ಮಡಿಕೇರಿ, ಮಾ. ೨೭: ಬಿಜೆಪಿ ಎಸ್.ಸಿ ಮೋರ್ಚಾದ ಮಡಿಕೇರಿ ಗ್ರಾಮಾಂತರ ಮಂಡಲಕ್ಕೆ ಸಂಬAಧಪಟ್ಟ ಸಭೆ ಮರಗೋಡು ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ನಡೆಯಿತು.
ಮಂಡಲ ಅಧ್ಯಕ್ಷ ಚೆನ್ನಿಗಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಎಸ್.ಸಿ. ಮೋರ್ಚಾದ ಅಧ್ಯಕ್ಷ ಪಿ.ಎಂ. ರವಿ ಮೊಗೇರ ಪಾಲ್ಗೊಂಡು ಎಸ್.ಸಿ. ಮೋರ್ಚಾದ ಘಟಕವನ್ನು ಬಲಿಷ್ಠಗೊಳಿಸಲು ಜಿಲ್ಲೆಯ ಎಲ್ಲಾ ಗ್ರಾಮದಲ್ಲೂ ಕಾರ್ಯಕರ್ತರು ಮುಂದೆ ಬರಬೇಕೆಂದರು.
ಸಭೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಾಂಗಿರ ಸತೀಶ್, ಪಂಚಾಯಿತಿ ಅಧ್ಯಕ್ಷೆ ಕವಿತಾ, ಪಂಚಾಯಿತಿ ಉಪಾಧ್ಯಕ್ಷ ಮುಕ್ಕಾಟ್ಟಿ ಚಿದ, ಪ್ರಭು ಶೇಖರ, ಮಮತ, ಪದ್ಮಾವತಿ, ಜನಾರ್ಧನ್, ಜಿಲ್ಲಾ ಎಸ್.ಸಿ. ಮೋರ್ಚಾದ ಉಪಾಧ್ಯಕ್ಷ ಗಣೇಶ್, ಶಕ್ತಿ ಕೇಂದ್ರದ ಅಧ್ಯಕ್ಷ ರವಿ ಉಪಸ್ಥಿತ ರಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿ ಹೀರಾ ಸುಬ್ಬಯ್ಯ ನಿರೂಪಿಸಿ, ವಂದಿಸಿದರು.