ನಾಪೋಕ್ಲು, ಏ. ೩: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್‌ಹಾಕಿ ನಮ್ಮೆಯ ಐದನೇ ದಿನದ ಪಂದ್ಯಾಟದಲ್ಲಿ ಪಾಲಚಂಡ ತಂಡ ೬ ಗೋಲುಗಳ ಭರ್ಜರಿ ಜಯ ದಾಖಲಿಸಿದೆ.

ಪಾಲಚಂಡ ಮತ್ತು ಬಿಜ್ಜಂಡ ತಂqಗಳÀ ವಿರುದ್ಧ ನಡೆದ ಪಂದ್ಯದಲ್ಲಿ ಪಾಲಚಂಡ ತಂಡವು ಬಿಜ್ಜಂಡ ತಂಡವನ್ನು ೬-೦ ಗೋಲುಗಳ ಅಂತರದಿAದ ಸೋಲಿಸಿ ಜಯಭೇರಿ ಭಾರಿಸಿತು. ಪಾಲಚಂಡ ತಂಡದ ಪರ ಪ್ರಥನ್ ಪೊನ್ನಣ್ಣ ೨, ಚೇತನ್೨, ಸಜನ್ ಸೋಮಣ್ಣ, ಜನಕ್ ಸುಬ್ಬಯ್ಯ ತಲಾ ಒಂದು ಗೋಲು ದಾಖಲಿಸಿದರು. ನಂಬಡಮAಡ ಮತ್ತು ಪೊನ್ನೋಲತ್ತಂಡ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ನಂಬುಡಮAಡ ತಂಡವು ಪೊನ್ನೋಲತಂಡ ತಂಡವನ್ನು ೩-೧ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ನಡಿಕೇರಿಯಂಡ ಮತ್ತು ವಾಟೇರಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಾಟೇರಿರ ತಂಡವು ನಡಿಕೇರಿಯಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕೇಕಡ ಮತ್ತು ಕೂಪದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೂಪದಿರ ತಂಡವು ಕೇಕಡ ತಂಡವನ್ನು ಟೆöÊಬ್ರೇಕರ್‌ನಲ್ಲಿ ೩-೧ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮೊಣ್ಣಂಡ ಮತ್ತು ಆಪಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊಣ್ಣಂಡ ತಂಡವು ಆಪಟ್ಟಿರ ತಂಡವನ್ನು ೩-೦ ಗೋಲುಗಳಿಂದ ಪರಾಭವಗೊಳಿಸಿತು. ತಂಬAಡ ಮತ್ತು ಪಾಲೆಯಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾಲೆಯಡ ತಂಡವು ತಂಬAಡ ತಂಡವನ್ನು ೩-೦ ಗೋಲುಗಳಿಂದ ಪರಾಭವಗೊಳಿಸಿತು. ಕಲ್ಲೇಂಗಡ ಮತ್ತು ಪಳಂಗೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲ್ಲೇಂಗಡ ತಂಡವು ಪಳಂಗೇಟಿರ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿತು. ಚೊಟ್ಟೇರ ಮತ್ತು ಕಾಯಪಂಡ ತಂಡಗಳÀ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೊಟ್ಟೇರ ತಂಡವು ಕಾಯಪಂಡ ತಂಡವನ್ನು ೨-೧ ಗೋಲಿನಿಂದ ಸೋಲಿಸಿತು. ಕೊಕ್ಕಲೆಮಾಡ ಮತ್ತು ಬಾಚಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾಚಮಂಡ ತಂಡವು ಕೊಕ್ಕಲೆಮಾಡ ತಂಡವನ್ನು ೩-೦ ಗೋಲಿನಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬಲ್ಯಂಡ ಮತ್ತು ಚೆರುವಾಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆರುವಾಳಂಡ ತಂಡವು ಬಲ್ಯಂಡ ತಂಡವನ್ನು ೨-೧ ಗೋಲಿನಿಂದ ಪರಾಭವಗೊಳಿಸಿತು. ಬೊಜ್ಜಂಗಡ ಮತ್ತು ಮುದ್ದಿಯಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುದ್ದಿಯಡ ತಂಡವು ಬೊಜ್ಜಂಗಡ ತಂಡವನ್ನು ೫-೨ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಪುಚ್ಚಿಮಾಡ ಮತ್ತು ಆತಿಥೇಯ ಕುಂಡ್ಯೋಳAಡ ತಂಡಗಳ ನಡುವಿನ ಪಂದ್ಯದಲ್ಲಿ ಕುಂಡ್ಯೋಳAಡ ತಂಡವು ಪುಚ್ಚಿಮಾಡ ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿತು.

ಅಮ್ಮಣಕುಟ್ಟಂಡ ತಂಡದ ಗೈರುಹಾಜರಿನ ಹಿನೆÀ್ನಲೆಯಲ್ಲಿ ಬೊಟ್ಟೋಳಂಡ ತಂಡ, ಕಿರಿಯಮಾಡ ತಂಡದ ಗೈರುಹಾಜರಿನ ಕಾರಣದಿಂದ ಬೈರೇಟಿರ ತಂಡ, ನೆಲ್ಲಿರ ತಂಡದ ಗೈರುಹಾಜರಿನಿಂದ ಕುಪ್ಪಣಮಾಡ ತಂಡ, ಜಬ್ಬಂಡ ತಂಡದ ಗೈರುಹಾಜರಿನಿಂದ ಚೊಟ್ಟೆಕ್‌ಮಾಡ ತಂಡ ಬೊಳ್ತಂಡ ತಂಡದ ಗೈರುಹಾಜರಿನಿಂದ ಆದೆಂಗಡ ತಂಡ ಮುಂದಿನ ಸುತ್ತು ಪ್ರವೇಶಿಸಿದವು. -ಪಿ.ವಿ.ಪ್ರಭಾಕರ್