ಕಣಿವೆ, ಮಾ. ೨೬: ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದ ಪುರಾಣ ಪ್ರಸಿದ್ಧ ದೇವಾಲಯ ಶ್ರೀರಾಮಲಿಂಗೇಶ್ವರ ಸನ್ನಿಧಿಯಲ್ಲಿ ಪೂರ್ವಾಭಿ ಮುಖವಾಗಿ ಹರಿದಿರುವ ಕಾವೇರಿ ನೀರಿಲ್ಲದೇ ಭಣಗುಡುತ್ತಿತ್ತು. ಇದೀಗ ಹಾರಂಗಿ ಜಲಾಶಯ ದಿಂದ ನದಿಯ ಮೂಲಕ ನೀರನ್ನು ಹರಿಸಿದ ಪರಿಣಾಮ ದೇವಾಲಯದ ಮುಂಬದಿಯ ನದಿ ಮೈದುಂಬಿ ಕೊಂಡು ಹರಿಯುತ್ತಿದೆ.
ವಿಶಾಲ ಆವರಣ ಅಂದರೆ ನೀರಿಲ್ಲದೇ ಕಲ್ಲು ಬಂಡೆಗಳು ಹಾಗೂ ನಡುಗಡ್ಡೆಗಳಿಂದ ಕೂಡಿದ್ದ ನದಿಯೊಳಗೆ ಹಾರಂಗಿ ನೀರು ಬಂದು ಮುಂದೆ ಸಾಗುತ್ತಿರುವ ಚಿತ್ರಣ ನೋಡುಗರ ಕಣ್ಣು ತಂಪಾಗಿಸಿದೆ.
ಜೊತೆಗೆ ನದಿ ಪಾತ್ರದ ಎರಡೂ ಜಿಲ್ಲೆಗಳ ಗಡಿ ಭಾಗದ ಹೈನುಗಾರ ಕೃಷಿಕರ ಮನವೂ ಸೊಂಪಾಗಿಸಿದೆ.
ಏಕೆAದರೆ, ಜಾನುವಾರುಗಳಿಗೆ ಕುಡಿಯುವ ನೀರು ಕೂಡ ಸಿಗದಂತಹ ದುಸ್ಥಿತಿಗೆ ಕಾವೇರಿ ತೆರಳುವ ಮುನ್ನಾ ನೀರಾವರಿ ಇಲಾಖೆ ಅಧಿಕಾರಿಗಳು ಹಾರಂಗಿಯ ನೀರನ್ನು ಹರಿಸುತ್ತಿರುವುದು ರೈತಾಪಿಗಳಲ್ಲಿ ಸಂತಸ ಉಂಟುಮಾಡಿದೆ.