ಇರ್ಪುವಿನಲ್ಲಿ ಜಲಪಾತ ಕವಿಗೋಷ್ಠಿ

ಮಡಿಕೇರಿ, ಮಾ. ೨೬: ಕವಿಗಳಾಗಲಿ, ಸಾಹಿತಿಗಳಾಗಲಿ ಬರವಣಿಗೆಯಲ್ಲಿ ತೊಡಗುವ ಮುನ್ನ ಉತ್ತಮ ಬರಹಗಾರರ ಕೃತಿಗಳನ್ನು ಓದಿಕೊಂಡಿರಬೇಕು. ಬರಹಗಾರ ರಾಗುವ ಮೊದಲು ಓದುಗನಾದರೆ ಬರಹದಲ್ಲಿ ಹೆಜ್ಜೆ ಗುರುತು ಮೂಡಲು ಸಾಧ್ಯ ಎಂದು ಕೊಡವ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಹೇಳಿದರು.

ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ಇರ್ಪು ಜಲಪಾತ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕವಿಗಳಿಗೆ ವಸ್ತು, ವಿಷಯವನ್ನು ಅರಿಯುವ, ಗ್ರಹಿಸುವ ಮನೊಭಾವನೆ ಇರಬೇಕು. ಕೊಡಗಿನಂತಹ ಸುಂದರ ಪರಿಸರ ಕವಿಮನಸುಗಳಿಗೆ ಮುದ ನೀಡುತ್ತದೆ ಎಂದು ಹೇಳಿದರು. ಕವಿಗಳಾದ ಪಿ.ಎಸ್. ಜಾನ್, ಡಾ. ಉಳುವಂಗಡ ಕಾವೇರಿ, ಡಿ.ಹೆಚ್. ಪುಷ್ಪ, ಆಶಾ, ರಜಿತಾ ಕಾರ್ಯಪ್ಪ ಅತಿಥಿಗಳಾಗಿದ್ದರು. ಹಿರಿಯ ಕವಯತ್ರಿ ಶೋಭಾÀ ಸುಬ್ಬಯ್ಯ, ಮಾಲಮೂರ್ತಿ, ನ.ಲ. ವಿಜಯ, ಅಲ್ಲಾರಂಡ ವಿಠಲ ನಂಜಪ್ಪ, ಡಾ. ಎ.ಎಸ್. ಪೂವಮ್ಮ, ಪ್ರೇಮ, ಕಬ್ಬಚೀರ ರಶ್ಮಿ, ಪಂದ್ಯAಡ ರೇಣುಕಾ, ಕೇಕಡ ಇಂದುಮತಿ ರವೀಂದ್ರ, ಗೀತಾಂಜಲಿ, ವತ್ಸಲ ಶ್ರೀಶ, ಎಸ್.ಎಂ. ರಜನಿ, ಸುನೀತ ವಿಶ್ವನಾಥ್, ಜೀವಿತಾ ತಾಳತ್‌ಮನೆ, ಹೇಮಂತ್ ಪಾರೇರ, ವೈಲೇಶ್ ಪಿ.ಎಸ್., ಮನ ಕೆ.ಆರ್., ಕುದುಪಜೆ ರಂಜಿತ್ ದಾಮೋದರ, ಮುಕ್ಕಾಟಿ ಹರಿಣಿ ಗಿರೀಶ್, ಹೇಮಲತ ಪೂರ್ಣಪ್ರಕಾಶ್, ಜನ್ಮಿತ, ಬಾದುಮಂಡ ಬೀನ ಕಾಳಯ್ಯ, ಮೂಕಳೇರ ಟೈನಿ ಪೂಣಚ್ಚ, ಶಿಕ್ಷಕ ಮಹೇಂದ್ರ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯೆ ಮೂರೇರ ರತಿ ಅಚ್ಚಪ್ಪ, ಸೋಮವಾರಪೇಟೆ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಜವರಪ್ಪ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕ ನುಡಿಯಾಡಿದರು. ಶಿಕ್ಷಕಿ ಮೀರಾಜಾನ್ ನಿರೂಪಿಸಿದರು.