ಕುಶಾಲನಗರ, ಮಾ. ೨೭: ಕುಶಾಲನಗರ ತಾಲೂಕು ಹೆಬ್ಬಾಲೆ ಗ್ರಾಮದ ಬಾಣಾವರ ರಸ್ತೆಯಲ್ಲಿರುವ ಬೈರಪ್ಪನ ಗುಡಿ ವ್ಯಾಪ್ತಿಯಲ್ಲಿ ಖಾಸಗಿ ಜಮೀನಿನಲ್ಲಿ ಬೆಳೆದು ನಿಂತಿದ್ದ ಶ್ರೀಗಂಧದ ಮರಗಳ ನಾಶ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನು ಮಾಲೀಕರ ಮೇಲೆ ಕ್ರಮ ಕೈಗೊಂಡಿದ್ದಾರೆ.

ಬೆAಕಿ ಹಾಕಿ ಅಮೂಲ್ಯ ಗಿಡ ಮರಗಳ ನಾಶಕ್ಕೆ ಕಾರಣಕರ್ತರಾಗಿರುವ ಜಮೀನು ಮಾಲೀಕರಿಂದ ಹಾನಿಗೊಳಗಾದ ಶ್ರೀಗಂಧ ಗಿಡಗಳಿಗೆ ನೀರು ಹಾಕಿಸಿ ಪೋಷಣೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

‘ಶಕ್ತಿ’ಯಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲೇ ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್ ಸ್ಪಂದಿಸಿದ್ದು, ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಚೇತನ್ ಅವರಿಗೆ ಮರಗಳ ಸಂರಕ್ಷಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಅಧಿಕಾರಿ ಚೇತನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬAಧಿಸಿದ ಭೂ ಮಾಲೀಕರನ್ನು ಸಂಪರ್ಕಿಸಿ ಹಾನಿಗೊಳಗಾದ ಶ್ರೀಗಂಧದ ಮರಗಳ ರಕ್ಷಣೆ ಮಾಡಬೇಕು. ಇಲ್ಲದಿದ್ದಲ್ಲಿ ಇಲಾಖಾ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮಾಲೀಕರು ಇದೀಗ ಕಾರ್ಮಿಕರ ಮೂಲಕ ಮರಗಳಿಗೆ ನೀರು ಹಾಕಿ ಅವುಗಳ ಸಂರಕ್ಷಣೆ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.

ಹೆಬ್ಬಾಲೆ-ಬಾಣಾವರ ರಸ್ತೆ ಬದಿಯಲ್ಲಿರುವ ನಿಡ್ತ ಮೀಸಲು ಅರಣ್ಯಕ್ಕೆ ಸೇರಿರುವ ರಸ್ತೆ ಬದಿಯ ಈ ಖಾಸಗಿ ಜಮೀನು ಪ್ರದೇಶದಲ್ಲಿ ನೂರಾರು ಶ್ರೀಗಂಧದ ಮರಗಳು ಪ್ರಾಕೃತಿಕವಾಗಿ ಬೆಳೆದು ನಿಂತಿದ್ದು, ಜಮೀನು ಪೊದೆ ತೆರವು ಮಾಡುವ ಸಂದರ್ಭ ಬೆಂಕಿ ಹಾಕಿದ ಕಾರಣ ಹಲವು ಶ್ರೀಗಂಧದ ಮರಗಳು ಹಾನಿಗೊಳಗಾಗಿದ್ದವು.

ಈ ಪ್ರದೇಶದಲ್ಲಿ ಮಳೆ ಬೀಳುವ ತನಕ ಮರಗಳಿಗೆ ಪ್ರತಿವಾರ ನೀರು ಹಾಕಿ ಅರಣ್ಯ ಇಲಾಖೆ ಕಚೇರಿಗೆ ಫೋಟೋ ಕಳಿಸುವಂತೆ ಸೂಚಿಸಲಾಗಿದ್ದು ಶ್ರೀಗಂಧ ಗಿಡಗಳನ್ನು ಸಂರಕ್ಷಣೆ ಮಾಡುವಂತೆ ಇಲಾಖೆ ಮೂಲಕ ಜಮೀನು ಮಾಲೀಕರಿಗೆ ಸೂಚನೆ ನೀಡಲಾಗಿದೆ. ಮತ್ತೆ ಈ ರೀತಿಯ ಪ್ರಕರಣಗಳು ಪುನರಾವರ್ತನೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಗಿದೆ ಎಂದು ಸೋಮವಾರಪೇಟೆ ಅರಣ್ಯ ವಲಯ ಅಧಿಕಾರಿ ಚೇತನ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.