ ತಕ್ಕಂತೆಯೇ ಈ ಫಾಸ್ಟ್ಟ್ಯಾಗ್ ಕಾರ್ಯಚರಣೆ ಯನ್ನೂ ಮಾಡುತ್ತಿದೆ. ಆದರಿದೀಗ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇತ್ತೀಚೆಗಷ್ಟೆ ಹೊಸದೊಂದು ಘೋಷಣೆಯನ್ನು ಮಾಡಿದ್ದಾರೆ. ಫಾಸ್ಟ್ಟ್ಯಾಗ್ಗೆ ಪರ್ಯಾಯವಾಗಿ ನೂತನ ತಂತ್ರಜ್ಞಾನ ‘ಜಿ.ಪಿ.ಎಸ್ ಬೇಸ್ಡ್ ಟೋಲ್ ಕಲೆಕ್ಷನ್’ ಅನ್ನು ಶೀಘ್ರವಾಗಿ ಪರಿಚಯಿಸಲಾಗುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಪ್ರಾಯೋಗಿಕವಾಗಿ ಅನುಷ್ಠಾನ ಗೊಂಡಲ್ಲಿ ಫಾಸ್ಟ್ಟ್ಯಾಗ್ ವ್ಯವಸ್ಥೆಯನ್ನು ಕೈಬಿಡಲಾಗುತ್ತದೆ.
ಕ್ರಮಿಸಿದ ದೂರಕ್ಕೆ ತಕ್ಕಂತೆ ಟೋಲ್ ಸಂಗ್ರಹ
ಟೋಲ್ ಬೂತ್ಗಳ ಅವಶ್ಯಕತೆಯೇ ಇಲ್ಲ..!
ಜಿ.ಪಿ.ಎಸ್ ಆಧಾರಿತ ಟೋಲ್ ವ್ಯವಸ್ಥೆಯಲ್ಲಿ ವಾಹನಗಳು ಹೆದ್ದಾರಿಗಳಲ್ಲಿ ಕ್ರಮಿಸಿದ ದೂರಕ್ಕೆ ತಕ್ಕಂತೆ ಟೋಲ್ ಸಂಗ್ರಹಾತಿಯಾಗಲಿದೆ. ಹಾಗೂ ಈ ವ್ಯವಸ್ಥೆಯಡಿಯಲ್ಲಿ ವಾಹನ ಸವಾರರು ಟೋಲ್ ಹಣ ನೀಡಲು ವಾಹನಗಳನ್ನು ನಿಲ್ಲಿಸುವ ಅಗತ್ಯತೆಯೇ ಬರುವುದಿಲ್ಲ. ಫಾಸ್ಟ್ಟ್ಯಾಗ್ ವ್ಯವಸ್ಥೆಯಲ್ಲಿ ಟೋಲ್ಬೂತ್ಗಳಲ್ಲಿನ ಕ್ಯಾಮರಾಗಳು ವಾಹನದಲ್ಲಿನ ಫಾಸ್ಟ್ಟ್ಯಾಗ್ಗಳನ್ನು ವೇಗವಾಗಿ ಸ್ಕಾö್ಯನ್ ಮಾಡಿದರೂ ವಾಹನಗಳು ೨, ೩ ಸೆಕೆಂಡುಗಳು ನಿಲ್ಲುವ ಅಗತ್ಯತೆ ಇದೆ. ಆದರೆ ಜಿ.ಪಿ.ಎಸ್ ಆಧಾರಿತ ಟೋಲ್ ವ್ಯವಸ್ಥೆಯಲ್ಲಿ ವಾಹನಗಳು ನಿಲ್ಲುವ ಸನ್ನಿವೇಶವೇ ಬರುವುದಿಲ್ಲ. ಹೆದ್ದಾರಿಯಲ್ಲಿ ವಾಹನ ಎಷ್ಟು ದೂರ ಚಲಿಸಿದೆ ಎಂಬುದನ್ನು ಉಪಗ್ರಹ ಹಾಗೂ ಇತರ ಟ್ರಾಕಿಂಗ್ ಸಿಸ್ಟಮ್ಗಳು ಪತ್ತೆ ಹಚ್ಚಿ ನೇರವಾಗಿ ಚಲಿಸಿದಷ್ಟು ದೂರಕ್ಕನುಗುಣ ವಾಗಿ ಟೋಲ್ ಸಂಗ್ರಹವಾಗುತ್ತದೆ.
ಪ್ರತಿ ವಾಹನದಲ್ಲಿರಬೇಕು ಆನ್-ಬೋರ್ಡ್ ಟ್ರಾಕಿಂಗ್ ಯೂನಿಟ್ (ಒ.ಬಿ.ಯು)
ಈ ನೂತನ ಟೋಲ್ ಸಂಗ್ರಹಾತಿ ವ್ಯವಸ್ಥೆ ಯಶಸ್ವಿಯಾಗಬೇಕಿದ್ದಲ್ಲಿ, ಪ್ರತಿಯೊಂದು ವಾಹನದಲ್ಲಿ ಆನ್-ಬೋರ್ಡ್ ಟ್ರಾಕಿಂಗ್ ಯೂನಿಟ್ ಅಳವಡಿಸಿರಬೇಕು. ಫಾಸ್ಟ್ಟ್ಯಾಗ್ ವ್ಯವಸ್ಥೆಯಲ್ಲಿ ಹೇಗೆÀ ಎಲ್ಲ ವಾಹನಗಳಲ್ಲಿ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಫಾಸ್ಟ್ಟ್ಯಾಗ್ ಸ್ಟಿಕ್ಕರ್ ಅಳವಡಿಸುವುದು ಕಡ್ಡಾಯವಾಗಿದೆ, ಅದೇ ರೀತಿ ಈ ಟ್ರಾಕಿಂಗ್ ಯೂನಿಟ್ ಕೂಡ ಪ್ರತಿ ವಾಹನದಲ್ಲಿರುವುದು ಅತ್ಯಗತ್ಯ. ಇದು ಇದ್ದರೆ ಮಾತ್ರ ವಾಹನಗಳನ್ನು ಟ್ರಾಕ್ ಮಾಡಿ ಎಷ್ಟು ದೂರ ಚಲಿಸಿವೆ ಎಂದು ಕಂಡು ಹಿಡಿದು ಈ ಆಧಾರದಲ್ಲಿ ಟೋಲ್ ಹಣವನ್ನು ಸಂಗ್ರಹಾತಿ ಮಾಡಲು ಸಾಧ್ಯವಾಗುತ್ತದೆ. ಟೋಲ್ ರಸ್ತೆಗಳಲ್ಲಿ, ಹೆದ್ದಾರಿಗಳಲ್ಲಿ ವಾಹನ ಚಲಿಸುವಾಗ ವಾಹನಕ್ಕೆ ಅಳವಡಿಸಿರುವ ಒ.ಬಿ.ಯು, ವಾಹನದ ಸ್ಥಳ(ಕೋ-ಆರ್ಡಿನೇಟ್)ದ ನಿಖರವಾದ ಮಾಹಿತಿಯನ್ನು ದಾಖಲಿಸುತ್ತದೆ. ದಾಖಲಾದ ಈ ಮಾಹಿತಿ ಯನ್ನು ಒ.ಬಿ.ಯು ನೇರವಾಗಿ ಉಪಗ್ರಹಕ್ಕೆ ರವಾನಿಸುವ ಮೂಲಕ ಟೋಲ್ ರಸ್ತೆಯಲ್ಲಿ ಎಷ್ಟು ದೂರ ವಾಹನ ಚಲಿಸಿದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತದೆ.
ಜಿ.ಎನ್.ಎಸ್.ಎಸ್ (ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್) ಬಳಸಿ ಜಿ.ಪಿ.ಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಸಹಕಾರದಲ್ಲಿ ಈ ನೂತನ ಟೋಲ್ ವ್ಯವಸ್ಥೆ ಕಾರ್ಯಚರಿಸಲಿದೆ. ಇದಲ್ಲದೆ ಹೆದ್ದಾರಿಗಳ ಸೂಕ್ತ ಪ್ರದೇಶಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿ ವಾಹನಗಳ ನೋಂದಣಿ ಸಂಖ್ಯೆಯನ್ನು ಚಿತ್ರೀಕರಿಸಿ ನೂತನ ವ್ಯವಸ್ಥೆಯಡಿಯಲ್ಲಿ ವಾಹನವು ಟೋಲ್ ರಸ್ತೆಯಲ್ಲಿ ಚಲಿಸಿರುವ ದೂರ ಸರಿಯಾಗಿ ದಾಖಲಾಗಿದೆಯೇ ಎಂಬುದಾಗಿಯೂ ಪರಿಶೀಲನೆ ನಡೆಯುತ್ತದೆ. ಪರೀಕ್ಷಾ ಹಂತದಲ್ಲಿ ದೇಶದ ಕೆಲ ಪ್ರಮುಖ ಟೋಲ್ ರಸ್ತೆಗಳಲ್ಲಿ ಮಾತ್ರ ಈ ವ್ಯವಸ್ಥೆಯನ್ನು ಜಾರಿಗೆ ತಂದು ನಂತರದಲ್ಲಿ ವಿಸ್ತರಿಸುವ ಚಿಂತನೆ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ್ದಾಗಿದೆ.
ಈ ಟೋಲ್ ಸಂಗ್ರಹಾತಿ ವ್ಯವಸ್ಥೆಯಲ್ಲಿ ಒ.ಬಿ.ಯು ಪ್ರಮುಖವಾದ ಪಾತ್ರ ವಹಿಸುತ್ತದೆ. ಸದ್ಯದ ವಟ್ಟಿಗೆ ಈ ತಂತ್ರಜ್ಞಾನವು ದೇಶದ ಯಾವುದೇ ವಾಹನದಲ್ಲಿ ಅಳವಡಿಕೆಯಾಗಿಲ್ಲ, ಒ.ಬಿ.ಯು ಗಳನ್ನು ಹೇಗೆ ಪಡೆಯುವುದು ಎಂಬ ಮಾಹಿತಿಯೂ ಇನ್ನು ಅಧಿಕೃತವಾಗಿಲ್ಲ. ಅದಾಗ್ಯೂ ಫಾಸ್ಟ್ಟ್ಯಾಗ್ ರೀತಿಯೇ ಒ.ಬಿ.ಯು ಅನ್ನು ಕೂಡ ಖರೀದಿಸುವುದು ಅಗತ್ಯತೆ ಬರಬಹುದು ವಾಹನದ ನೋಂದಣಿ ಸಂಖ್ಯೆಯನ್ನು ಸರಕಾರದ ಅಧಿಕೃತ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ನೀಡಿ ಕೆ.ವೈ.ಸಿ ಮಾಡಿಸಿದ ನಂತರ ಪ್ರತಿ ವಾಹನ ನೋಂದಣಿ ಸಂಖ್ಯೆಗೆ ಅನುಗುಣವಾಗಿ ಒಂದು ಒ.ಬಿ.ಯು ಲಭ್ಯವಾಗುವ ನಿರೀಕ್ಷೆಯಿದೆ. ವಾಹನಗಳು ಚಲಿಸಿದ ದೂರಕ್ಕೆ ಅನುಗುಣವಾಗಿ ಈ ಒ.ಬಿ.ಯುಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಿಂದ ಹಣ ಸಂಗ್ರಹಾತಿಯಾಗಲಿದೆ.
ವಾಹನವು ಚಲಿಸಿರುವ ದೂರದ ಮಾಹಿತಿ ನೇರವಾಗಿ ಉಪಗ್ರಹಕ್ಕೆ ರವಾನೆಯಾಗುವುದರಿಂದ ಈ ವ್ಯವಸ್ಥೆಯಡಿಯಲ್ಲಿ ಟೋಲ್ ಬೂತ್ಗಳ ಅವಶ್ಯಕತೆಯೇ ಇರುವುದಿಲ್ಲ ಎಂಬುದು ಈ ವ್ಯವಸ್ಥೆಯಲ್ಲಿನ ಪ್ರಮುಖ ಅನುಕೂಲ ವಾಗಿದೆ. ನೀವು ಚಲಿಸಿದಷ್ಟೆ ದೂರಕ್ಕೆ ಮಾತ್ರ ಟೋಲ್ ಸಂಗ್ರಹಾತಿಯಾಗುತ್ತದೆ. ಫಾಸ್ಟ್ಟ್ಯಾಗ್ ವ್ಯವಸ್ಥೆಯಡಿಯಲ್ಲಿ ಇದು ಸಾಧ್ಯವಿಲ್ಲ. ಟೋಲ್ ಬೂತ್ ಪ್ರವೇಶದಲ್ಲಿಯೇ ಹಣ ಸಂಗ್ರಹಾತಿಯಾಗುತ್ತಿದ್ದ ಕಾರಣ ಟೋಲ್ ರಸ್ತೆಯಲ್ಲಿ ಸಂಪೂರ್ಣವಾಗಿ ಚಲಿಸದಿದ್ದರೂ ಟೋಲ್ ಮಾತ್ರ ಪೂರ್ಣ ಪ್ರಮಾಣದಲ್ಲಿ ಸಂಗ್ರಹಾತಿಯಾಗುತ್ತದೆ. ಹಾಗು ಕೆಲವೊಂದು ಸನ್ನಿವೇಶಗಳಲ್ಲಿ ಕೆಲ ಸವಾರರು ಟೋಲ್ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ ಟೋಲ್ಅನ್ನು ತಪ್ಪಸುತ್ತಾರೆ. ಇವೆಲ್ಲವೂ ನೂತನ ವ್ಯವಸ್ಥೆಯಲ್ಲಿ ಸರಿದೂಗಿಸುವ ನಿರೀಕ್ಷೆಯಿದೆ.
ಜಿ.ಪಿ.ಎಸ್ ಆಧಾರಿತ ಟೋಲ್ ಸಂಗ್ರಹಾತಿಯು ಹೊಸ ತಂತ್ರಜ್ಞಾನ ವೇನಲ್ಲ. ಜರ್ಮನಿ, ಸಿಂಗಾಪುರ ರಾಷ್ಟçಗಳು ಇದನ್ನು ಈಗಾಗಲೇ ಪಾಲಿಸುತ್ತಿವೆ. ಆದರೆ ಇವೆರಡು ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರುವ ಹೆದ್ದಾರಿಗಳು ಹತ್ತು ಪಟ್ಟಿಗಿಂತಲೂ ಅಧಿಕ, ವಾಹನ ಗಳು ಕೂಡ ಕೋಟಿ ಸಂಖ್ಯೆಯಲ್ಲಿರುವ ಕಾರಣ ಈ ವ್ಯವಸ್ಥೆ ಯನ್ನು ಯಶಸ್ಸುಗೊಳಿಸುವುದು ಸಾಧಾರಣ ಕಾರ್ಯವಲ್ಲ.
-ಪ್ರಜ್ವಲ್ ಜಿ. ಆರ್.