ಮಡಿಕೇರಿ, ಮಾ. ೨೬: ಲೋಕಸಭಾ ಸಾರ್ವತ್ರಿಕ ಚುನಾವಣೆಯು ಈಗಾಗಲೇ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆ ದಿಸೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ತಾ. ೨೮ ರಂದು (ನಾಳೆ) ಚುನಾವಣೆ ಅಧಿಸೂಚನೆ ಹೊರಡಲಿದ್ದು, ಅಂದಿನಿAದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ.
ನಾಮಪತ್ರ ಸಲ್ಲಿಸಲು ಏಪ್ರಿಲ್ ೪ ಕೊನೆಯ ದಿನವಾಗಿದೆ. ಏಪ್ರಿಲ್ ೫ ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಏಪ್ರಿಲ್ ೮ ರಂದು ನಾಮಪತ್ರ ವಾಪಸ್ಸು ಪಡೆಯಲು ಕಡೆಯ ದಿನವಾಗಿದೆ. ಏಪ್ರಿಲ್ ೨೬ ರಂದು ಮತದಾನ ನಡೆಯಲಿದ್ದು, ಜೂನ್ ೪ ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ ಕೊಡಗು ಜಿಲ್ಲೆಯಲ್ಲಿ ೪,೬೬,೧೫೪ ಮತದಾರರು ಇದ್ದು, ಇವರಲ್ಲಿ ೨,೨೮,೪೭೮ ಪುರುಷ ಮತದಾರರು ಮತ್ತು ೨,೩೭,೬೬೦ ಮಹಿಳಾ ಮತದಾರರು ಇದ್ದಾರೆ. ೧೬ ಮಂದಿ ಇತರೆ ಮತದಾರರು ಇದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ೨,೩೬,೫೬೨ ಮತದಾರರು ಇದ್ದು, ಇವರಲ್ಲಿ ೧,೧೫,೧೫೯ ಪುರುಷ ಮತದಾರರು ಮತ್ತು ೧,೨೧,೩೯೪ ಮಹಿಳಾ ಮತದಾರರು ಇದ್ದು, ಇತರೆ ೯ ಮಂದಿ ಮತದಾರರು ಇದ್ದಾರೆ.
ಹಾಗೆಯೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಒಟ್ಟು ೨,೨೯,೫೯೨ ಮಂದಿ ಮತದಾರರು ಇದ್ದು, ಇವರಲ್ಲಿ ೧,೧೩,೩೧೯ ಪುರುಷ ಮತದಾರರು ಮತ್ತು ೧,೧೬,೨೬೬ ಮಹಿಳಾ ಮತದಾರರು ಇದ್ದಾರೆ, ೭ ಮಂದಿ ಇತರೆ ಮತದಾರರು ಇದ್ದಾರೆ.
ಕೊಡಗು ಜಿಲ್ಲೆಯಲ್ಲಿ ೧,೩೫೭ ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ ೧,೨೯೮ ಪುರುಷ ಮತದಾರರು ಹಾಗೂ ೫೯ ಮಹಿಳಾ ಮತದಾರರು ಇದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೬೨೨ ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ ೫೯೬ ಪುರುಷ ಮತದಾರರು, ೨೬ ಮಹಿಳಾ ಮತದಾರರು ಇದ್ದಾರೆ. ಹಾಗೆಯೇ ವೀರಾಜಪೇಟೆ ವಿಭಾನಸಭಾ ಕ್ಷೇತ್ರದಲ್ಲಿ ೭೩೫ ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ ೭೦೨ ಪುರುಷ ಮತದಾರರು, ೩೩ ಮಂದಿ ಮಹಿಳಾ ಸೇವಾ ಮತದಾರರು ಇದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ೧೮ ರಿಂದ ೧೯ ವಯಸ್ಸಿನ ೯,೦೭೬ ಯುವ ಮತದಾರರು ಇದ್ದು, ೪,೫೪೭ ಪುರುಷ ಯುವ ಮತದಾರರು ಮತ್ತು ೪,೫೨೯ ಮಹಿಳಾ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ೪ ಸಾವಿರಕ್ಕೂ ಹೆಚ್ಚು ವಿಶೇಷ ಚೇತನ ಮತದಾರರು ಇದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೫೪೬ ಮತಗಟ್ಟೆಗಳಿದ್ದು, ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ೨೭೩ ಮತಗಟ್ಟೆ ಹೊಂದಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ, ರ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗಿದೆ.
ಚುನಾವಣೆಗೆ ಸಂಬAಧಿಸಿದAತೆ ಹೆಚ್ಚಿನ ಮಾಹಿತಿಯನ್ನು ಭಾರತ ಚುನಾವಣಾ ಆಯೋಗದ ವೆಬ್ಸೈಟ್ ತಿತಿತಿ.eಛಿi.ಟಿiಛಿ.iಟಿ ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್ಸೈಟ್ ತಿತಿತಿ.ಛಿeo ಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ವೆಬ್ಸೈಟ್ ತಿತಿತಿ.ಞoಜಚಿgu. ಟಿiಛಿ.iಟಿ ನಲ್ಲಿ ಮಾಹಿತಿ ಪಡೆಯ ಬಹುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.