ಟಿ ಹೆಚ್.ಜೆ. ರಾಕೇಶ್
ಮೈಸೂರು, ಏ. ೩: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭಗೊAಡಿದೆ. ರಾಜಕೀಯ ಜಿದ್ದಾಜಿದ್ದಿ, ತಂತ್ರಗಾರಿಕೆ ಜೋರಾಗಿದೆ. ‘ಲೋಕ ಕಣ'ದಲ್ಲಿ ಪ್ರಚಾರವೂ ಬಿರುಸು ಪಡೆದುಕೊಂಡಿದೆ. ಅತ್ಯಂತ ಕೌತುಕ, ಉಭಯ ಪಕ್ಷಗಳಿಗೆ ಪ್ರತಿಷ್ಠೆಗೆ ಕಾರಣವಾಗಿ, ‘ಹೈವೋಲ್ಟೆಜ್ ಕ್ಷೇತ್ರ' ಎಂದು ಬಿಂಬಿತವಾಗುತ್ತಿರುವ ಕೊಡಗು-ಮೈಸೂರು ಕಣದಲ್ಲಿ ಯದುವೀರ ಒಡೆಯರ್ ಹಾಗೂ ಎಂ. ಲಕ್ಷö್ಮಣ್ ನಡುವಿನ ನೇರ ಹಣಾಹಣಿಗೆ ಉಮೇದುವಾರಿಕೆ ವೇದಿಕೆ ಕಹಳೆ ಮೊಳಗಿಸಿದೆ.
ಕೊಡಗು-ಮೈಸೂರು ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷö್ಮಣ್ ಗೌಡ ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ರಾಜಕೀಯ ರೋಚಕತೆಗೆ ನಾಂದಿ ಹಾಡಿದರು.
ಈಗಾಗಲೇ ಉಭಯ ಪಕ್ಷಗಳ ನಡುವೆ ‘ಗದ್ದುಗೆ ಗುದ್ದಾಟ'ದ ಅಬ್ಬರ ಆರಂಭಗೊAಡಿದೆ. ಕೆಲವು ದಿನಗಳ ಹಿಂದೆ ಯದುವೀರ ಹಾಗೂ ಎಂ.ಲಕ್ಷö್ಮಣ್ ಕಾವೇರಿ ಉಗಮಸ್ಥಳ ತಲಕಾವೇರಿಯಿಂದ ಪ್ರಚಾರ ಆರಂಭಿಸಿ ‘ಲೋಕಸಮರ'ಕ್ಕೆ ಮುನ್ನುಡಿ ಇಟ್ಟಿದ್ದರು.
ಬಿಜೆಪಿಗೆ ಕ್ಷೇತ್ರ ಉಳಿಸಿಕೊಳ್ಳಬೇಕೆಂಬ ಹಠ - ಕಾಂಗ್ರೆಸ್ಗೆ ಅಧಿಕಾರ ಮರುಸ್ಥಾಪಿಸಬೇಕೆಂಬ ತವಕ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರಕಾರದ ಸಚಿವರು ಈ ಕ್ಷೇತ್ರದ ಮೇಲೆ ಗಂಭೀರ ಹಿಡಿತ ಸಾಧಿಸಿ ಗೆಲುವಿಗೆ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇನ್ನೂ ಕೊಡಗು-ಮೈಸೂರು ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಸೋಲು ಕಂಡಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸ್ಥಾನದಲ್ಲಿ ಗೆಲ್ಲಲಬೇಕೆಂಬ ನಿಟ್ಟಿನಲ್ಲಿ ರೂಪುರೇಷೆಗಳಿಗೆ ಕೈ ಹಾಕಿದೆ. ಇವೆಲ್ಲದರ ನಡುವೆ ಇಂದು ಉಭಯ ಪಕ್ಷಗಳ ಅಭ್ಯರ್ಥಿಗಳು ಒಂದೇ ದಿನ ನಾಮಪತ್ರ ಸಲ್ಲಿಸುವ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದರು.
ಮೈತ್ರಿಯ ಭರ್ಜರಿ ರೋಡ್ ಶೋ
ಬಿಜೆಪಿಯ ಅಧಿಕೃತ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆ ಆವರಣದ ಕೋಟೆ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ೧೦.೩೦ಕ್ಕೆ ಕೋಟೆ ಆಂಜನೇಯನಿಗೆ ಪೂಜೆ ಸಲ್ಲಿಸಿದ ಯದುವೀರ ಒಡೆಯರ್ ತೆರೆದ ವಾಹನದಲ್ಲಿ ರಾಜಬೀದಿಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರ ನಡುವೆ ಮೆರವಣಿಗೆ ನಡೆಸಿದರು. ರೋಡ್ ಶೋನಲ್ಲಿ ಬಿಜೆಪಿ ನಾಯಕರೊಂದಿಗೆ, ಜೆಡಿಎಸ್ ನಾಯಕರು ಸಾಥ್ ನೀಡಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕರೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ಚುನಾವಣಾ ಉಸ್ತುವಾರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ, ವೀರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಹಾಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಸಿ.ಹೆಚ್. ವಿಜಯಶಂಕರ್, ಬಿಜೆಪಿ ನಾಯಕಿ, ನಟಿ ಮಾಳವಿಕ, ಅವಿನಾಶ್, ಮಾಜಿ ಶಾಸಕರುಗಳಾದ ಎಸ್.ವಿ. ರಾಮದಾಸ್, ನಾಗೇಂದ್ರ, ಕೃಷ್ಣರಾಜ ಶಾಸಕ ಶ್ರೀವತ್ಸ ಸೇರಿದಂತೆ ಇನ್ನಿತರ ನಾಯಕರು ಸಾಥ್ ನೀಡಿದರು.
ಮೆರವಣಿಗೆ ನಂತರ ಸಿದ್ಧಾರ್ಥ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರಿಗೆ ಯದುವೀರ್ ೨ ಸೆಟ್ಗಳಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಹಾಲಿ ಸಂಸದ ಪ್ರತಾಪ್ ಸಿಂಹ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಜೊತೆಯಾದರು.
ಕಾಂಗ್ರೆಸ್ನಿAದಲೂ ಶಕ್ತಿ ಪ್ರದರ್ಶನ
ಮಧ್ಯಾಹ್ನ ವೇಳೆಯಲ್ಲಿ ಮೈಸೂರಿನ ಯಲಕನಹಳ್ಳಿಯಲ್ಲಿ ಬಹಿರಂಗ ಸಭೆ ನಡೆಸುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶಿಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ರೇಷ್ಮೆ ಸಚಿವ ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಮರಿತಿಪ್ಪೇಗೌಡ, ಡಾ. ತಿಮ್ಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಬಹಿರಂಗ ಸಭೆಗೆ ಮುನ್ನ ಎಂ. ಲಕ್ಷ್ಮಣ್ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಕೆ. ವೆಂಕಟೇಶ್, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಅವರುಗಳೊಂದಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಡಾ. ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು.
ಜಿಲ್ಲೆಯ ನಾಯಕರು ಭಾಗಿ
ಕೊಡಗು ಜಿಲ್ಲೆಯಿಂದಲೂ ನೂರಾರು ಸಂಖ್ಯೆಯ ಬಿಜೆಪಿ-ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಮೇದುವಾರಿಕೆಯಲ್ಲಿ ಭಾಗಿಯಾದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಕುಂಞAಗಡ ಅರುಣ್ ಭೀಮಯ್ಯ, ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ. ಲೋಕೇಶ್, ನೆಲ್ಲೀರ ಚಲನ್ ಕುಮಾರ್, ಜಿಲ್ಲಾ ವಕ್ತಾರ ಮಹೇಶ್ ಜೈನಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಫ್ರುರವೀಂದ್ರ, ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ತೇಲಪಂಡ ಶಿವಕುಮಾರ್, ವೀರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಪ್ರಮುಖರಾದ ಕಾಂತಿ ಸತೀಶ್, ಮಲ್ಲಂಡ ಮಧು ದೇವಯ್ಯ, ಪಟ್ರಪಂಡ ರಘು, ಮೂಕಂಡ ಶಶಿ ಸುಬ್ರಮಣಿ, ಕುಲ್ಲಚಂಡ ಬೋಪಣ್ಣ, ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ಎಲ್. ವಿಶ್ವ ವೀರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಮಂಜುನಾಥ್ ಸೇರಿದಂತೆ ನೂರಾರು ಕಾರ್ಯಕರ್ತರು ಯದುವೀರ್ ಉಮೇದುವಾರಿಕೆಯಲ್ಲಿ ಪಾಲ್ಗೊಂಡರು.
ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ಗೆ ಬೆಂಬಲ ಸೂಚಿಸಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, (ಮೊದಲ ಪುಟದಿಂದ) ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ಎಂ.ಎಲ್.ಸಿ. ಶಾಂತೆಯAಡ ವೀಣಾ ಅಚ್ಚಯ್ಯ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಹೆಚ್.ಎಸ್ ಚಂದ್ರಮೌಳಿ, ಕೆ.ಪಿ. ಚಂದ್ರಕಲಾ, ಜಿಲ್ಲಾ ವಕ್ತಾರ ತೆನ್ನೀರ ಮೈನಾ, ವಿ.ಕೆ.ಲೋಕೇಶ್, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು,ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹಮೀದ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರುಗಳಾದ ಅಬ್ದುಲ್ ಸಲಾಂ, ನೆರವಂಡ ಉಮೇಶ್, ಪ್ರಮು ಖರಾದ ಕೆ.ಎ. ಯಾಕೂಬ್, ರಾಜೇಶ್ ಯಲ್ಲಪ್ಪ, ಮಂಡೀರ ಸದಾ ಮುದ್ದಪ್ಪ, ಆಪಟ್ಟಿರ ಟಾಟು ಮೊಣ್ಣಪ್ಪ, ಬಾನಂಡ ಪ್ರಥ್ಯು ಮೊದಲಾದವರು ಹಾಜರಿದ್ದರು.ಮೈಸೂರು ರಾಜ್ಯಕ್ಕೆ ಮಹಾರಾಜರು ನೀಡಿರುವ ಕೊಡುಗೆಯನ್ನು ನಾವು ಸ್ಮರಿಸಬೇಕು. ದೇಶದಲ್ಲಿ ೪೦೦ ಕ್ಕೂ ಹೆಚ್ಚು ಸ್ಥಾನ ಗೆದ್ದು ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗುವುದು ನಿಶ್ಚಿತ. ಯದುವೀರ್ ಅವರು ಕನಿಷ್ಟ ೨ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಖಂಡಿತ. ಇದಕ್ಕೆ ಕಾರ್ಯಕರ್ತರು ಸಹಕರಿಸಬೇಕು.
- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಬಿಜೆಪಿ ಜನರ ಭಾವನೆಗಳಿಗೆ ಬೆಲೆ ನೀಡಿ ರಾಷ್ಟಿçÃಯತೆ ಮನೋಭಾವ ನೆಯಡಿ ಮುನ್ನಡೆಯುತ್ತಿದೆ. ಕಾಂಗ್ರೆಸ್ನ ಭ್ರಷ್ಟಾಚಾರ, ದುರಾಡಳಿತದಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಕೇಂದ್ರದಲ್ಲಿ ಮೋದಿ ಸರಕಾರ ಮಾಡಿದ ಉತ್ತಮ ಕೆಲಸಗಳು ಜನರಿಗೆ ತಿಳಿದಿದೆ. ಮತ್ತೊಮ್ಮೆ ಅವರು ಪ್ರಧಾನಿಯಾಗುವುದು ಖಂಡಿತ.
- ಡಾ. ಅಶ್ವತ್ಥ್ ನಾರಾಯಣ್, ಬಿಜೆಪಿ ಚುನಾವಣಾ ಉಸ್ತುವಾರಿ
ಮೈತ್ರಿ ಬಗ್ಗೆ ಪ್ರಶ್ನಿಸುತ್ತಿದ್ದ ಸಿದ್ದರಾಮಯ್ಯ ಅವರಿಗೆ ಇಂದಿನ ಮೆರವಣಿಗೆ ಉತ್ತರ ನೀಡಿದೆ. ಮೈತ್ರಿ ಗಟ್ಟಿಯಾಗಿದೆ. ಯದುವೀರ್ ಅವರಿಗೆ ದೊಡ್ಡ ಮಟ್ಟದ ಮತ ದೊರೆಯುತ್ತದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
- ಜಿ.ಟಿ. ದೇವೇಗೌಡ,
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ
ಕೊಡಗು-ಮೈಸೂರು ಕ್ಷೇತ್ರದಲ್ಲಿ ಪ್ರಬುದ್ಧ ಮತದಾರರಿದ್ದು, ಬಿಜೆಪಿಯ ಕಾರ್ಯವೈಖರಿಯನ್ನು ಗಮನಿಸಿದ್ದಾರೆ. ಪ್ರಧಾನಿ ಮೋದಿ ಅವರ ದೂರದೃಷ್ಟಿ, ೧೦ ವರ್ಷಗಳ ಸಾಧನೆ ಅಮೋಘವಾಗಿದೆ. ಯದುವೀರ್ ಅವರು ಈ ಬಾರಿ ಗೆಲ್ಲುವುದು ನಿಶ್ಚಿತ. ಹಾಗೆಂದು ಕಾರ್ಯಕರ್ತರು ಅತಿಯಾದ ಆತ್ಮವಿಶ್ವಾಸ ಹೊಂದದೆ ತಳಮಟ್ಟದಲ್ಲಿ ಪ್ರಚಾರ ನಡೆಸಬೇಕು.
- ಪ್ರತಾಪ್ ಸಿಂಹ, ಹಾಲಿ ಸಂಸದ
ಈ ಬಾರಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವನ್ನು ತಡೆದು ನಿಲ್ಲಿಸುವುದು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಜನ ಮೆಚ್ಚಿದ್ದಾರೆ. ವಿಕಸಿತ ಭಾರತಕ್ಕೆ ಮುನ್ನುಡಿ ಇಡಲು ಜನ ಸಹಕರಿಸುತ್ತಾರೆ ಎಂಬ ನಂಬಿಕೆ ಇದೆ. ಅತ್ಯಂತ ಬಹುಮತದೊಂದಿಗೆ ಯದುವೀರ್ ಗೆಲುವು ನಿಶ್ಚಿತ.
- ಕೆ.ಜಿ. ಬೋಪಯ್ಯ, ಮಾಜಿ ಶಾಸಕಮೈತ್ರಿ ಪರ್ವ ನಿಶ್ಚಿತ - ನಾಯಕರ ವಿಶ್ವಾಸ
ಮೈಸೂರು ಪ್ರಾಂತ್ಯಕ್ಕೆ ರಾಜವಂಶಕ್ಕೆ ಕೊಡುಗೆ ದೊಡ್ಡದಿದೆ. ಯದುವಂಶದ ಕುಡಿ ಈ ಕ್ಷೇತ್ರದ ಅಭ್ಯರ್ಥಿಯಾಗಿರುವುದು ಹೊಸ ಹುರುಪು ಮೂಡಿಸಿದೆ. ಪ್ರತಾಪ್ ಸಿಂಹ ಅವರು ೧೦ ವರ್ಷಗಳ ಕಾಲಾವಧಿಯಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಿದ್ದಾರೆ. ಚುನಾವಣೆ ಒಂದು ಧರ್ಮಯುದ್ಧ. ನೆಲ-ಜಲ ಹಾಗೂ ಮೈಸೂರು ಭಾಗಕ್ಕೆ ಮಾಡಿರುವ ಸಾಮಾಜಿಕ ಕಾರ್ಯದಿಂದ ಜನ ಯದುವೀರ್ ಅವರಿಗೆ ಆಶೀರ್ವಾದ ಮಾಡುತ್ತಾರೆ ಎಂಬ ಅಚಲ ವಿಶ್ವಾಸವಿದೆ. ಜನಸಾಮಾನ್ಯರೊಂದಿಗೆ ಬೆರೆತು ಜನಸೇವೆಗೆ ಯದುವೀರ ಸ್ಪರ್ಧೆ ಮಾಡಿದ್ದಾರೆ. ಜನರ ಸಹಕಾರ ಅವರಿಗೆ ಬೇಕು. ರಾಜ್ಯ ಸರಕಾರದ ಭ್ರಷ್ಟಾಚಾರಕ್ಕೆ ಮತದಾರರು ತಕ್ಕಪಾಠ ಕಲಿಸಲಿದ್ದಾರೆ.
- ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ಕಾಂಗ್ರೆಸ್ ಕಮಾಲ್ ಗ್ಯಾರಂಟಿ - ಕೈ ನಾಯಕರ ನಂಬಿಕೆ
ಲಕ್ಷö್ಮಣ್ ಅವರನ್ನು ಒಕ್ಕಲಿಗನೇ ಅಲ್ಲ ಎಂದು ಹೇಳಿ ಜನರನ್ನು ದಾರಿ ತಪ್ಪಿಸುವ ಯತ್ನ ಬಿಜೆಪಿ ಮಾಡುತ್ತಿದೆ. ಅರ್ಜಿ ಹಾಕಿ ಜಾತಿಯಲ್ಲಿ ಹುಟ್ಟುವುದಿಲ್ಲ. ಜಾತಿ-ಧರ್ಮದ ನಡುವೆ ವಿಂಗಡನೆ ಮಾಡುವ ಕೆಲಸ ನಾವು ಮಾಡುವುದಿಲ್ಲ. ವಿಶ್ವ ಮಾನವನಾಗದಿದ್ದಲ್ಲಿ, ಕನಿಷ್ಟ ಮನುಷ್ಯರಾದರು ಆಗಿ. ಕೋಮು ದ್ವೇಷ, ಭಾವನೆಗಳನ್ನು ಕೆರಳಿಸುವ ಪ್ರವೃತ್ತಿ ಬಿಜೆಪಿಯದ್ದಾಗಿದೆ. ನರೇಂದ್ರ ಮೋದಿ ೧೦ ವರ್ಷಗಳಲ್ಲಿ ಬಡವರ, ರೈತರ, ಕಾರ್ಮಿಕರ ಕಷ್ಟದ ಬಗ್ಗೆ ಮಾತನಾಡಿಲ್ಲ. ಭಾವನಾತ್ಮಕ ವಿಚಾರದೊಂದಿಗೆ ಬಡತನ, ಹಸಿವಿನ ಬಗ್ಗೆಯೂ ಮೋದಿ ಮಾತನಾಡಬೇಕಿತ್ತು. ಚುನಾವಣಾ ಪೂರ್ವ ಹೇಳಿದ್ದ ಭರವಸೆ ಈಡೇರಿಸಬೇಕು. ಆದರೆ, ಬಿಜೆಪಿ ನುಡಿದಂತೆ ನಡೆಯುವುದಿಲ್ಲ. ಬರ ಪರಿಹಾರ, ತೆರಿಗೆ ವಿಚಾರದಲ್ಲಿ ಕೇಂದ್ರದಿAದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಗಮನ ಸೆಳೆದರೂ ಯಾವುದೇ ರೀತಿಯ ಸ್ಪಂದನ ಮೋದಿ, ಅಮಿತ್ ಶಾ ನೀಡಿಲ್ಲ ಆದರೆ, ರಾಜ್ಯಕ್ಕೆ ಬಂದ ಅಮಿತ್ ಶಾ ರಾಜಕೀಯ ಲಾಭಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಬೇಕಾದರೆ ಒಂದೆ ವೇದಿಕೆಗೆ ಬನ್ನಿ ಯಾರು ಸತ್ಯ ಹೇಳುತ್ತಿದ್ದಾರೆ ಗೊತ್ತಾಗುತ್ತೆ. ಅವರಿಗೆ ಧಂ ಇಲ್ಲ. ನಾನು ಸುಳ್ಳು ಹೇಳಿದ್ದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕರ್ನಾಟಕಕ್ಕೆ ಅನ್ಯಾಯ ಮಾಡಿದ ಬಿಜೆಪಿಗೆ ತಕ್ಕ ಪಾಠ ಜನ ಕಲಿಸುತ್ತಾರೆ. ಲಕ್ಷö್ಮಣ್ ಗೆಲುವಿಗೆ ದುಡಿಯಬೇಕು. ಕೊಡಗಿನಲ್ಲಿ ೨ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಎಂಎಲ್ಎ ಗಳಿದ್ದರೆ, ಮೈಸೂರು ಜಿಲ್ಲೆಯಲ್ಲಿ ೪ ಶಾಸಕರಿದ್ದಾರೆ. ಎಲ್ಲಾ ಕ್ಷೇತ್ರಗಳಿಂದ ಮುನ್ನಡೆ ದೊರೆಯುತ್ತದೆ. ನನ್ನ ಮರ್ಯಾದೆ ಉಳಿಯಬೇಕಾದರೆ ಲೀಡ್ ಬೇಕೆ ಬೇಕು. ಲಕ್ಷö್ಮಣ್ ಗೆದ್ದರೆ ನಾನೇ ಗೆದ್ದಂತೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ