ಕಣಿವೆ, ಮಾ. ೨೬: ಪ್ರಮುಖ ಪ್ರವಾಸಿ ತಾಣ ದುಬಾರೆ ಕಾವೇರಿ ತೀರ ನೀರಿಲ್ಲದೇ ಬಣಗುಡುತ್ತಿದೆ.
ನೀರಿಲ್ಲದ ನದಿಯೊಳಗೆ ಸಾಕಾನೆ ಶಿಬಿರಕ್ಕೆ ತೆರಳುವ ಮಂದಿ ಕಾಲ್ನಡಿಗೆಯಲ್ಲಿ ಧಾವಿಸುತ್ತಿದ್ದಾರೆ. ಮಳೆ ಬರದೇ ಪರಿಸ್ಥಿತಿ ಹೀಗೆಯೇ ಮುಂದು ವರೆದರೆ ಸಾಕಾನೆಗಳ ಕುಡಿವ ನೀರಿಗೂ ಸಂಚಕಾರ ಬಂದರೂ ಅಚ್ಚರಿಯಿಲ್ಲ.
ಕಳೆದ ಹದಿನೈದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ದುಬಾರೆ ನದಿಯ ತೀರ ಖಾಲಿಯಾಗಿದೆ. ಇಲ್ಲಿನ ನದಿ ದಂಡೆಯಲ್ಲಿರುವ ಐತಿಹಾಸಿಕ ನಂಜುAಡೇಶ್ವರ ದೇವಾಲಯದ ವಾರ್ಷಿಕ ಪೂಜೋತ್ಸವ ಹಾಗೂ ತೆಪ್ಪೋತ್ಸವ ಯುಗಾದಿ ಬಳಿಕ ಜರುಗಲಿದ್ದು ಮಳೆ ಬಂದು ನೀರು ಹರಿದರೆ ದೇವತಾ ಕಾರ್ಯಕ್ಕೆ ಅನುವಾಗಬಲ್ಲದು. ನದಿಯೊಳಗಿನ ಜಲಚರ ಗಳಿಗೂ ಸಂಚಕಾರ ಉಂಟಾಗಿದ್ದು, ಮೀನು ಮರಿಗಳು ಹಾಗೂ ಏಡಿಗಳಿಗೆ ನದಿಯಲ್ಲಿ ಅಲ್ಲಲ್ಲಿ ನಿಂತ ನೀರಿನಲ್ಲಿ ಪೂರಕ ವಾದ ಆಮ್ಲಜನಕ ದೊರಕದೇ ದಿನೇ ದಿನೇ ಒದ್ದಾಡಿ ಒದ್ದಾಡಿ ಅಸು ನೀಗುತ್ತಿವೆ.
- ಕೆ.ಎಸ್. ಮೂರ್ತಿ