ಕೂಡಿಗೆ, ಏ. ೩: ಕಳೆದ ಎರಡು ದಿನಗಳ ಹಿಂದೆ ಬಾಣಾವರ ಸಮೀಪದ ನಿಡ್ತ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿದ ಹೊಸಗುತ್ತಿ ಗ್ರಾಮದಲ್ಲಿ ರೈತನನ್ನು ತುಳಿದು ಸಾಯಿಸಿದ ಪುಂಡಾನೆಯನ್ನು ಹಿಡಿಯಲು ಸರಕಾರದಿಂದ ಅರಣ್ಯ ಇಲಾಖೆಗೆ ಅನುಮತಿ ದೊರೆತ ಹಿನ್ನೆಲೆಯಲ್ಲಿ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿಗಳ ತಂಡ ಪುಂಡಾನೆಯನ್ನು ಹಿಡಿಯುವ ಕಾರ್ಯಾಚರಣೆಯನ್ನು ಬಾಣಾವರ, ಮತ್ತು ನಿಡ್ತ ಅರಣ್ಯ ವ್ಯಾಪ್ತಿಯಲ್ಲಿ ಕೈಗೊಂಡಿದೆ.
ಮAಗಳವಾರ ರಾತ್ರಿ ಪುಂಡಾ ನೆಯು ಬಾಣಾವರ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ೩ ತಂಡಗಳಾಗಿ ಆ ಕಾಡಾನೆಯನ್ನು ಗುರುತಿಸಿ ಸೆರೆ ಹಿಡಿಯಲು ಸಿದ್ಧತೆಯೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಾರ್ಯಾಚರಣೆಯಲ್ಲಿ ಡಾ. ಚಿಟ್ಟಿಯಪ್ಪ, ಡಾ. ರಮೇಶ್, ನುರಿತ ದುಬಾರೆ ಮತ್ತು ಆನೆಕಾಡಿನ ಕಾವಾಡಿಗರು ಸೇರಿದಂತೆ ಸೋಮ ವಾರಪೇಟೆ ವಲಯ ಅರಣ್ಯ ಇಲಾಖೆಯ ವಿಭಾಗದ ಸಿಬ್ಬಂದಿ, ಶನಿವಾರಸಂತೆ ವಲಯದ ಸಿಬ್ಬಂದಿ, ಬಾಣಾವರ ವಿಭಾಗದ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ಸಂರಕ್ಷಣಾಧಿಕಾರಿ ಗೋಪಾಲ, ಸೋಮ ವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ, ಶನಿವಾರಸಂತೆ ವಲಯ ಅರಣ್ಯ ಅಧಿಕಾರಿ ಗಾನಶ್ರಿ ಹಾಜರಿದ್ದರು.