ಸುಂಟಿಕೊಪ್ಪ, ಮಾ. ೨೬ :ಕಾನ್‌ಬೈಲ್ ಬೈಚನಹಳ್ಳಿ (ನೆಟ್ಲಿ‘ಬಿ') ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರ ಗನ್‌ಮ್ಯಾನ್ ಆಗಿದ್ದ ದಿ. ಲೋಕೇಶ್ ಪೂಜಾರಿ ಅವರ ಸಹೋದರ ಮನು ಎಂಬವರು ಸೋಮವಾರ ಸಂಜೆ ಮನೆಯ ಅನತಿ ದೂರದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಸುAಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ತನಿಖೆಕೈಗೊಂಡಿದ್ದಾರೆ. ಮೃತ ಮನು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.