ಇನ್ನರ್ ವೀಲ್ ಸ್ನೇಹ, ಸೇವೆ ಮತ್ತು ತಿಳುವಳಿಕೆಯನ್ನು ಸೃಷ್ಟಿಸುವ ಅಂರ‍್ರಾಷ್ಟಿçÃಯ ಮಹಿಳಾ ಸಂಸ್ಥೆಯಾಗಿದೆ. ಇದು ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ೧೦೪ ದೇಶಗಳಲ್ಲಿ ೩,೮೯೫ ಕ್ಲಬ್‌ಗಳನ್ನು ಹೊಂದಿದೆ. ಇದನ್ನು ಮ್ಯಾಂಚೆಸ್ಟರ್‌ನಲ್ಲಿ ಸ್ಥಾಪಿಸಲಾಯಿತು.

ಸಂಸ್ಥೆಯನ್ನು ಅಧಿಕೃತವಾಗಿ ೧೦ ಜನವರಿ ೧೯೨೪ ರಂದು ಮಾರ್ಗರೆಟ್ ಗೋಲ್ಡಿಂಗ್ರವರು ಸ್ಥಾಪಿಸಿದರು. ಈ ದಿನಾಂಕವನ್ನು ಈಗ "ಅಂರ‍್ರಾಷ್ಟಿçÃಯ ಇನ್ನರ್ ವೀಲ್ ಡೇ" ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯAತ ಕ್ಲಬ್‌ಗಳ ಸಂಖ್ಯೆಯು ಬೆಳೆಯಿತು ಮತ್ತು ೧೯೬೭ ರಲ್ಲಿ ಇಂಟರ್‌ನ್ಯಾಷನಲ್ ಇನ್ನರ್ ವೀಲ್ ಅಸ್ತಿತ್ವಕ್ಕೆ ಬಂದಿತು. ಪ್ರಪಂಚದಾದ್ಯAತ ಅನೇಕ ದೇಶಗಳಲ್ಲಿ ಕ್ಲಬ್‌ಗಳಿವೆ. ಇನ್ನರ್ ವೀಲ್ ಕ್ಲಬ್‌ಗಳನ್ನು ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್‌ನಲ್ಲಿ ಇಪ್ಪತ್ತೊಂಬತ್ತು ಜಿಲ್ಲೆಗಳೊಂದಿಗೆ ಜಿಲ್ಲೆಗಳಾಗಿ ವರ್ಗೀಕರಿಸಲಾಗಿದೆ. ಹೆಚ್ಚಿನ ಕ್ಲಬ್‌ಗಳು ಮಾಸಿಕವಾಗಿ ಭೇಟಿಯಾಗುತ್ತವೆ. ಕ್ಲಬ್‌ಗಳು ಬೃಹತ್ ವೈವಿಧ್ಯಮಯ ದತ್ತಿಗಳಿಗೆ ಹಣವನ್ನು ಸಂಗ್ರಹಿಸುತ್ತವೆ ಮತ್ತು ದಾನ ಮಾಡುತ್ತವೆ.

ಇನ್ನರ್ ವೀಲ್ ಸಂಸ್ಥೆಯು ವಿಶ್ವಸಂಸ್ಥೆಯಲ್ಲಿ ಸಲಹಾ ಸ್ಥಾನಮಾನವನ್ನು ಹೊಂದಿರುವ ಅತಿ ದೊಡ್ಡ ಮಹಿಳಾ ಸಂಸ್ಥೆಯಾಗಿದೆ. ಕುಶಾಲನಗರದ ಇನ್ನರ್ ವೀಲ್ ಸಂಸ್ಥೆಯು ೨೦೧೪ ರಲ್ಲಿ ಸ್ಥಾಪಿಸಲಾಯಿತು, ಸಂಸ್ಥೆಯು ಡಿಸ್ಟಿçಕ್ಟ್ ೩೧೮ ರಲ್ಲಿ ಸೇರ್ಪಡೆಯಾಗಿ ಸುಮಾರು ೧೦ ವರ್ಷಗಳಿಂದ ಸಮುದಾಯ ಸೇವೆ, ರಕ್ತದಾನ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರ, ಶಾಲಾ ಹಾಗೂ ಕಾಲೇಜು ಮಕ್ಕಳಿಗೆ ಜಾಗೃತಿ ಕಾರ್ಯಕ್ರಮಗಳು, ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ, ಹಾಡಿ ಜನಾಂಗದ ಹೆಂಗಸರಿಗೆ ಸೀಮಂತ ಕಾರ್ಯಕ್ರಮ, ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಮುಂಭಾಗ ಬಸ್ ತಂಗುದಾಣ, ಇನ್ನರ್ ವೀಲ್ ಸಂಸ್ಥೆಯ ಪೋಲ್ ಅಳವಡಿಕೆ, ಮಾರ್ಗಸೂಚಿ ನಾಮಫಲಕಗಳು, ಅನಾಥಾಶ್ರಮಗಳಿಗೆ ಊಟದ ವ್ಯವಸ್ಥೆ ಹಾಗೂ ಆರೋಗ್ಯ ತಪಾಸಣೆ, ಹೆಲ್ಮೆಟ್ ಜಾಗೃತಿ ಜಾಥಾ, ರೈಫಲ್ ಶೂಟಿಂಗ್, ಹೆಲ್ತಿ ಬೇಬಿ ಕಾಂಟೆಸ್ಟ್, ಶಿಕ್ಷಕರಿಗೆ ನೇಶನ್ ಬಿಲ್ಡರ್ ಅವಾರ್ಡ್ಸ್, ಸರ್ಕಾರಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಣೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಅAರ‍್ರಾಷ್ಟಿçÃಯ ಇನ್ನರ್ ವೀಲ್ ಸಂಸ್ಥೆಯ ಶತಮಾನೋತ್ಸವ ಸಂಭ್ರಮಾ ಚರಣೆಯ ಅಂಗವಾಗಿ ಪ್ರಪ್ರಥಮ ಬಾರಿಗೆ ಕುಶಾಲನಗರ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ "ಶ್ರೀಮತಿ ಕುಶಾಲನಗರ" ಎಂಬ ವಿನೂತನ ಕಾರ್ಯ ಕ್ರಮವನ್ನು ಈ ತಿಂಗಳ ೨೯ ರಂದು (ಇಂದು) ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ೨೫ ರಿಂದ ೫೦ರ ವಯೋಮಾನದ ಹೆಂಗಸರಿಗೆ ಸ್ಪರ್ಧೆ ಯನ್ನು ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ದಿನದಂದು ಮಹಿಳಾ ಉದ್ಯಮಿಗಳಿಂದ ಅತ್ಯಾಕರ್ಷಕ ಕೈಮಗ್ಗದ ಸೀರೆಗಳು, ಬಣ್ಣ ಬಣ್ಣದ ಕುರ್ತಾಗಳು, ಖಾದ್ಯಗಳ ಮಳಿಗೆಗಳು, ದೈನಂದಿನ ಸಾಮಗ್ರಿಗಳು ಮುಂತಾದವುಗಳ ಪ್ರದರ್ಶನ ಹಾಗೂ ಮಾರಾಟವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಅಧ್ಯಕ್ಷೆ ಪೂರ್ಣಿಮಾ ರವಿ ಅವರು ಉದ್ಘಟಿಸಲಿದ್ದಾರೆ. ಈ ಬಾರಿ "Shiಟಿe ಚಿ ಟighಣ" ಎಂಬ ವಿಷಯದಡಿಯಲ್ಲಿ ಎಲ್ಲಾ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಅಗತ್ಯವಿರುವವರ ಜೀವನವನ್ನು ಬೆಳಗಿಸುವುದು ಕ್ಲಬ್‌ನ ಉದ್ದೇಶವಾಗಿದೆ.

- ನೇಹ ಜಗದೀಶ್, ಅಧ್ಯಕ್ಷರು ಇನ್ನರ್ ವೀಲ್ ಕುಶಾಲನಗರ.