ಕುಶಾಲನಗರ, ಏ. ೩: ಲಾರಿಯೊಂದರಲ್ಲಿ ಅಕ್ರಮವಾಗಿ ಮರಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಸಿಬ್ಬಂದಿಗಳು ಪತ್ತೆಹಚ್ಚಿ ಕ್ರಮ ಕೈಗೊಂಡಿದ್ದಾರೆ.
ಲಾರಿಯ ತಳಭಾಗದಲ್ಲಿ ಲಕ್ಷಾಂತರ ಮೌಲ್ಯದ ಕರಡಿ ಜಾತಿಯ ಮರ ತುಂಬಿಸಿ ಅದರ ಮೇಲ್ಭಾಗದಲ್ಲಿ ಕಾಫಿ ಬಡ್ಡೆಗಳನ್ನು ಸಾಗಿಸುತ್ತಿದ್ದ ಸಂದರ್ಭ ತಪಾಸಣಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಧರ್ಮಪಾಲ್ ಮತ್ತು ಧರ್ಮರಾಜ್ ಅವರುಗಳು ಪತ್ತೆ ಹಚ್ಚಿ ವಿಚಾರಣೆ ಮಾಡಿದ ಸಂದರ್ಭ ಲಕ್ಷಾಂತರ ಮೌಲ್ಯದ ಕರಡಿ ಜಾತಿಯ ಮರದ ಬೃಹತ್ ಗಾತ್ರದ ದಿಮ್ಮಿಗಳು ಪತ್ತೆಯಾಗಿವೆ.
ಚೆಟ್ಟಳ್ಳಿ ಕಡೆಯಿಂದ ಮರಗಳನ್ನು ತುಂಬಿಕೊAಡು ಕುಶಾಲನಗರದ ಮೂಲಕ ಹುಣಸೂರಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಈ ಬಗ್ಗೆ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಉಪ ವಲಯ ಅರಣ್ಯ ಅಧಿಕಾರಿ ದೇವಯ್ಯ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ ಲಾರಿ ಮತ್ತು ಮರಗಳನ್ನು ವಶಪಡಿಸಿಕೊಂಡು ಚಾಲಕ ಮತ್ತು ಆರು ಮಂದಿ ಕಾರ್ಮಿಕರ ಮೇಲೆ ಕ್ರಮ ಕೈಗೊಂಡಿದ್ದಾರೆ.