ಮಡಿಕೇರಿ, ಮಾ. ೨೬: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧೀನದಲ್ಲಿ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿಗೆ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ರಾಜ್ಯ ಫುಟ್ಬಾಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಖಜಾಂಜಿ ದೀಪು ಮಾಚಯ್ಯ, ಸದಸ್ಯರಾದ ಲಿಜೇಶ್ ಅಮ್ಮತ್ತಿ ಇದ್ದರು.

ಆರು ತಂಡಗಳಿಗೆ ಗೆಲುವು: ಫುಟ್ಬಾಲ್ ಲೀಗ್ ಪಂದ್ಯಾವಳಿಯ ಮೊದಲ ದಿನ ಆರು ತಂಡಗಳು ಶುಭಾರಂಭ ಮಾಡಿವೆ. ಮೊದಲ ಪಂದ್ಯದಲ್ಲಿ ಚೌಡೇಶ್ವರಿ ಎಫ್.ಸಿ ಅಮ್ಮತ್ತಿ ತಂಡವು ೪-೦ ಗೋಲುಗಳ ಅಂತರದಿAದ ಕ್ಯಾಪ್ಟನ್ಸ್ ಇಲೆವೆನ್ ಪಾಲಿಬೆಟ್ಟ ತಂಡವನ್ನು ಮಣಿಸಿತು.

ಎರಡನೇ ಪಂದ್ಯದಲ್ಲಿ ಎನ್.ವೈ.ಸಿ ಕೊಡಗರಹಳ್ಳಿ ತಂಡವು ೧-೦ ಗೋಲುಗಳ ಅಂತರದಿAದ ಎಂ.ಸಿ.ಸಿ ಮಡಿಕೇರಿ ತಂಡವನ್ನು ಸೋಲಿಸಿತು.

ಮೂರನೇ ಪಂದ್ಯದಲ್ಲಿ ಅಮಿಟಿ ಯುನೈಟೆಡ್ ಎಫ್.ಸಿ ಗದ್ದೆಹಳ್ಳ ತಂಡವು ೪-೦ ಗೋಲುಗಳ ಅಂತರದಿAದ ಐಎನ್‌ಎಸ್ ಗುಡ್ಡೆಹೊಸೂರು ತಂಡವನ್ನು ಸೋಲಿಸಿತು. ನಾಲ್ಕನೇ ಪಂದ್ಯದಲ್ಲಿ ಬಿ.ಎಫ್.ಸಿ ಬೋಯಿಕೇರಿ ತಂಡವು ೭-೦ ಗೋಲುಗಳ ಅಂತರದಿAದ ಎಸ್.ಎಸ್.ಸಿ ಪೊನ್ನಂಪೇಟೆ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.

ಐದನೇ ಪಂದ್ಯವು ವೈಷ್ಣವಿ ಎಫ್.ಸಿ ಮರಗೋಡು ಮತ್ತು ಸಹರಾ ಯೂತ್ ಅಸೋಸಿಯೇಷನ್ ಒಂಟಿಯAಗಡಿ ತಂಡಗಳ ನಡುವೆ ನಡೆದು ಸಹರಾ ಎಫ್.ಸಿ ತಂಡವು ೫-೧ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು.

ಆರನೇ ಪಂದ್ಯದಲ್ಲಿ ಆಕ್ಸ್ಫರ್ಡ್ ಎಫ್.ಸಿ ವೀರಾಜಪೇಟೆ ತಂಡವು ೯-೦ ಗೋಲುಗಳ ಅಂತರದಿAದ ವಿ.ವೈಸಿ ಕೋಟೆಕೊಪ್ಪ ತಂಡವನ್ನು ಮಣಿಸಿತು. -(ಕೆ.ಎಂ ಇಸ್ಮಾಯಿಲ್ ಕಂಡಕರೆ)