ಶನಿವಾರಸAತೆ, ಮಾ. ೨೬: ಪಟ್ಟಣದ ಬಲಿಜ ಸಮುದಾಯದವರು ಶ್ರೀಯೋಗಿ ನಾರಾಯಣ ಜಯಂತಿ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಕಾರ್ಯಕ್ರಮವನ್ನು ಸಮುದಾಯದ ಪ್ರಮುಖ ಟಿ.ಆರ್.ಜಗದೀಶ್ ಉದ್ಘಾಟಿಸಿದರು. ನಂತರ ಕೈವಾರ ತಾತಾಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು. ವಾಣಿಜ್ಯೋದ್ಯಮಿ ಶೋಭಾ ಶಾಂತರಾಜ್ ಯೋಗಿ ನಾರಾಯಣರ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದರು. ಈ ಸಂದರ್ಭ ವಾಣಿಜ್ಯೋದ್ಯಮಿ ದಿವ್ಯಾ ರಮೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಮುದಾಯದ ಮುಖಂಡರಾದ ಗೀತಾ ಹರೀಶ್, ನಾರಾಯಣ್, ಯೋಗೇಶ್, ಕನಸು ಮಂಜುನಾಥ್, ರಮೇಶ್, ಹರೀಶ್, ಮಂಜು, ನಿವೃತ್ತ ಸೈನಿಕ ನಾಗರಾಜ್, ಇತರರು ಹಾಜರಿದ್ದರು.