ವರದಿ: ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಮಾ. ೨೬: ದಕ್ಷಿಣ ಕೊಡಗಿನ ಕುಂದ ಈಚೂರು ಗ್ರಾಮದ ಕುಂದ ಬೆಟ್ಟ ತಪ್ಪಲಿನ ಪ್ರದೇಶದ ತಲೆಬಲೇಶ್ವರ ಬನ ನೆಲೆ ನಿಂತಿದ್ದು ಗುಮ್ಮಟ್ಟಿರ ಕಿಲನ್ ಗಣಪತಿ ಹಾಗೂ ಸಹೋದರ ದರ್ಶನ್ ಅವರ ಜಾಗದಲ್ಲಿ ಪಾಂಡವರ ಕಾಲದ ಶಿವಲಿಂಗ ಮರು ಪ್ರತಿಷ್ಠಾಪನೆ ಮಾಡಲಾಗಿದೆ. ಮೂರು ದಿನಗಳ ಕಾಲ ಕಲ್ಯಾಟಂಡ ಅಜ್ಜಪ್ಪನವರ ಮಾರ್ಗದರ್ಶನದಲ್ಲಿ ಸಂಪಾಜೆ-ಚೆAಬು ಗ್ರಾಮದ ವೇದಮೂರ್ತಿ ರಾಧಕೃಷ್ಣ ಕೆದಿಲಾಯ ಇವರ ಮುಂದಾಳತ್ವದಲ್ಲಿ ಪೂಜಾ ಕೈಂಕ ರ್ಯಗಳು ಊರಿನ ಗ್ರಾಮಸ್ಥರ, ಗುಮ್ಮಟ್ಟಿರ ಕುಟುಂಬಸ್ಥರ ಸಮ್ಮುಖದಲ್ಲಿ ಯಶಸ್ವಿಯಾಗಿ ಜರುಗಿತು.
ಕಳೆದ ೭೦ ದಿನಗಳ ಹಿಂದೆ ಈ ಸ್ಥಳದಲ್ಲಿ ಬೆಳೆದು ನಿಂತಿದ್ದ ಬೃಹತ್ ಮರದ ಬುಡದಲ್ಲಿ ಸುಮಾರು ೮೦೦ ವರ್ಷ ಇತಿಹಾಸÀವುಳ್ಳ ಪಾಂಡವರ ಕಾಲದ್ದು ಎನ್ನಲಾದ ೪ ಅಡಿ ಎತ್ತರದ ಶಿವಲಿಂಗವೊAದು ಗೋಚರವಾಗುವ ಮೂಲಕ ಗ್ರಾಮದ ಸುತ್ತಮುತ್ತಲಿನ ಜನತೆಯಲ್ಲಿ ಆಶ್ಚರ್ಯಕ್ಕೆ ಕಾರಣವಾಗಿತ್ತು.
ಶಿವಲಿಂಗದೊAದಿಗೆ ತೀರ್ಥನಳ, ಆನೆಸ್ತಂಭ, ಕಲ್ಲಿನ ಇಟ್ಟಿಗೆ, ಸೋಮಸೂತ್ರ, ಪಾಣಿಪೀಠ ಸೇರಿದಂತೆ ಲಿಂಗದ ಕೆಳಗೆ ಹಾಸಿದ್ದ ಚಪ್ಪಡಿ ಕಲ್ಲುಗಳು ದೊರೆತ್ತಿದ್ದವು. ಇತಿಹಾಸ ಪ್ರಸಿದ್ದ ಕುಂದಬೆಟ್ಟದ ಈಶ್ವರ ದೇವಾಲಯದ ತಪ್ಪಲಿನಲ್ಲಿ ಈ ಶಿವಲಿಂಗ ಪತ್ತೆಯಾಗಿತ್ತು. ಪಾಂಡವರು ಈ ಭಾಗದಲ್ಲಿ ಸಂಚರಿ ಸುವ ವೇಳೆ ಶಿವನ ಪೂಜೆಗಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ದ್ಯೋತಕವಾಗಿ ಈ ಶಿವಲಿಂಗ ಪತ್ತೆ ಯಾಗಿದೆ ಎಂದು ಕಾರ್ಕಳದ ಶಿಲ್ಪಿ ಶಿವ ಕುಮಾರ್ ಮಾಹಿತಿ ಒದಗಿಸಿದ್ದರು.
ಇದೇ ಸ್ಥಳದಲ್ಲಿ ಸುಂದರ ಪರಿಸರದ ನಡುವೆ ಇದೀಗ ಶಿವನ ಲಿಂಗವನ್ನು ಮರು ಪ್ರತಿಷ್ಠಾಪಿಸುವ ಮೂಲಕ ಸಾರ್ವಜನಿಕರ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಶಿವಲಿಂಗ ಪ್ರತಿಷ್ಠಾಪನೆ ಸಂದರ್ಭ ಕಲ್ಯಾಟಂಡ ಅಜ್ಜಪ್ಪನವರ ಮಾರ್ಗದರ್ಶನದಲ್ಲಿ ಕುಟುಂಬಸ್ಥರು, ಊರಿನವರು ಭಾಗವಹಿಸಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು. ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ನೂತನ ರಸ್ತೆ ಮಾರ್ಗವನ್ನು ಗುಮ್ಮಟ್ಟಿರ ಕುಟುಂಬದವರು ಮಾಡಿದ್ದಾರೆ. ವಾಹನದ ಮೂಲಕವೇ ತಲೆಬಲೇಶ್ವರ ಬನಕ್ಕೆ ತೆರಳಬಹುದಾಗಿದೆ.
೩ ದಿನಗಳ ಕಾಲ ನಡೆದ ಪೂಜಾ ಕೈಂಕರ್ಯದಲ್ಲಿ ಈಚೂರು ಕುಂದ ಗ್ರಾಮದ ಗ್ರಾಮಸ್ಥರು, ಗುಮ್ಮಟ್ಟಿರ ಕುಟುಂಬದ ಹಿರಿಯರು ಹಾಗೂ ಮನೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪುಣ್ಯಕ್ಷೇತ್ರಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ದೇವರ ದರ್ಶನ ಪಡೆದರು. ಕ್ಷೇತ್ರವು ಪುಣ್ಯ ಕ್ಷೇತ್ರವಾಗುವ ಮೂಲಕ ಭಕ್ತರಿಗೆ ದೇವರ ಅನುಗ್ರಹ ಸಿಗುವಂತಾಗಲಿ ಎಂದರು.