ಗೋಣಿಕೊಪ್ಪಲು, ಮಾ. ೨೬: ಇಂದು ಜಿಲ್ಲೆಗೆ ಆಗಮಿಸಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ.ಲಕ್ಷö್ಮಣ್‌ಗೌಡ ಅವರನ್ನು ತಿತಿಮತಿ ಬಳಿಯ ಆನೆಚೌಕೂರು ಗಡಿಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರುಗಳು ಆತ್ಮೀಯವಾಗಿ ಬರಮಾಡಿಕೊಂಡರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮುಂದಾ ಳತ್ವದಲ್ಲಿ ಗಡಿಭಾಗ ಆನೆಚೌಕೂರು ವಿನಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು. ಮುಂಜಾನೆಯಿA ದಲೇ ಜಮಾವಣೆಗೊಂಡಿದ್ದರು.

ಗಡಿ ಭಾಗಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷö್ಮಣ್‌ಗೌಡ ಆಗಮಿಸುತ್ತಿದ್ದಂ ತೆಯೇ ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಮಂತರ್‌ಗೌಡ ಹೂ ಗುಚ್ಚ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿ ಕೊಂಡರು. ಈ ವೇಳೆ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಆದ ನಂತರ ಕೊಡಗಿಗೆ ಅಭ್ಯರ್ಥಿ ಎಂ.ಲಕ್ಷö್ಮಣ್ ಗೌಡ ಆಗಮಿಸಿದ್ದಾರೆ. ಇವರನ್ನು ಬರಮಾಡಿಕೊಳ್ಳುವ ಮೂಲಕ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದೇವೆ. ಕೊಡಗಿನ ಜನತೆ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ವಿಶ್ವಾಸವಿದೆ. ಗೆಲುವನ್ನ ಸಾಧಿಸುವ ಅಚಲ ವಿಶ್ವಾಸ ನಮ್ಮಲ್ಲಿದೆ. ಕೊಡಗು-ಮೈಸೂರು ಕ್ಷೇತ್ರ ಕಾಂಗ್ರೆಸ್ ಪಾಲಾಗಲಿದೆ ಎಂದರು.

ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷವು ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಎರಡು ಶಾಸಕರ ಗೆಲುವಿಗೆ ಇವರು ಶ್ರಮಿಸಿದ್ದರು. ನಾವು ಶಾಸಕರಾಗಿ ಅಧಿಕಾರ ಪಡೆದ ನಂತರ ಕೊಡಗಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಜನತೆ ಗಮನಿಸಿ ದ್ದಾರೆ. ಎಂ.ಲಕ್ಷö್ಮಣ್‌ಗೌಡ ಅವರ ಅಪಾರ ರಾಜಕೀಯ ಅನುಭವ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಸಾಮಾನ್ಯ ಕಾರ್ಯಕರ್ತನನ್ನು ಕಾಂಗ್ರೆಸ್ ಪಕ್ಷ ಗುರುತಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ. ೨೫ ವರ್ಷಗಳ ನಂತರ ಕೊಡಗು ಜಿಲ್ಲೆಗೆ ಮುಕ್ತಿ ಸಿಕ್ಕಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದೆ. ಕೊಡಗಿನ ಎರಡು ಎಂಎಲ್‌ಎಗಳು ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಇವರ ಅಭಿವೃದ್ಧಿ ಕೆಲಸಕ್ಕೆ ಜನತೆ ಮನ್ನಣೆ ನೀಡಿದ್ದಾರೆ. ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು ನಮ್ಮ ಗೆಲುವಿಗೆ ಅನುಕೂಲವಾಗಲಿದೆ ಎಂದು ಅಭ್ಯರ್ಥಿ ಎಂ. ಲಕ್ಷö್ಮಣ್‌ಗೌಡ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಸ್.ಅರುಣ್‌ಮಾಚಯ್ಯ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮಂಜುನಾಥ್ ಕುಮಾರ್ ಈ ವೇಳೆ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಮುಖಂಡ ರಾದ ಹೆಚ್.ಎಸ್. ಚಂದ್ರಮೌಳಿ, ಬಾನಂಡ ಪ್ರಥ್ಯು, ಆಪಟ್ಟಿರ ಟಾಟೂ ಮೊಣ್ಣಪ್ಪ, ಪಟ್ಟಡ ರಂಜಿ ಪೂಣಚ್ಚ, ವಿನಯ್ ಕುಮಾರ್, ಪಿ.ಆರ್.ಪಂಕಜ, ಕೊಲ್ಲಿರ ಬೋಪಣ್ಣ, ಎ.ಜೆ.ಬಾಬು, ಅಣ್ಣಿರ ಹರೀಶ್, ಪ್ರಮೋದ್ ಗಣಪತಿ, ಜೋಕಿಂ, ಅಪ್ಪಚಂಗಡ ಮೋಟಯ್ಯ, ಉಮೇಶ್ ಕೇಚಮಯ್ಯ, ತೆರೆಸ ವಿಕ್ಟರ್, ನಾಮೇರ ಅಂಕಿತ್, ಮಲ್ಲಂಡ ಪ್ರಕಾಶ್, ಕಡೆಮಾಡ ಕುಸುಮ, ಮಣಿಕುಂಞ, ಕಟ್ಟೆರ ವಿಶ್ವನಾಥ್, ಪೆಮ್ಮಂಡ ರಾಜ್ ಕುಶಾಲಪ್ಪ, ಶರತ್‌ಕಾಂತ್, ಅನೀಶ್, ಎಂ.ಮAಜುಳ, ಧನಲಕ್ಷಿö್ಮ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.