ಮಡಿಕೇರಿ, ಮಾ. ೨೬: ಕೊಡವಾಮೆಯ ಸಹಯೋಗ ದಲ್ಲಿರುವ ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರವು ವೀರಾಜಪೇಟೆ ಕಾವೇರಿ ಕಾಲೇಜಿನ ಸಹಕಾರ ದೊಂದಿಗೆ ಕೊಡವ ಸಂಸ್ಕೃತಿಯ ಮೇಲೆ ವಿಚಾರ ಸಂಕಿರಣ ಆಯೋಜಿಸಿತ್ತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ಕೊಡವ ಆಟ್ ಪಾಟ್ ಕಳಿ ಎಂಬ ವಿಷಯದ ಬಗ್ಗೆ ಮಾತನಾಡಿದರು. ಬಾಲ್ಯದಲ್ಲಿ ಮಂದ್ ಕೋಲಾಟದಲ್ಲಿ ಭಾಗವಹಿಸಿದ ಪರಿ ಮತ್ತು ಹಿರಿಯರು ಶಿಸ್ತುಬದ್ಧವಾಗಿ ಮತ್ತು ಆಕರ್ಷಣೀಯ ವಾಗಿ ಪ್ರದರ್ಶಿಸುತ್ತಿದ್ದ ರೀತಿಯನ್ನು ನೋಡಿಯೇ ಇದನ್ನು ಕಲಿಯುತ್ತಿ ದ್ದರೆಂದು ಹೇಳಿದರು. ಆನಂತರ ಆರ್ಥಿಕ ಮತ್ತು ಹೊರ ದೇಶಗಳ ಆಕರ್ಷಣೆಯಿಂದ ಕೃಷಿ ಪದ್ಧತಿಗಳನ್ನೂ ತೊರೆದು ವಲಸೆ ಹೋಗುವುದು ಹೆಚ್ಚಾದ್ದರಿಂದ ಕೃಷಿ ಮೂಲವಾಗಿ ಬಂದಿರುವ ಮೂಲ ಆಚರಣೆಗಳು ತಾನಾಗಿ ಈಗಿನವರಿಗೆ ಅವರ ಮನಸ್ಸಿಗೆ ಹೋಗದಿರುವು ದರಿಂದ ಅವರಿಗೆ ಕಲಿಸಿ ಕೊಡುವ ಅನಿವಾರ್ಯತೆ ಒದಗಿ ಬಂದಿದೆ. ಆ ನಿಟ್ಟಿನಲ್ಲಿ ತಾವೂ ಕೂಡ ಅನೇಕ ವರ್ಷಗಳಿಂದ ಸಂಸ್ಕೃತಿ ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿಸಿ ಕೊಂಡಿರುವುದಾಗಿ ತಿಳಿಸಿದರು. ಇತ್ತೀಚೆಗೆ ಕೆಲವು ಕೊಡವ ಸಮಾಜಗಳು ಕೊಡವ ಪದ್ಧತಿಗಳನ್ನು ಅಚ್ಚುಕಟ್ಟಾಗಿ ಮತ್ತು ನಿಯಮ ಬದ್ಧವಾಗಿ ಪಾಲಿಸು ವುದರ ಬಗ್ಗೆ ಗಮನ ಹರಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಕೊಡಗಿನ ಬೊಳಕಾಟ್, ಪೀಲಿ ಆಟ್, ಕೊಂಬಾಟ್, ಕಪ್ಪೆ ಆಟ್ ಮುಂತಾದ ಮೂಲ ಕೊಡವ ಕುಣಿತಗಳು ಮತ್ತು ಅವುಗಳ ಹಿನ್ನೆಲೆ ಮತ್ತು ವಿಶೇಷತೆಯನ್ನು ತಿಳಿಸಿದರು. ಉಮ್ಮತ್ತಾಟ್ ಕೂಡ ಬಾಯಿಯಿಂದ ಬಾಯಿಗೆ ಹರಿದು ಬಂದ ನಡಾವಳಿ ಗೀತೆ ಆದ್ದರಿಂದ ಹರದಾಸ ಅಪ್ಪಚ್ಚ ಕವಿಯವರು ದಾಖಲಿಸಿರುವ ಉಮ್ಮತ್ತಾಟ್ ಹಾಡುಗಳೂ ಜನಪದವೇ ಆಗಿವೆ ಎಂದರು. ಕೊಡವ ಸಂಸ್ಕೃತಿಯ ಭಾಗವಾಗಿರುವ ವಾಲಗತಾಟ್ ಬಗ್ಗೆಯೂ ವಿಷಯ ಮಂಡಿಸಿದರು.

ನAತರ ಉಪನ್ಯಾಸ ನೀಡಿದ ನಾಪಂಡ ಮುತ್ತಪ್ಪ ಅವರು ಏಳ್ ನಾಡ್ ಯಡವ ನಾಡ್ ಅಂದ್ ಇಂದ್ ಕುರಿತು ಮಾತನಾಡಿ, ಯಡವ ನಾಡಿನಲ್ಲಿ, ಕಿಗ್ಗಟ್ಟ್ ಮತ್ತು ಮೇಂದಲೆ ನಾಡಿನಲ್ಲಿ ಕಂಡುಬರದ ವಿಶೇಷ ಆಚರಣೆಯಾದ ಎಡೆಮ್ಯಾರ್ ಒಂದರAದು ಇಬ್ಬರು ವೀರರನ್ನು ಅವರ ನಕ್ಷತ್ರ ಶ್ರಮಗುಣ ಅಳೆದು ತಕ್ಕನು ಬೇಟೆಗೆ ಆಯ್ಕೆ ಮಾಡಿ ಆ ದಿನ ಗದ್ದೆಗೆ ಮೊದಲ ಉಳುಮೆಯನ್ನು ಎತ್ತು ಕಟ್ಟುವ ಮೂಲಕ ಶಾಸ್ತೊçÃಕ್ತವಾಗಿ ಮಾಡಲಾಗುತ್ತದೆ. ಎರಡು ವೀರರು ನಂತರ ಹಾಲುಬರುವ ಮರಕ್ಕೆ ಬಾಣವನ್ನು ಹೂಡುತ್ತಾರೆ. ಆ ನಂತರ ಕೃಷಿಗೆ ಸಂಬAಧಿಸಿದ ಪ್ರತಿ ಯೊಂದು ಕೆಲಸವು ಆರಂಭ ಗೊಳ್ಳುತ್ತದೆ. ಹುತ್ತರಿ ಹಬ್ಬದಂದು ಚುಚ್ಚಿದ್ದ ಬಾಣವನ್ನು ವೀರರಿಬ್ಬರು ಎಳೆಯು ವುದರ ಮೂಲಕ ಕೃಷಿಯ ಕೊನೆಯ ಘಟ್ಟ ತಲುಪುತ್ತದೆ. ಇದು ಇಂದಿಗೂ ನಡೆಯುತ್ತಿದೆ ಎಂದು ತಿಳಿಸಿದರು. ಯಡವನಾಡಿನ ಶಾಸನ ಮತ್ತು ಪರಂಪರೆಗಳ ಬಗ್ಗೆ ಮತ್ತಷ್ಟು ಹೊಸ ಮಾಹಿತಿಗಳನ್ನು ಬೆಳಕಿಗೆ ತಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನೆರವಂಡ ವೀಣ ಮಾತನಾಡಿ, ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಚರ್ಚೆಯಲ್ಲಿ ಕಾಳಿಮಾಡ ಜಿಮ್ಮಿ, ಚೇಮಿರ ಭೀಮಯ್ಯ, ಮುಂತಾದ ಹಿರಿಯರು ಪಾಲ್ಗೊಂಡಿದ್ದರು.