ಮಡಿಕೇರಿ, ಮಾ. ೨೬: ಬಿಡುವಿಲ್ಲದ ಜೀವನದಲ್ಲಿ ಪ್ರಸ್ತುತ ದಿನಗಳಲ್ಲಿ ಎಲ್ಲರಿಗೂ ಎಲ್ಲ ಕೆಲಸಗಳು ಸುಲಭದಲ್ಲೇ ಆಗಬೇಕು. ಓದಲು, ಬರೆಯಲು ಕೂಡ ಸಮಯವಿಲ್ಲದ ಮಂದಿ ಎಲ್ಲವನ್ನೂ ‘ಗೂಗಲ್’ ನಲ್ಲಿ ಹುಡುಕಿ ಕೊಳ್ಳುತ್ತಾರೆ. ಇಂಗ್ಲಿಷ್ ನಲ್ಲಿ ಇರುವುದನ್ನು ಕನ್ನಡಕ್ಕೆ ಭಾಷಾಂತರ ಮಾಡಿಕೊಳ್ಳುತ್ತಾರೆ.
ಆದರೆ, ಅದ ರಿಂದಾಗುವ ಅವಾಂತರಗಳನ್ನು ಮಾತ್ರ ಗಮನಿಸುವುದೇ ಇಲ್ಲ. ಇದೀಗ ಸರಕಾರ ಎಲ್ಲಾ ನಾಮಫಲಕಗಳಲ್ಲಿ ಶೇ. ೬೦ ರಷ್ಟು ಕನ್ನಡ ಪದಗಳಿರಬೇಕೆಂದು ಆದೇಶ ಹೊರಡಿಸಿದ್ದರಿಂದ ಎಲ್ಲಾಕಡೆ ಕನ್ನಡ ಕಂಡು ಬರುತ್ತಿದೆ. ಕನ್ನಡಕ್ಕಾಗಿ ಅಂಗಡಿಯೊAದರಲ್ಲಿ ‘ಇಂಗ್ಲಿಷ್ನಲ್ಲಿದ್ದ ಬಾದಾಮಿ ಶೇಕ್’ ಎಂಬುದನ್ನು ಭಾಷಾಂತರಿಸಿದ್ದು, ಅದು ‘ಬಾದಾಮಿ ಅಲ್ಲಾಡಿಸಿ’ ಎಂದಾಗಿದೆ. ಎಂತಹ ಆಭಾಸವಲ್ಲವೇ...?
(ವಾಟ್ಸಾö್ಯಪ್)