ಸಿದ್ದಾಪುರ, ಮಾ. ೨೭: ಭಾರತೀಯ ಪರಂಪರೆಯನ್ನು ಜಗತ್ತಿಗೆ ತೋರ್ಪಡಿಸು ತ್ತಿರುವ ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ತರುವ ಮೂಲಕ ಭಾರತವನ್ನು ಸುವರ್ಣಯುಗದತ್ತ ಕೊಂಡೊಯ್ಯಲು ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆಂದು ಕೊಡಗು-ಮೈಸೂರು ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ ಹೇಳಿದರು.
ಬಿಜೆಪಿ ಶಕ್ತಿ ಕೇಂದ್ರ ಸಿದ್ದಾಪುರ, ಮಾಲ್ದಾರೆ, ನೆಲ್ಲಿಹುದಿಕೇರಿ, ಪಾಲಿಬೆಟ್ಟ, ಅಮ್ಮತ್ತಿ, ಚನ್ನಯ್ಯ ಕೋಟೆ ಇವರ ಸಹಯೋಗದೊಂದಿಗೆ ಸಿದ್ದಾಪುರ ಎಸ್ಎನ್ಡಿಪಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವೀರಪರಂಪರೆಯ ಕೊಡಗು ಜಿಲ್ಲೆ ಹಾಗೂ ಜೀವ ನದಿ ಕಾವೇರಿ ತಾಯಿಯ ಋಣ ತೀರಿಸಲು ಅವಕಾಶ ನೀಡಿರುವುದಕ್ಕೆ ಉತ್ಸುಕನಾಗಿದ್ದೇನೆ.
ಕೊಡಗು ಜಿಲ್ಲೆಯೊಂದಿಗೆ ಬಾಲ್ಯದಿಂದಲೂ ನಮ್ಮ ಕುಟುಂಬವು ಅವಿನಾಭಾವ ಸಂಬAಧ ಹೊಂದಿದೆ. ಇಲ್ಲಿನ ಪರಿಸರ ಗ್ರಾಮಗಳು ನನಗೆ ಚಿರಪರಿಚಿತವಾಗಿದೆ.
ಕೊಡಗು ಜಿಲ್ಲೆಯು ವೀರ ಪರಂಪರೆಯನ್ನು ಸಾರುವ ನಾಡಾಗಿದೆ ಈ ನಾಡಿನ ಅಭಿವೃದ್ಧಿಗೆ ಬದ್ದನಾಗಿದ್ದು, ಆಶೀರ್ವಾದ ಮತದ ರೂಪದಲ್ಲಿರಲಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಎಂದಿಗೂ ಮಾಡಬಾರದು.
ಮುಂದಿನ ಭವಿಷ್ಯಕ್ಕಾಗಿ, ಬಲಿಷ್ಠ ಭಾರತಕ್ಕಾಗಿ ಬಿಜೆಪಿ ಪಕ್ಷವನ್ನು ಅತ್ಯಧಿಕ ಮತದಿಂದ ಗೆಲ್ಲಿಸ ಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಭಾರತೀಶ್, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ, ಪ್ರಧಾನ ಕಾರ್ಯದರ್ಶಿ ವಿನೋದ್, ಸಿದ್ದಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷೆ ರೀನಾ ತುಳಸಿ, ನೆಲ್ಲಿಹುದಿಕೇರಿ ಶಕ್ತಿ ಕೇಂದ್ರ ಪ್ರಮುಖ್ ಬೆಳ್ಳಿಯಪ್ಪ, ಸಿದ್ದಾಪುರ ಶಕ್ತಿ ಕೇಂದ್ರ ಪ್ರಮುಖ್ ರೂಪೇಶ್ ಹಾಗೂ ನೂರಾರು ಮಂದಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಇದಕ್ಕೂ ಮುನ್ನ ಮಹಿಳೆಯರು ಕೇರಳದ ಸಾಂಪ್ರದಾಯಿಕ ಉಡುಗೆತೊಟ್ಟು ತಾಲಪೊಲಿಯೊಂದಿಗೆ ಚಂಡೆ ವಾದ್ಯಗಳ ಮೂಲಕ ಮೈಸೂರು ಮಹಾರಾಜ ಹಾಗೂ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರನನ್ನು ಸ್ವಾಗತಿಸಿದರು.
ನಂತರ ಎಸ್ಎನ್ಡಿ ಪಿ ಕಚೇರಿಯ ಶ್ರೀ ನಾರಾಯಣ ಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.