ನಾಪೋಕ್ಲು, ಮಾ. ೨೫: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಹಾಕಿ ಉತ್ಸವ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ೨೪ನೆಯ ವರ್ಷದ ಕೌಟುಂಬಿಕ ಹಾಕಿ ನಮ್ಮೆಯನ್ನು ಈ ಬಾರಿ ಕುಂಡ್ಯೋಳAಡ ಕುಟುಂಬ ಸ್ಥರು ನಾಪೋಕ್ಲುವಿನಲ್ಲಿ ಆಯೋಜಿಸುತ್ತಿದ್ದು, ಇದರ ಅಂತಿಮ ಸಿದ್ಧತೆಗಳು ನಡೆಯುತ್ತಿವೆ.
ಇಲ್ಲಿಗೆ ಸಮೀಪದ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಮೈದಾನಗಳ ನಿರ್ಮಾಣ, ಗ್ಯಾಲರಿ, ವೇದಿಕೆ, ಸ್ಟಾಲ್ಗಳ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಗಳು ಭರದಿಂದ ಸಾಗುತ್ತಿವೆ.
ಮಾರ್ಚ್ ೩೦ರಿಂದ ಏಪ್ರಿಲ್ ೨೮ ರವರೆಗೆ ಒಂದು ತಿಂಗಳ ಕಾಲ ಕೌಟುಂಬಿಕ ಹಾಕಿ ಉತ್ಸವ ನಡೆಯಲಿದ್ದು, ಹಾಕಿ ಕಲರವಕ್ಕೆ ನಾಪೋಕ್ಲು ಸಜ್ಜುಗೊಳ್ಳುತ್ತಿದೆ. ಮಾರ್ಚ್ ೩೦ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಏಪ್ರಿಲ್ ೨೮ ರಂದು ಅಂತಿಮ ಪಂದ್ಯ ನಡೆಯಲಿದೆ. ೩೬೦ ಕುಟುಂಬ ತಂಡಗಳು ಈ ಬಾರಿಯ ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹಾಕಿ ನಮ್ಮೆಯ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿ ಮೈದಾನ, ಗ್ಯಾಲರಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಕ್ರೀಡಾ ಉತ್ಸವದ ಯಶಸ್ವಿಗೆ ವಿವಿಧ ಸಮಿತಿಗಳು ಕಾರ್ಯ ಪ್ರವೃತ್ತವಾಗಿವೆ. ದಾಖಲೆಯ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಯಶಸ್ಸಿಗೆ ಕುಂಡ್ಯೋಳAಡ ಹಾಕಿ ಸಮಿತಿ ಶ್ರಮಿಸುತ್ತಿದೆ ಎಂದರು.
ಟೂರ್ನಮೆAಟ್ ಡೈರೆಕ್ಟರ್ ಅಂಜಪರವAಡ ಕುಶಾಲಪ್ಪ ಮಾತನಾಡಿ ದಿನಕ್ಕೆ ಆರು ಪಂದ್ಯಗಳAತೆ ಮೂರು ಮೈದಾನಗಳಲ್ಲಿ ಒಟ್ಟು ೧೮ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ದಿನದಂದು ಇಂಡಿಯನ್ ನೇವಿ ಹಾಗೂ ಕೂರ್ಗ್ ೧೧ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಪ್ರತಿದಿನ ನಿಗದಿತ ಸಮಯಕ್ಕೆ ತಂಡದ ಆಟಗಾರರು ಆಗಮಿಸಿ ಪಂದ್ಯಗಳನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ವಿನಂತಿಸಿದರು.
ಈ ಸಂದರ್ಭ ಹಾಕಿ ನಮ್ಮೆಯ ಸಮಿತಿ ಕಾರ್ಯದರ್ಶಿ ಕುಂಡ್ಯೋಳAಡ ವಿಶು ಪೂವಯ್ಯ, ಬೋಸ್ ಬೋಪಣ್ಣ, ಗಣಪತಿ, ಸುರೇಶ್ ಕುಟ್ಟಪ್ಪ, ಭೀಮಯ್ಯ, ಭುವನ್ ಬೋಪಣ್ಣ, ಜತ್ತಿ ಸುಬ್ಬಯ್ಯ, ಶಬನ್ ಪಳಂಗಪ್ಪ, ದಿವಿನ್ ದೇವಯ್ಯ ಉಪಸ್ಥಿತರಿದ್ದರು.
ಇದುವರೆಗೆ ೨೩ ಹಾಕಿ ಪಂದ್ಯಾಟ ಗಳನ್ನು ಆಯೋಜಿ¸ Àಲಾಗಿದ್ದು, ೨೪ನೇ ಹಾಕಿ ಉತ್ಸವದಲ್ಲಿ ಅತಿ ಹೆಚ್ಚಿನ ಕೊಡವ ಕುಟುಂಬಗಳು ಪಾಲ್ಗೊ ಳ್ಳುತ್ತಿವೆ. ೧೯೯೭ರಲ್ಲಿ ಕರಡದಲ್ಲಿ ಆಯೋಜಿಸಲಾಗಿದ್ದ ಪ್ರಥಮ ಕೊಡವ ಕೌಟುಂಬಿಕ ಹಾಕಿ ಉತ್ಸವ ಪಾಂಡAಡ ಕಪ್ನಲ್ಲಿ ೬೦ ತಂಡಗಳು ಪಾಲ್ಗೊಂಡಿದ್ದವು. ಬಳಿಕ ೧೯೯೮ರಲ್ಲಿ ಕಡಗದಲ್ಲಿ ನಡೆದ ಕೋಡಿರ ಕಪ್ ನಲ್ಲಿ ೧೧೬ ತಂಡಗಳು ಪಾಲ್ಗೊಂಡಿದ್ದವು. ನಂತರದ ವರ್ಷದಲ್ಲಿ ಕಾಕೋಟು ಪರಂಬುವಿನಲ್ಲಿ ನಡೆದ ಬಲ್ಲಚಂಡ ಕಪ್ ನಲ್ಲಿ ೧೪೦ ತಂಡಗಳು ಪೊನ್ನಂಪೇಟೆಯಲ್ಲಿ ನಡೆದ ಚೆಪ್ಪುಡಿರ ಕಪ್ನಲ್ಲಿ ೧೭೦ ತಂಡಗಳು ಪಾಲ್ಗೊಂಡಿದ್ದು, ಕುಲ್ಲೇಟಿರ ಕಪ್ನಲ್ಲಿ ೩೨೦ ತಂಡಗಳು ಪಾಲ್ಗೊಂಡಿದ್ದವು. ಕಳೆದ ವರ್ಷದ ಅಪ್ಪಚೆಟ್ಟೋಳಂಡ ಕಪ್ನಲ್ಲಿ ೩೩೬ ತಂಡಗಳು ಪಾಲ್ಗೊಂಡಿದ್ದವು.
ಇದುವರೆಗೆ ನಡೆದ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಪಳಂಗAಡ ಕುಟುಂಬ ತಂಡ ೫ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕೊಡವ ಹಾಕಿ ಉತ್ಸವದಲ್ಲಿ ದಾಖಲೆ ನಿರ್ಮಿಸಿದೆ. ಕೂತಂಡ ತಂಡವು ನಾಲ್ಕು ಬಾರಿ ಕಲಿಯಂಡ, ಕುಲ್ಲೇಟಿರ, ನೆಲ್ಲಮಕ್ಕಡ ತಂಡಗಳು ಕ್ರಮವಾಗಿ ಮೂರು ಬಾರಿ ಅಂಜಪರವAಡ, ಮಂಡೆಪAಡ, ಕುಪ್ಪಂಡ (ಕೈಕೇರಿ) ತಂಡಗಳು ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ. -ದುಗ್ಗಳ ಸದಾನಂದ