ಗೋಣಿಕೊಪ್ಪಲು, ಮಾ. ೨೮: ಮುಂಜಾನೆಯ ೮ ಗಂಟೆ ವೇಳೆಗೆ ಮನೆಯ ಹಿಂಭಾಗದ ಕೊಟ್ಟಿಗೆ ಬಳಿ ಹುಲಿಯೊಂದು ಕಾಣಿಸಿಕೊಂಡ ಘಟನೆ ದ.ಕೊಡಗಿನ ಪೊನ್ನಂಪೇಟೆ ಸಮೀಪ ಮುಗುಟಗೇರಿಯಲ್ಲಿ ನಡೆದಿದೆ.
ಪೊನ್ನಂಪೇಟೆ ಸಮೀಪದ ಮುಗುಟಗೇರಿ ಗ್ರಾಮದ ಮಲ್ಚೀರ ಚಂಗಪ್ಪ ಅವರ ಮಗ ವರುಣ್ ಉತ್ತಯ್ಯ ಎಂದಿನAತೆ ತನ್ನ ಮನೆಯಲ್ಲಿರುವ ಸಾಕು ನಾಯಿಗೆ ಬೆಳಗಿನ ಉಪಹಾರ ನೀಡಿ ಅಂಗಳದಲ್ಲಿ ನಿಲ್ಲಿಸಿದ್ದ ತನ್ನ ಕಾರನ್ನು ಶುಚಿಗೊಳಿಸುತ್ತಿದ್ದಾಗ ನಾಯಿಯು ಒಂದೇ ಸಮನೆ ಬೊಗಳುತಿತ್ತು. ಇದನ್ನು ಗಮನಿಸಿದ ವರುಣ್ ತನ್ನ ಮನೆಯ ಹಿಂಭಾಗದ ಕೊಟ್ಟಿಗೆ ಬಳಿ ತೆರಳಿ ನೋಡಿದಾಗ ಅತ್ತ ಕಡೆಯಿಂದ ಹುಲಿಯೊಂದು ಧಾವಿಸಿ ಬರುತ್ತಿತ್ತು. ಇದನ್ನು ಕಂಡ ವರುಣ್ ಕೂಡಲೇ ಅಂಗಳದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಕುಳಿತುಕೊಂಡು ಕಾರಿನ ಬಾಗಿಲನ್ನು ಭದ್ರಪಡಿಸಿ ಬಚಾವ್ ಆಗಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಕಾಣಿಸಿಕೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆ ಸಿದರು. ಕಳೆದೆರಡು ದಿನಗ ಳಿಂದ ಈ ಭಾಗದಲ್ಲಿ ಹುಲಿಯ ಸಂಚಾರವನ್ನು ಹಲವು ನಾಗರಿಕರು ಸಮೀಪದಿಂದ ನೋಡಿ ರುವ ನಿದರ್ಶನಗಳಿದೆ. ಈ ಭಾಗದಲ್ಲಿ ಜನರಿಗೆ ದರ್ಶನ ನೀಡಿ ಗಾಬರಿ ಹುಟ್ಟಿಸುತ್ತಿರುವ ಹುಲಿಯನ್ನು ಸೆರೆ ಹಿಡಿಯು ವಂತೆ ನಾಗರಿಕರು ಆಗ್ರಹಿಸಿ ದ್ದಾರೆ. ನಾಗರಿಕರ ಕಣ್ಣಿಗೆ ಕಾಣಿಸಿ ಕೊಂಡಿರುವ ಹುಲಿಯ ಸೆರೆಗೆ ಈಗಾ ಗಲೇ ಸಮೀಪದ ದೇವರಕಾಡು ಬಳಿ ಬೋನನ್ನು ಅಳವಡಿ ಸಲಾಗಿದೆ. ಸುತ್ತ ಮುತ್ತಲಿನ ಪ್ರದೇಶ ದಲ್ಲಿ ಹುಲಿಯ ಸಂಚಾ ರದ ಬಗ್ಗೆ ಮಾಹಿತಿ ತಿಳಿಯಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಲಾಖೆ ಸಿಬ್ಬಂದಿ ಈ ಭಾಗದಲ್ಲಿ ಹುಲಿಯ ಸಂಚಾರದ ಮಾಹಿತಿ ತಿಳಿಯಲು ಪ್ರಯತ್ನ ಮುಂದುವರೆಸಿದ್ದಾರೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-ಹೆಚ್.ಕೆ.ಜಗದೀಶ್