ಚೆಟ್ಟಳ್ಳಿ, ಮಾ. ೨೬: ನೂರೋಕ್ಕನಾಡಿನ ೩೦೦ ವರ್ಷದ ಪುರಾತನ ಈರಳೆ ಗ್ರಾಮದ ಶ್ರೀಪೊವ್ವೊದಿ (ಭಗವತಿ)ಯ ವಾರ್ಷಿಕೋತ್ಸವವು ತಾ.೨೭ ರಂದು (ಇಂದು) ನಡೆಯಲಿದೆ.

ತಾ.೨೭ರಂದು (ಇಂದು) ಮಧ್ಯಾಹ್ನ ೩ ಗಂಟೆಗೆ ದೇವರ ಭಂಡಾರ ತರುವುದು, ತಕ್ಕರ ಹಾಗೂ ದೇವರ ಭಂಡಾರ ಮನೆಯಾದ ಪೊರಿಮಂಡ ಕುಟುಂಬದ ಮನೆಯಿಂದ ಮತ್ತು ದೇವತಕ್ಕರಾದ ಬಲ್ಲಾರಂಡ ಐನ್‌ಮನೆಯಿಂದ ಪೊವ್ವೋದಿಯ ಎತ್ತುಪೋರಾಟವನ್ನು ದೇವನೆಲೆಗೆ ತಂದು ಒಪ್ಪಿಸಲಾಗುತ್ತದೆ. ನಂತರ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಮೇದರಕೊಟ್ಟಿಗೆ ಪೀಲಿಯಾಟ್, ಬೊಳಕಾಟ್ ಹಾಗೂ ಕೈತಲೆಆಟ್ ನಡೆಯಲಿದೆ. ಪೊವ್ವೊದಿಯ ವಾರ್ಷಿಕ ಉತ್ಸವವು ನೆರವೇರಲಿದೆ. ಭಕ್ತಾಧಿಗಳು ಹರಕೆ ಭಂಡಾರವನ್ನು ಅರ್ಪಿಸುತ್ತಾರೆ.

ರಾತ್ರಿ ಊರಿನವರು ಪರದೇವರ ದೇವನೆಲೆಯಲ್ಲಿ ಸಂಪ್ರದಾಯದAತೆ ಪೂಜೆಸಲ್ಲಿಸುತ್ತಾರೆ.