ಮಡಿಕೇರಿ, ಮಾ. ೨೫: ತೆರಿಗೆ ಪಾಲು ನೀಡುವ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕಕ್ಕೆ ಯಾವ ರೀತಿಯಲ್ಲಿಯೂ ಕೇಂದ್ರ ಸರಕಾರದಿಂದ ಅನ್ಯಾಯವಾಗಿಲ್ಲ. ಯು.ಪಿ.ಎ. ಸರಕಾರವಿದ್ದ ೧೦ ವರ್ಷಗಳಿಗೆ ಹೋಲಿಸಿದರೆ ೩ ಪಟ್ಟು ಹೆಚ್ಚು ಅನುದಾನವನ್ನು ಕರ್ನಾಟಕಕ್ಕೆ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರಕಾರ ನೀಡಿದೆ ಎಂದು ರಾಷ್ಟಿçÃಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨ ದಿನಗಳ ಕಾಲ ಮೈಸೂರು-ಕೊಡಗು ಕ್ಷೇತ್ರದಲ್ಲಿ ಸಂಚರಿಸುತ್ತಿದ್ದೇನೆ. ನಮ್ಮ ಸರಕಾರ ಐತಿಹಾಸಿಕ ವಿಕಸಿತ ಕಾರ್ಯಕ್ರಮ ಮಾಡಿದೆೆ. ಈ ಹಿಂದಿನ ಬಿಜೆಪಿ ಶಾಸಕರ ಅವಧಿಯಲ್ಲಿ ಕೊಡಗು ಜಿಲ್ಲೆಗೆ ವಿಶ್ವವಿದ್ಯಾನಿಲಯ, ಮೆಡಿಕಲ್ ಕಾಲೇಜು, ಇಂಜಿನಿಯರಿAಗ್ ಕಾಲೇಜುಗಳು ಸ್ಥಾಪನೆಗೊಂಡಿವೆ. ಜಲಜೀವನ್ ಮಿಷನ್ ಮೂಲಕ ನಲ್ಲಿ ನೀರು ಸಂಪರ್ಕ ಕಲ್ಪಿಸಿದ್ದೇವೆ. ಮಹತ್ತರ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕೊಡಗಿನ ಕಾರ್ಯಕರ್ತರಲ್ಲಿ ಉತ್ಸಾಹ ಇದೆ. ರಾಷ್ಟಿçÃಯವಾದದಡಿ ಮತದಾನ ನಡೆಯುತ್ತದೆ ಎಂಬ ವಿಶ್ವಾಸ ಹೊಂದಿದ್ದೇವೆ ಎಂದರು.

ರಿಟ್ ಅರ್ಜಿ ಹಾಸ್ಯಾಸ್ಪದ

ಬರ ಪರಿಹಾರ ವಿಚಾರದಲ್ಲಿ ಕೇಂದ್ರದ ವಿರುದ್ಧ ರಾಜ್ಯ ಸರಕಾರ ಸಲ್ಲಿಸಿರುವ ರಿಟ್ ಅರ್ಜಿ ಹಾಸ್ಯಾಸ್ಪದ ಎಂದು ಟೀಕಿಸಿದ ಅಗರ್ವಾಲ್, ತಲಾ ವಿತ್ತೀಯ ವಿಕೇಂದ್ರೀಕರಣದ ಆಧಾರದಲ್ಲಿ ೨೦೦೪ ರಿಂದ ೧೪ ರ ಯು.ಪಿ.ಎ. ಸರಕಾರಕ್ಕಿಂತ ೩-೪ ಪಟ್ಟು ಹೆಚ್ಚು ಹಣವನ್ನು ಕರ್ನಾಟಕಕ್ಕೆ ಕಳೆದ ೧೦ ವರ್ಷದ ನರೇಂದ್ರ ಮೋದಿ ನೇತೃತ್ವದ ಸರಕಾರ ನೀಡಿದೆ. ಯುಪಿಎ ಅವಧಿಯಲ್ಲಿ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ರೂ. ೨೨,೯೫೯ ಇದ್ದ ತಲಾ ವಿತ್ತೀಯ, ಬಿಜೆಪಿ ಅವಧಿಯ ೧೦ ವರ್ಷದಲ್ಲಿ ರೂ. ೭೯,೬೫೧ ರಷ್ಟು ನೀಡಲಾಗಿದೆ. ಅದೇ ರೀತಿ ಅಭಿವೃದ್ಧಿಯಲ್ಲಿಯೂ ಅಮೂಲಾಗ್ರ ಬೆಳವಣಿಗೆ ಸಾಧಿಸಿದ್ದೇವೆ. ರೈಲ್ವೆ ಕ್ಷೇತ್ರದಲ್ಲಿ ೫೭೪ ಯೋಜನೆ ಅನುಷ್ಠಾನ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಯದುವಂಶದ ಕೊಡುಗೆ ಮಹತ್ತರ

ಮೈಸೂರು ಭಾಗದಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ಯದುವಂಶದ ಕಾಣಿಕೆ ಅಪಾರವಾಗಿದೆ. ಏಷ್ಯಾದಲ್ಲಿ ಮೊದಲ ವಿದ್ಯುತ್ ಶಕ್ತಿ ಪೂರೈಕೆ ಮೈಸೂರು ಪ್ರಾಂತ್ಯದಲ್ಲಿ ಆಗಿದೆ. ಇದು ರಾಜರ ಕೊಡುಗೆಯಾಗಿದ್ದು. ಮೈಸೂರಿನಲ್ಲಿ ನಡೆದ ಬದಲಾವಣೆಗಳು ಇಡೀ ದೇಶಕ್ಕೆ ಮಾದರಿ. ಇದು ರಾಜವಂಶಸ್ಥರಿAದ ಸಾಧ್ಯವಾಗಿದೆ. ವೈಮಾನಿಕ ಕ್ಷೇತ್ರಕ್ಕೂ ರಾಜವಂಶ ಮುನ್ನುಡಿ ಇಟ್ಟಿತ್ತು. ಅಧುನೀಕರಣ ದೂರದೃಷ್ಟಿಯಿಂದ ಕೆಲಸ ಮಾಡಿದ ಪರಿಣಾಮ ಸರಕಾರ ಮಾಡಬೇಕಿದ್ದ ಕೆಲಸಗಳನ್ನು ರಾಜರು ಸಾಕಾರಗೊಳಿಸಿದ್ದಾರೆ. ನೀರಿನ ಸಮಸ್ಯೆ ತಲೆದೋರಬಾರದೆಂಬ ದೃಷ್ಟಿಯಲ್ಲಿ ಕೆ.ಆರ್.ಎಸ್. ಅಣೆಕಟ್ಟು ನಿರ್ಮಿಸಿ ಇಂದಿಗೂ ಸಮಸ್ಯೆ ಬಾರದಂತೆ ಮಾಡಿದ್ದಾರೆ. ಮೈಸೂರು ರಾಜಮನೆತನದ ವಂಶವಾಯಿಯಲ್ಲಿ ಅಭಿವೃದ್ಧಿ, ಜನಪರತೆ ಇದೆ. ಈ ನಿಟ್ಟಿನಲ್ಲಿ ಯದುವೀರ ಒಡೆಯರ್ ಅವರನ್ನು ಅಭ್ಯರ್ಥಿಯಾಗಿ ಮಾಡಲಾಗಿದೆ. ಯದುವೀರ ಒಡೆಯರ್ ರಾಜ ಗೌರವ ವಿಸರ್ಜಿಸಿ ಸಾಮಾನ್ಯ ಜನರೊಂದಿಗೆ ಬೆರೆತು ಮತ ಕೇಳುತ್ತಿದ್ದಾರೆ. ಬಹುಮತದಿಂದ ಯದುವೀರ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಔರಂಗಜೇಬ್ ಸರಕಾರ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಹೀನಾಯ ಸೋಲು ಕಾಣಲಿದೆ. ಬಿಜೆಪಿ ೨೮ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಬೆಂಗಳೂರಿನಲ್ಲಿ ನೀರಿಲ್ಲದ ಪರಿಸ್ಥಿತಿಗೆ ಕಾಂಗ್ರೆಸ್ ಸರಕಾರ ಕಾರಣ. ತಮಿಳುನಾಡು ಡಿಎಂಕೆ ಪಕ್ಷದ ಒತ್ತಡದಿಂದ ಮೇಕೆದಾಟು ಯೋಜನೆಯನ್ನು ರಾಜ್ಯದಲ್ಲಿ ಸ್ಥಗಿತಗೊಳಿಸಲಾಗಿದೆ. ರಾಹುಲ್ ಗಾಂಧಿ ಒತ್ತಡದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಬರಗಾಲ ಎಂದು ಕೃತಕವಾಗಿ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಇವೆಲ್ಲ ಕರ್ನಾಟಕ ಜನತೆಗೆ ತಿಳಿದಿದೆ. ರಾಜ್ಯದಲ್ಲಿರುವುದು ಸೀಮಿತಿ ಧರ್ಮಕ್ಕೆ ಸೇರಿದ ಸರಕಾರ. ರಾಜ್ಯಸಭಾ ಸದಸ್ಯ ಬೆಂಬಲಿಗರು ಪಾಕಿಸ್ತಾನ ಜಿಂದಬಾAದ್ ಘೋಷಣೆ ಕೂಗುತ್ತಾರೆ, ಕೆಫೆಯಲ್ಲಿ ಬಾಂಬ್ ಸ್ಫೋಟವಾಗುತ್ತದೆ. ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಹಲ್ಲೆ ಮಾಡುತ್ತಾರೆ ಎಂದು ಟೀಕಿಸಿದ ಅವರು, ಜಾತಿ ಆಧಾರದಲ್ಲಿ ಮತದಾನವನ್ನು ಜನತೆ ಮಾಡುವುದಿಲ್ಲ ಎಂದರು.