ಮಡಿಕೇರಿ, ಮಾ. ೨೮: ಮೈಸೂರು ಭವಿಷ್ಯ ನಿಧಿ ಪ್ರಾದೇಶಿಕ ಕೇಂದ್ರದಿAದ ‘ನಿಧಿ ಆಪ್ಕೆ ನಿಕಟ್' (ಭವಿಷ್ಯ ನಿಧಿ ನಿಮ್ಮ ಹತ್ತಿರ) ೨.೦ ರ ಅಡಿಯಲ್ಲಿ ಭವಿಷ್ಯ ನಿಧಿಯ ಬಗ್ಗೆ ಜಿಲ್ಲಾ ವ್ಯಾಪ್ತಿಯ ಮಾಹಿತಿ ಕಾರ್ಯಕ್ರಮವು ಸಂಪಿಗೆಕಟ್ಟೆ ವುಡ್‌ಸ್ಟಾಕ್ ರೆಸಾರ್ಟ್ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರೆಸಾರ್ಟ್ ವ್ಯವಸ್ಥಾಪಕ ನಿಬಾಶ್ ಡ್ಯಾಶ್ ಭಾಗವಹಿಸಿದ್ದರು. ಪ್ರವರ್ತನ ಅಧಿಕಾರಿ ಸೌರಭ್, ಎಸ್.ಎಸ್.ಎ ಪಿ.ಎಂ ಸ್ವಸ್ತಿಕ್ ಹಾಗೂ ರವೀಶ್ ಕೆ, ಇ.ಎಸ್.ಐ.ಸಿ ವಿಭಾಗದ ವ್ಯವಸ್ಥಾಪಕ ರವಿನಂದನ್ ಹೆಚ್. ಎಸ್ ಅವರುಗಳು ಮಾಹಿತಿ ನೀಡಿದರು.

ಉದ್ಯೋಗದಾತರು, ಉದ್ಯೋಗಿ ಗಳು ಮತ್ತು ಪಿಂಚಣಿದಾರರು ಕುಂದು ಕೊರತೆಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾಹಿತಿ ಪಡೆದು ಕೊಂಡರು. ಪಿಂಚಣಿದಾರರ ಸಮಸ್ಯೆ ಗಳನ್ನು ಆಲಿಸಿ ಪರಿಹರಿಸಲಾಯಿತು.