ಸಿದ್ದಾಪುರ, ಮಾ. ೨೫: ಕುಂಜಿಲ ಪೈನರಿ ಕೆಎಸ್ಎ ಗಲ್ಫ್ ಕಮಿಟಿ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ರಿಯಾದ್ನ ಅಲ್ಮಾಸ್ ಆಡಿಟೋರಿಯಂನಲ್ಲಿ ನಡೆಯಿತು.
ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಅದೀನದ ರಿಯಾದ್ನಲ್ಲಿ ಕಾರ್ಯಾಚರಿಸುತ್ತಿರುವ ಪ್ರವಾಸಿಗಳ ಒಕ್ಕೂಟದ ಕೆಎಸ್ಎ ಗಲ್ಫ್ ಕಮಿಟಿಯ ಉಪಾಧ್ಯಕ್ಷ ಕುಂಡAಡ ಸರ್ಫುದ್ದೀನ್ ಅಧ್ಯಕ್ಷತೆಯಲ್ಲಿ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಂಸ ಮುಸ್ಲಿಯರ್ ಜೋಕಂಡಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.
ಕುಂಜಿಲ ಪೈನರಿ ಜುಮ್ಮ ಮಸೀದಿಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಿರುವ ನಿಸಾರ್ ಅಹ್ಸನಿ ಉಸ್ತಾದ್ ಕಕ್ಕಡಿಪುರ ಇವರನ್ನ ಸನ್ಮಾನಿಸಿ ಗೌರವಿಸಲಾಯಿತು. ವಾರ್ಷಿಕ ಸ್ವಲಾತ್ ನಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
ಈ ಸಂದರ್ಭ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಜೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರ್, ಸಾಂತ್ವನ ಸಮಿತಿ ಕಾರ್ಯದರ್ಶಿ ಅಶ್ರಫ್ ನೀರು ಕಟ್ಟೆ, ಪ್ರಮುಖರಾದ ಹಂಸ ಮುಸ್ಲಿಯಾರ್ ಪೊನ್ನಂಪೇಟೆ, ಜೈನುದ್ದೀನ್ ಮುಸ್ಲಿಯರ್ ಚೋಕಂಡಳ್ಳಿ, ಸಾಮಾಜಿಕ ಕಾರ್ಯಕರ್ತ ನಜೀರ್ ಗುಂಡಿಗೆರೆ, ಷಂಶುದ್ದೀನ್ ತಕ್ಕ ಪಳ್ಳಿ ಕೊಟ್ಟಮುಡಿ, ಮುಸ್ತಾಕ್ ಅಹಮದ್ ಸಕಲೇಶಪುರ, ಹಬೀಬುಲ್ಲಾ ಉಪ್ಪಿನಂಗಡಿ, ಪುದರೆಲ್ ಮಜೀದ್, ನೌಶಾದ್ ಕುಂಡAಡ, ಮಹರೂಫ್ ವಯಕೋಲ್, ಅಶ್ರಫ್ ವಯಕೋಲ್, ಸಮಿತಿಯ ಮಾಜಿ ಅಧ್ಯಕ್ಷ ಮೊಹಮ್ಮದ್ ಕುಂಜಿಲ, ಅಬ್ದುಲ್ ಸಲಾಂ ಬಾರಿಕೆ,ಮುಸ್ತಾಫಾ ಝೈನಿ ಕಂಬಿಬಾಣೆ,ರಶೀದ್ ಮಾದಪಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.